ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹189ಕ್ಕೆ 28 ದಿನ ಸೇವೆ, ಅಗ್ಗದ ಪ್ಲಾನ್ ಬಿಡುಗಡೆ
28 ದಿನಗಳ ಸೇವಾ ವ್ಯಾಲಿಡಿಟಿ ಬೇಕಾದವರಿಗೆ ಜಿಯೋ ₹189 ಯೋಜನೆ ಉತ್ತಮ ಆಯ್ಕೆಯಾಗಬಹುದು. ಕರೆ, ಎಸ್‌ಎಂಎಸ್ ಹಾಗೂ ಮೂಲಭೂತ ಡೇಟಾ ಸೌಲಭ್ಯಗಳೊಂದಿಗೆ ಈ ಪ್ಲಾನ್ ಗ್ರಾಹಕರನ್ನು ಸೆಳೆಯುತ್ತಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ದರದ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಜಿಯೋ, ₹189 ಪ್ರೀಪೇಯ್ಡ್ ಪ್ಲಾನ್ ಮೂಲಕ ಮತ್ತೆ ಗಮನ ಸೆಳೆದಿದೆ. ಹೆಚ್ಚು ಡೇಟಾ ಅಗತ್ಯವಿಲ್ಲದ ಬಳಕೆದಾರರಿಗೆ ಈ ಯೋಜನೆ ಉಪಯುಕ್ತವಾಗಬಹುದು.
₹189 ರೀಚಾರ್ಜ್ ಮಾಡಿದರೆ 28 ದಿನಗಳ ಸೇವಾ ಅವಧಿ ಸಿಗುತ್ತದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳ ಜೊತೆಗೆ 300 ಎಸ್‌ಎಂಎಸ್ ಮತ್ತು ಒಟ್ಟು 2GB ಡೇಟಾ ಲಭ್ಯವಾಗುತ್ತದೆ.
ಅನೇಕ ಬಳಕೆದಾರರು ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿರಿಸಲು ಮಾತ್ರ ಕಡಿಮೆ ವೆಚ್ಚದ ಯೋಜನೆ ಹುಡುಕುತ್ತಾರೆ. ಅಂತಹವರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಡೇಟಾ ಮಿತಿ ಮುಗಿದ ನಂತರವೂ ಇಂಟರ್‌ನೆಟ್ ಸೇವೆ ಮುಂದುವರಿಯುತ್ತದೆ, ಆದರೆ ವೇಗ ಕಡಿಮೆಯಾಗುತ್ತದೆ.
ಈ ಯೋಜನೆಯೊಂದಿಗೆ ಜಿಯೋ ಟಿವಿ ಮತ್ತು ಜಿಯೋ AI ಕ್ಲೌಡ್ ಸೇವೆಗಳ ಉಚಿತ ಪ್ರವೇಶವೂ ಸಿಗುತ್ತದೆ. ಹೆಚ್ಚುವರಿ ಡೇಟಾ ಬೇಕಾದವರು ಪ್ರತ್ಯೇಕ ಡೇಟಾ ವೌಚರ್ ಖರೀದಿಸಬೇಕಾಗುತ್ತದೆ.
ಹೆಚ್ಚು ಇಂಟರ್‌ನೆಟ್ ಬಳಸುವವರು ₹199 ಪ್ಲಾನ್ ಆಯ್ಕೆ ಮಾಡಬಹುದು. ಅದರಲ್ಲಿ ದಿನಕ್ಕೆ 1.5GB ಡೇಟಾ ಸಿಗುತ್ತದೆ. ಆದರೆ ವ್ಯಾಲಿಡಿಟಿ 18 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ.



