boAt Iris smart watch: ಬೋಟ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ: ಅಗ್ಗದ ಬೆಲೆಯಲ್ಲಿ ಸಿಗಲಿದೆ ಬೋಟ್ ಐರಿಸ್, ಎಲ್ಲಿ ಖರೀದಿಸಬಹುದು?

ಇಯರ್‌ಫೋನ್ ತಯಾರಕ ಸಂಸ್ಥೆboAt Iris smart watch) ತನ್ನ ಇತ್ತೀಚಿನ ಸ್ಮಾರ್ಟ್‌ವಾಚ್ ಬೋಟ್ ಐರಿಸ್ (boAt Iris) ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಅನಾವರಣಗೊಳಿಸಿದೆ. ಗುರುವಾರ ಇದು ಫ್ಲಿಫ್‌ಕಾರ್ಟ್‌ನಲ್ಲಿ ಲಾಂಚ್ ಆಗಿದ್ದು ₹4,499 ಬೆಲೆಯಲ್ಲಿದೆ. ಬೋಟ್ ಸ್ಮಾರ್ಟ್ ವಾಚ್ ಹೈ-ಡೆಫಿನಿಷನ್ ರೌಂಡ್ ಅಮೋಲ್ಡ್ (AMOLED) ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು ಪ್ರೀಮಿಯಂ ವಸ್ತುವಿನಲ್ಲಿ ಸುತ್ತುವರಿಯಲ್ಪಟ್ಟಿದೆ.

ಈ ವಾಚ್ ಚರ್ಮ ಮತ್ತು ಸಿಲಿಕೋನ್ ಬೆಲ್ಟ್ ಸಹ ಹೊಂದಿದೆ. ಬೋಟ್ ತನ್ನ ಟ್ವಿಟರ್‌ನಲ್ಲಿ, “ಟಿಕ್, ಟಾಕ್, ಟಿಕ್, ಟಾಕ್! ಸಮಯ ಮೀರುತ್ತಿದೆ #SwitchOvertotheBrightSide ಮತ್ತು #WatchIris ಅನ್ನು 4,499/- ನಂಬಲಾಗದ ಉಡಾವಣಾ ಬೆಲೆಯಲ್ಲಿ ಪಡೆದುಕೊಳ್ಳಿ. 23ನೇ ಡಿಸೆಂಬರ್, 12 PM ಫ್ಲಿಪ್‌ಕಾರ್ಟ್ ಮತ್ತು ಬೋಟ್‌ ವೆಬ್ಸೈಟ್‌ನಲ್ಲಿ ಲಭ್ಯ https://bit.ly/3yJGTA8.” ಎಂದು ಟ್ವಿಟ್ ಮಾಡಿದೆ.

ನೀವು ಸಿಲಿಕೋನ್‌ ಸ್ಟ್ರಾಪ್‌ನಲ್ಲಿ ಕಪ್ಪು, ಫ್ಲೇಮಿಂಗ್ ರೆಡ್ ಮತ್ತು ನೇವಿ-ಬ್ಲೂ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಅಥವಾ ಲೆದರ್ ಫಿನಿಶ್ ಸ್ಟ್ರಾಪ್‌ಗಳಿಗೆ ಹೊಂದಿಸಬಹುದು. ಬೋಟ್ ಐರಿಸ್ 462ppi ಹೈ-ಡೆಫಿನಿಷನ್ ಅಮೋಲ್ಡ್ ಡಿಸ್ಪ್ಲೇಯೊಂದಿಗೆ ದೊಡ್ಡ ಡಯಲ್ 1.39 ಡಯಲ್ ಅನ್ನು ಹೊಂದಿದೆ. ಕಂಪನಿಯು ಒದಗಿಸಿದ ಮಾಹಿತಿಯ ಪ್ರಕಾರ, ಬೋಟ್ ಐರಿಸ್ ಮಲ್ಟಿ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ನೀವು ನಿಮ್ಮ ಫೋನ್‌ನಲ್ಲಿ ಬೋಟ್ ಹಬ್ ಅಪ್ಲಿಕೇಶನ್‌ಗೆ ಹೋಗಬೇಕು ನಂತರ ನಿಮ್ಮ ಮೂಡ್ ಹೊಂದಿಕೊಂಡು ನಿಮ್ಮ OOTD ಫೇಸ್ ಚೇಂಜ್ ಮಾಡಬಹುದು.

ಬಳಕೆದಾರರ ಈವೆಂಟ್, ಟೆಕ್ಸ್ಟ್, ಕಾಲ್ಅಥವಾ ಇಮೇಲ್ – ನೋಟಿಫಿಕೇಶನ್ ಅಲರ್ಟ್ ಸಹ ಪಡೆಯುತ್ತಾರೆ. ವಾಚ್‌ನ ಸಹಾಯದಿಂದ ನಿಮ್ಮ ಹೃದಯ ಬಡಿತ ಮತ್ತು SpO2 24×7 ಅನ್ನು ಸಹ ನೀವು ಮೇಲ್ವಿಚಾರಣೆ ಮಾಡಬಹುದು. ವಾಚ್ ಹಲವು ಡೈಲಿ ಎಕ್ಸರ್ಸೈಸ್ ಟ್ರ್ಯಾಕರ್ ಅನ್ನು ಸಹ ನೀಡುತ್ತದೆ. ಇದು 8 ಇನ್ ಬಿಲ್ಟ್ ಸಕ್ರಿಯ ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ. ಅದು ನಿಮಗೆ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಮತ್ತು ಈಜು ಟ್ರಾಕ್ ಮಾಡಲು ಸಹಾಯ ಮಾಡುತ್ತದೆ. ಈ ವಾಚ್ ಬ್ಯಾಟರಿ 7 ದಿನಗಳಂತೂ ಬರುತ್ತದೆ ಎಂದು ಕಂಪನಿ ಭರವಸೆ ನೀಡುತ್ತದೆ.

ವಾಚ್ ಬಿಡುಗಡೆಯ ಕುರಿತು, ಇಮ್ಯಾಜಿನ್ ಮಾರ್ಕೆಟಿಂಗ್ ಸಹ ಸಂಸ್ಥಾಪಕ ಮತ್ತು ಸಿಎಮ್‌ಒ ಅಮನ್ ಗುಪ್ತಾ ಅವರು “ಇತ್ತೀಚಿನ ಐಡಿಸಿ ಡೇಟಾದ ಪ್ರಕಾರ ಸ್ಮಾರ್ಟ್‌ವಾಚ್‌ಗಳು ಕಳೆದ ತ್ರೈಮಾಸಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನಗಳಾಗಿವೆ. ಮತ್ತು ಬೋಟ್ ಬ್ರ್ಯಾಂಡ್‌ನ ಮೊಟ್ಟಮೊದಲ ಅಮೋಲ್ಡ್ ಉತ್ಪನ್ನ ಅನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬೋಟ್ ಐರಿಸ್ ಮಾರುಕಟ್ಟೆಯಲ್ಲಿ ನಮ್ಮ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ವಾಚ್ ಆಗಿದೆ.” ಎಂದರು.

ಇದನ್ನೂ ಓದಿ: Realme Discounts Offers : ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

(boAt Iris smart watch hit the market priced at rs 4 499 on)

Comments are closed.