ಭಾರತಕ್ಕೆ ಬಂದ ಆಪಲ್‌ನ ಮೊದಲ ಬಜೆಟ್‌ ಫ್ರೆಂಡ್ಲೀ ಲ್ಯಾಪ್‌ಟಾಪ್‌ ಮ್ಯಾಕ್‌ಬುಕ್‌ ನಿಯೋ: ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ

ಆಪಲ್‌ ಇದುವರೆಗಿನ ತನ್ನ ಅತ್ಯಂತ ಕಡಿಮೆ ಬೆಲೆಯ ಮ್ಯಾಕ್‌ಬುಕ್‌ ಅನ್ನು ಬಾರತದಲ್ಲಿ ಬಿಡುಗಡೆಮಾಡಿದೆ. ಮ್ಯಾಕ್‌ಬುಕ್‌ ನಿಯೋ ಎಂಬ ಹೆಸರಿನಿಂದ ಬಿಡುಗಡೆಯಾಗಿರುವ ಇದರ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆಗಳ ಬಗ್ಗೆ ಇಲ್ಲಿದೆ ಓದಿ.

apple macbook neo: ಆಪಲ್‌ ಅಧಿಕೃತವಾಗಿ ಬಜೆಟ್‌ ಫ್ರೆಂಡ್ಲಿ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ದಶಕಕ್ಕೂ ಹೆಚ್ಚು ಕಾಲ ದುಬಾರಿಯ ಲ್ಯಾಪ್‌ಟಾಪ್‌ಗಳನ್ನೇ ಮಾರುಕಟ್ಟೆಗೆ ತರುತ್ತಿದ್ದ ಆಪಲ್‌, ಮ್ಯಾಕ್‌ಬುಕ್‌ ನಿಯೋ ಬಿಡುಗಡೆ ಮಾಡುವ ಮೂಲಕ ಬಜೆಟ್ ಬಗ್ಗೆ ಯೋಚಿಸುವ ಗ್ರಾಹಕರಿಗೆ ಸಂತಸ ನೀಡಿದೆ. ಆಪಲ್‌ ಮ್ಯಾಕ್‌ಬುಕ್‌ ನಿಯೋದ ಆರಂಭಿಕ ಬೆಲೆಯನ್ನು 69,900 ರೂ. ನಿಗದಿಪಡಿಸಿದೆ. ಇದರಿಂದ ಜನಪ್ರಿಯ ಆಪಲ್‌ ಲ್ಯಾಪ್‌ಟಾಪ್‌ ಹೊಂದುವ ಕನಸು ಕಾಣುವವರಿಗೆ ಉತ್ತಮ ಅವಕಾಶವಾಗಿದೆ. ಈ ಬಿಡುಗಡೆಯ ಸಂದರ್ಭದಲ್ಲಿಯೇ ಆಪಲ್‌ ತನ್ನ ಮತ್ತೊಂದು ಲ್ಯಾಪ್‌ಟಾಪ್‌ ಮ್ಯಾಕ್‌ಬುಕ್‌ ಏರ್ ಅನ್ನು ಹೊಸ ನವೀಕರಣಗಳೊಂದಿಗೆ 1,19,900 ರೂ. ಗಳಲ್ಲಿ ಬಿಡುಗಡೆಮಾಡಿದೆ. ಆಪಲ್‌ ವಿದ್ಯಾರ್ಥಿಗಳಿಗೆ ಹಾಗೂ ಗೃಹೋಪಯೋಗಕ್ಕಾಗಿ ಬಳಸುವವರನ್ನು ಗಮನದಲ್ಲಿಟ್ಟುಕೊಂಡು ಮ್ಯಾಕ್‌ಬುಕ್‌ ನಿಯೋ ಅನ್ನು ಮಾರುಕಟ್ಟೆಗೆ ತಂದಿದೆ. ಈಗ ಆಪಲ್‌ ಕೂಡಾ ಆಸುಸ್‌, ಎಚ್‌ಪಿ , ಕ್ರೋಮ್‌ಬುಕ್‌ ಹಾಗೂ ವಿಂಡೋಸ್‌ ಲ್ಯಾಪ್‌ಟಾಪ್‌ಗಳೊಂದಿಗೆ ನೇರವಾಗಿ ಸ್ಪರ್ಧಗೆ ಇಳಿಯಲಿದೆ. ಆಪಲ್‌ನ ಹೊಸ ಬಜೆಟ್‌ ಫ್ರೆಂಡ್ಲಿ ಲ್ಯಾಪ್‌ಟಾಪ್‌ ಮ್ಯಾಕ್‌ಬುಕ್‌ ನಿಯೋ ದ ವೈಶಿಷ್ಟ್ಯದ ಬಗ್ಗೆ ತಿಳಿಯೋಣ.

ಆಪಲ್‌ ಮ್ಯಾಕ್‌ಬುಕ್‌ ನಿಯೋ ವೈಶಿಷ್ಟ್ಯ

ಮ್ಯಾಕ್‌ಬುಕ್‌ ನಿಯೋ ಕೇವಲ ಬಜೆಟ್‌ ಫ್ರಂಡ್ಲಿ ಅಷ್ಟೇ ಆಗಿಲ್ಲ. ಅದು ವರ್ಣರಂಜಿತವಾಗಿಯೂ ಇದೆ. ಹೇಗೆಂದರೆ ಆಪಲ್‌ ಐಮ್ಯಾಕ್ ಮತ್ತು ಐಪ್ಯಾಡ್‌ ಏರ್‌ ಪ್ಲೇಬುಕ್‌ಗಳಿಂದ ಪೇಜ‌್ಗಳನ್ನು ಎರವಲು ಪಡೆದುಕೊಂಡಿದ್ದರಿಂದ ಇಂಡಿಗೊ, ಸಿಟ್ರಸ್‌, ಬ್ಲಶ್ ಮತ್ತು ಕ್ಲಾಸಿಕ್‌ ಸಿಲ್ವರ್‌ ಜೊತೆಗೆ ರೋಮಾಂಚಕ ಬಣ್ಣಗಳಲ್ಲಿ ನಿಯೋವನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಬೆಲೆ ಕಡಿಮೆಯಾದರೂ ಪ್ರೀಮಿಯಂ ಲುಕ್‌ ನೀಡುತ್ತದೆ. ನಯವಾದ, ಬಾಳಿಕೆ ಬರುವ ಮರುಬಳಕೆಯ ಅಲ್ಯೂಮಿಯಂ ಕವರ್‌ ಮತ್ತು ಫ್ಯಾನ್‌ ರಹಿತ ವಿನ್ಯಾಸವು ಇದನ್ನು ಮ್ಯಾಕ್‌ಬುಕ್‌ ಏರ್‌ನಂತಯೇ ಅನುಭವ ನೀಡುತ್ತದೆ. 13 ಇಂಚಿನ ಲಿಕ್ವಿಡ್‌ ರೆಟಿನಾ ಡಿಸ್ಪ್ಲೇಯ 2408 X 1506 ಪಿಕ್ಸೆಲ್‌ ರೆಸಲ್ಯೂಷನ್‌ ಮತ್ತು 500 ನಿಟ್ಸ್‌ ಗರಿಷ್ಠ ಹೊಳಪನ್ನು ಇದು ಹೊಂದಿದೆ. ಆದರೆ ಇದರಲ್ಲಿನ ಹೈ ರಿಫ್ರೆಶ್‌ ದರದ ಕೊರತೆಯು ಇದು ಆಪಲ್‌ನ ಅಗ್ಗದ ಲ್ಯಾಪ್‌ಟಾಪ್‌ ಎಂಬುದನ್ನು ನೆನಪಿಸುತ್ತದೆ.

ಇನ್ನು ಈ ಲ್ಯಾಪ್‌ಟಾಪ್‌ನ ಪ್ರೊಸೆಸ್ಸರ್‌ ಬಗ್ಗೆ ಹೇಳುವುದಾದರೆ ಇದು A18 ಪ್ರೋ ಚಿಪ್‌ನಿಂದ ಚಲಿಸುತ್ತದೆ. ಅದು ಐಫೋನ್‌ 16 ಪ್ರೋನಲ್ಲಿ ಕಂಡುಬರುವ ಚಿಪ್‌ ಆಗಿದೆ. ಮ್ಯಾಕ್‌ಬುಕ್‌ ನಿಯೋ 6–ಕೋರ್‌ ಸಿಪಿಯು ಜೊತೆಗೆ 5–ಕೋರ್‌ ಜಿಪಿಯು ಅನ್ನು ಹೊಂದಿದೆ. ಹಾಗಾಗಿ ಇದರ ವೇಗದಲ್ಲಿ ಯಾವುದೇ ಕೊರತೆ ಕಾಣಸಿದೇ ಇರಬಹುದು. ಇದರಲ್ಲಿರುವ 8GB RAM ಮತ್ತು 512GB ಸಂಗ್ರಹಣೆಯು ಇದನ್ನು ಉತ್ತಮ ಲ್ಯಾಪ್‌ಟಾಪ್‌ ಸಾಲಿಗೆ ಸೇರಿಸುತ್ತದೆ. ಇದು 36.5 Wh ಬ್ಯಾಟರಿಯನ್ನು ಹೊಂದಿದೆ. ಸಿಂಗಲ್‌ ಚಾರ್ಜ್‌ನಲ್ಲಿ 16 ಗಂಟೆಗಳವರೆಗೆ ವೀಡಿಯೊ ಸ್ಟ್ರೀಮಿಂಗ್‌ ಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: iPhone 17e ಬಿಡುಗಡೆ : ಬಜೆಟ್ ಬೆಲೆಯಲ್ಲಿ ಆಪಲ್‌ನ ಹೊಸ ಧಮಾಕಾ ! ಫೀಚರ್ಸ್ ನೋಡಿ ಗ್ರಾಹಕರು ಫುಲ್ ಫಿದಾ

ಮ್ಯಾಕ್‌ಬುಕ್‌ ನಿಯೋ, ಬ್ಯಾಕ್‌ಲಿಟ್‌ ಅಲ್ಲದ ಕೀಬೋರ್ಡ್‌ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ –ಸಿ ಪೋರ್ಟ್‌ಗಳನ್ನು ಹೊಂದಿದೆ. MagSafe ಚಾರ್ಜಿಂಗ್ ಪೋರ್ಟ್‌ನ ಕೊರತೆಯನ್ನು ಇದರಲ್ಲಿ ಕಾಣಬಹುದು. ಎಚ್‌ಡಿ ಕ್ಯಾಮೆರಾ ಹಾಗೂ ಕೇವಲ 2 ಸ್ಪೀಕರ್‌ ಇರುವ ಈ ಲ್ಯಾಪ್‌ಟಾಪ್‌ ಟಚ್‌ ಐಡಿ ಹೊಂದಿದೆ.

ಮ್ಯಾಕ್‌ಬುಕ್‌ ನಿಯೋ ಬೆಲೆ ಮತ್ತು ಲಭ್ಯತೆ

ಮ್ಯಾಕ್‌ಬುಕ್‌ ನಿಯೋ ಭಾರತದಲ್ಲಿ ಎರಡು ರೀತಿಯ ಸ್ಟೋರೇಜ್‌ ಆವೃತ್ತಿಯೊಂದಿಗೆ ಬರುತ್ತದೆ. ಇದರ 256 ಜಿಬಿಯ ಆವೃತ್ತಿಗೆ 69,900 ರೂ. ಹಾಗೂ ಇದರ 512 ಜಿಬಿಯ ಆವೃತ್ತಿಗೆ 79,900 ರೂ. ಆಗಿದೆ. ಇದನ್ನು ಆಪಲ್‌ನ ವೆಬ್‌ಸೈಟ್‌ನಲ್ಲಿ ಪ್ರೀ ಆರ್ಡರ್‌ ಮಾಡುವ ಮೂಲಕ ಖರೀದಿಸಬಹುದಾಗಿದೆ.

 

 

 

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories