ಐಪೋನ್ ಖರೀದಿ ಮಾಡಲು ಯೋಚಿಸುತ್ತಿದ್ದವರಿಗೆ ಇದು ಒಳ್ಳೆಯ ಅವಕಾಶ. ಯಾಕೆಂದ್ರೆ ಐಪೋನ್ ಮೊಬೈಲ್‌ಗಳ ಮೇಲೆ ಫ್ಲಿಪ್‌ಕಾರ್ಟ್ (Flipkart) ಭಾರೀ ಡಿಸ್ಕೌಂಟ್ ಘೋಷಣೆ ಮಾಡಿದೆ. ಸೆಪ್ಟೆಂಬರ್ 12ರಂದು ನಡೆದ ಆಫಲ್ ಈವೆಂಟ್‌ನಲ್ಲಿ (Apple Events) ಹೊಸ ಐಪೋನ್ 15 (Apple iPhone 15) ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಹಳೆಯ ಮಾದರಿಯ ಐಪೋನ್ 11 (iPhone 11) ಗಳ ಮೇಲೆ ಬಾರೀ ರಿಯಾಯಿತ ನೀಡಲಾಗುತ್ತಿದೆ.

ಐಫೋನ್ 11 ಪ್ರೀಮಿಯಂ ಸ್ಮಾರ್ಟ್‌ಫೋನ್ ಇತರ ಪೋನ್‌ಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದು, ಅತ್ಯುತ್ತಮ ಫೀಚರ್ಸ್ ಒಳಗೊಂಡಿದೆ. ಆಪ್ ಐಪೋನ್ 11 (Apple iPhone 11) ಅನ್ನು ಫ್ಲಿಪ್‌ಕಾರ್ಟ್‌ನಿಂದ 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಐಫೋನ್ 11 ಮಾರುಕಟ್ಟೆ ಬೆಲೆ 43,900 ರೂ. ಆದಾಗ್ಯೂ, ಇದು ಫ್ಲಿಪ್‌ಕಾರ್ಟ್‌ನಲ್ಲಿ 37,999 ರೂಗಳಲ್ಲಿ ಲಭ್ಯವಿದೆ. ಫೋನ್ ಖರೀದಿಸಲು ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ 1,900 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಫೋನ್ ಬೆಲೆ 36,099 ರೂ.
ಇದನ್ನೂ ಓದಿ : Apple IPhone 15: ಶೀಘ್ರದಲ್ಲೇ ಐಪೋನ್ 15 ಬಿಡುಗಡೆ : ಭಾರತದಲ್ಲೇ ಸಿದ್ದವಾದ ಈ ಐಪೋನ್ ಬೆಲೆ ಎಷ್ಟು ?
ಐಫೋನ್ 11 (Apple iPhone 11 ) ಎಕ್ಸ್ಚೇಂಜ್ ಆಫರ್:
Apple iPhone 11 ಖರೀದಿಯ ಮೇಲೆ 33,100 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ನೀಡಲಾಗುತ್ತಿದೆ. ಈ ಆಫರ್ ಮೂಲಕ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮಾಡಿ ಮತ್ತು ನಿಮಗೆ ಇಷ್ಟು ರಿಯಾಯಿತಿ ಸಿಗಲಿದೆ. ಆದರೆ, ಫೋನ್ ಇತ್ತೀಚಿನದಾಗಿರಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು. ಹೀಗಾಗಿ ಸಂಪೂರ್ಣ ರಿಯಾಯಿತಿ ಪಡೆಯಲು ಸಾಧ್ಯವಾದರೆ. ಆಪಲ್ ಐಪೋನ್ 11 ಅನ್ನು ಕೇವಲ 2,999 ರೂ.ಗೆ ಖರೀದಿ ಮಾಡಬಹುದಾಗಿದೆ.
ಐಫೋನ್ 11 (Apple iPhone 11) ವಿಶೇಷತೆ :
Apple iPhone 11 6.1 ಇಂಚಿನ ಪರದೆಯನ್ನು ಹೊಂದಿದೆ. ಇದು Apple ನ A13 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಲೆನ್ಸ್‌ಗಳೊಂದಿಗೆ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿಗೆ ನೀವು 4K ಗುಣಮಟ್ಟದಲ್ಲಿ ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ಇದು ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಮತ್ತು ಸ್ಮಾರ್ಟ್ HDR ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

iPhone 15 ಸರಣಿಯ ಪೂರ್ವ-ಬುಕಿಂಗ್ ಆರಂಭ :
ಭಾರತದಲ್ಲಿ ಹೊಸದಾಗಿ ಬಿಡುಗಡೆ ಆಗಿರುವ ಐಪೋನ್ (iPhone 15 ) ಮೊಬೈಲ್‌ಗಳು ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ. ಐಪೋನ್ ಸರಣಿಯ iPhone 15, iPhone 15 Plus, iPhone 15 Pro ಅಥವಾ iPhone 15 Pro Max ಖರೀದಿಸಲು ಆಸಕ್ತಿ ಹೊಂದಿರುವ ಭಾರತೀಯರು. ಬುಕ್ಕಿಂಗ್ ಮಾಡಬಹುದಾಗಿದೆ.

ಐಪೋನ್ 15 (iPhone 15) ಬೆಲೆ :
ಪ್ರೀ ಬುಕ್ಕಿಂಗ್ ಮಾರಾಟವು ಅಧಿಕೃತವಾಗಿ ಸೆಪ್ಟೆಂಬರ್ 22 ರಂದು ನಡೆಯಲಿದೆ. ಐಪೋನ್ 15 (iPhone 15) 128GB ಸಾಮರ್ಥ್ಯದ ಮೊಬೈಲ್ ಬೆಲೆ 79,900 ರೂ.ಗಳಿಂದ ಆರಂಭಗೊಳ್ಳುತ್ತದೆ. ಇನ್ನು 256GB ಮಾದರಿಯ ಮೊಬೈಲ್ 89,900 ರೂ., ಹಾಗೂ 512GB ಆವೃತ್ತಿ ಮೊಬೈಲ್‌ಗಳು 1,09,900 ರೂಪಾಯಿಗಳ ಬೆಲೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ : 15 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ 5G ಸ್ಮಾರ್ಟ್ ಪೋನ್
ಐಪೋನ್ 15 ಪ್ಲಸ್ (iPhone 15 Plus ):
ಐಪೋನ್ 15 ಪ್ಲಸ್ ಮೊಬೈಲ್ 128GB ಸಾಮರ್ಥ್ಯದಿಂದ ಆರಂಭಗೊಳ್ಳುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ 89,900 ರೂ. ಮತ್ತು 256GB ರೂಪಾಂತರದ ಮೊಬೈಲ್ ಬೆಲೆ ರೂ 99,900 ಆಗಿದೆ. ಅಲ್ಲದೇ ಐಫೋನ್‌ಗೆ 512GB ಮಾದರಿಯ ಮೊಬೈಲ್ ಬೆಲೆ 1,19,900 ರೂ.ಗೆ ಮಾರಾಟವಾಗಲಿದೆ.

ಐಪೋನ್ 15 ಪ್ಲಸ್ ಪ್ರೋ (iPhone 15 Pro ):
ಭಾರತದಲ್ಲಿ ಐಪೋನ್ 15 ಪ್ಲಸ್ ಪ್ರೋ 128GB ಮಾದರಿಯ ಮೊಬೈಲ್ 1,34,900 ರೂ. ಬೆಲೆಯೊಂದಿಗೆ ಆರಂಭಗೊಳ್ಳುತ್ತದೆ. ಇನ್ನು 256GB ರೂಪಾಂತರವು 1,44,900 ರೂ. ಹಾಗೂ 512GB ಮಾದರಿಯ ಮೊಬೈಲ್ ರೂ.1,64,900, ಅಲ್ಲದೇ 1TB ಮಾದರಿಯ ಮೊಬೈಲ್ 1,84,900ರೂ. ಗೆ ಖರೀದಿಸಬಹುದು.
ಐಪೋನ್ 15 ಪ್ರೋ ಮ್ಯಾಕ್ಸ್ (iPhone 15 Pro Max ) :
ಐಪೋನ್ 15 ಪ್ರೋ ಮ್ಯಾಕ್ಸ್ ಆಪ್‌ನ ಅತ್ಯಂತ ಪ್ರೀಮಿಯಂ ಮೊಬೈಲ್ ಪೋನ್. ಐಪೋನ್ 15 ಪ್ರೋ ಮ್ಯಾಕ್ಸ್ (
iPhone 15 Pro Max) 256GB ಮಾದರಿಯ ಮೊಬೈಲ್ ಬೆಲೆ 1,59,900 ರೂ., ಇನ್ನು 512GB ಮಾದರಿಯ ಮೊಬೈಲ್ 1,79,900 ರೂ. ಹಾಗೂ 1TB ಮಾದರಿಯ ಮೊಬೈಲ್ 1,99,900ರೂ.ಗೆ ಲಭ್ಯವಿದೆ.

ಇದನ್ನೂ ಓದಿ : Xiaomi Redmi Note 13 Pro :ಅತ್ಯಂತ ಕಡಿಮೆ ಬೆಲೆಗೆ 200 MP ಕ್ಯಾಮರಾ ಪೋನ್ : Iphone ಮೀರಿಸುತ್ತೆ ರೆಡ್‌ಮೀ 13 ಪ್ರೋ
ಐಫೋನ್ 15 ಸರಣಿಯ ಪ್ರೀ ಬುಕ್ಕಿಂಗ್ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಆಪಲ್ ಇಂಡಿಯಾ ಸ್ಟೋರ್‌ನಲ್ಲಿ ಬಾರೀ ರಿಯಾಯಿತಿ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಅಲ್ಲದೇ ಎಕ್ಸ್‌ಚೇಂಜ್ ಮಾಡುವುದಾದ್ರೆ ಫ್ಲಿಪ್‌ಕಾರ್ಟ್‌ನಲ್ಲಿ, iPhone 15 ಮತ್ತು iPhone 15 Plus HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂಪಾಯಿಗಳ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ.
ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಹೊಂದಿರುವ ಜನರು ಇಎಂಐ ವಹಿವಾಟುಗಳನ್ನು ಆರಿಸಿಕೊಂಡರೆ ಈ ಕೊಡುಗೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. Flipkart iPhone 15 Pro ಮತ್ತು iPhone 15 Pro Max ಖರೀದಿಯ ಮೇಲೆ ಯಾವುದೇ ಡಿಸ್ಕೌಂಟ್ ಘೋಷಣೆ ಮಾಡಿಲ್ಲ. ಇನ್ನು ಆಪಲ್‌ನ ಅಧಿಕೃತ ಆನ್‌ಲೈನ್‌ಸ್ಟೋರ್‌ನಿಂದ ಐಪೋನ್ ಖರೀದಿ ಮಾಡಬಹುದಾಗಿದೆ. ಆಪಲ್ ತನ್ನ ಹೊಸ ಐಪೋನ್ 15 Pro ಮತ್ತು ಐಪೋನ್ 15 Pro Max ಮಾದರಿಗಳ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದೆ.

ಅಲ್ಲದೇ ಎಚ್‌ಡಿಎಫ್‌ಸಿ (HDFC Bank) ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 6,000 ರಿಯಾಯಿತಿಯನ್ನು ಆನಂದಿಸಬಹುದು, ಆದರೆ ಪ್ರೊ ಅಲ್ಲದ ಮಾದರಿಗಳು ರೂ 5,000 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಹೊಂದಿವೆ. ಕಂಪನಿಯು ಹಳೆಯ ಐಫೋನ್ ಮಾದರಿಗಳಲ್ಲಿ ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ, iPhone 14 ಮತ್ತು 14 Plus ಗೆ 4,000 ರೂ., iPhone 13 ಗೆ 3,000 ಮತ್ತು iPhone SE ಗೆ 2,000 ರೂ. ರಿಯಾಯಿತಿ ನೀಡುತ್ತಿದೆ.

ಇಷ್ಟೇ ಅಲ್ಲದೇ ಹೆಚ್ಚುವರಿಯಾಗಿ ಆಪಲ್ ಟ್ರೇಡ್-ಇನ್ ಆಯ್ಕೆಗಳನ್ನು ನೀಡುತ್ತದೆ. ಖರೀದಿದಾರರು ಹೊಸ ಐಪೋನ್ ಖರೀದಿ ಮಾಡುವಾಗ ತಮ್ಮ ಹಳೆಯ ಮೊಬೈಲ್‌ಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ವಿನಿಮಯದ ವೇಳೆಯಲ್ಲಿ ರೂ 55,700 ವರೆಗೆ ಕ್ರೆಡಿಟ್ ರಿಯಾಯಿತಿ ದೊರೆಯಲಿದೆ.
ಆದರೆ ಹಳೆಯ ಪೋನ್‌ನ ಗುಣಮಟ್ಟದ ಆಧಾರದ ಮೇಲೆ ಮೊಬೈಲ್ ಬೆಲೆಯನ್ನು ಲೆಕ್ಕ ಹಾಕಲಾಗುತ್ತದೆ. ಐಪೋನ್ ಬುಕ್ ಮಾಡುವ ಮೊದಲು ಎಲ್ಲವನ್ನೂ ಒಮ್ಮೆ ಲೆಕ್ಕಹಾಕಿದ ಮೇಲೆ ಪ್ರೀ ಬುಕ್ಕಿಂಗ್ ಮಾಡುವುದು ಒಳಿತು.
Apple IPhone 15 Ready To Launch First Made In India IPhone Price Feature. iPhone 15 Pro Max iPhone 15 Pro iPhone 15 Plus iPhone 15 Big Discount In Flipkart