36 ಸಾವಿರ ರೂಪಾಯಿಗೆ ಲಾಂಚ್‌ ಆಗಿದ್ದ ಈ ಮೊಬೈಲ್‌ ಈಗ ಕೇವಲ 24 ಸಾವಿರಕ್ಕೆ !

Motorola Edge 50 Pro: ನೀವು 25 ಸಾವಿರ ರೂಪಾಯಿ ರೇಂಜ್‌ನ ಮೊಬೈಲ್ ಹುಡುಕಾಟದಲ್ಲಿದ್ದರೆ ಈಗ ನಿಮಗೆ ಒಂದು ಗುಡ್‌ ನ್ಯೂಸ್‌.

ಮೊಟೊರೊಲಾ ಎಡ್ಜ್‌ ಸರಣಿಯ ಎಡ್ಜ್‌ 50 ಪ್ರೊ ಮೊಬೈಲ್‌ ಅನ್ನು ಈಗ 25 ಸಾವಿರದ ಒಳಗೆ ಖರೀದಿಸಬಹುದು. ಆನ್‌ಲೈನ್‌ ಶಾಪಿಂಗ್‌ ಆಪ್ಲಿಕೇಶನ್‌ ಅಮೆಜಾನ್‌ನಲ್ಲಿ ಈ ಮೊಬೈಲ್‌ಗೆ ಭಾರಿ ಡಿಸ್ಕೌಂಟ್‌ ನೀಡಲಾಗಿದೆ. ನಿಖರವಾದ ಡಿಸ್ಪ್ಲೇ, ಆಕರ್ಷಕ ಬಣ್ಣ, 125W ವೇಗದ ಚಾರ್ಜಿಂಗ್‌ ನಿಂದಾಗಿ ಬಹಳಷ್ಟು ಜನರ ಫೆವರೆಟ್‌ ಮೊಬೈಲ್‌ ಆಗಿದೆ.

ನೀವೂ ಈ ಮೊಬೈಲ್ ಕೊಳ್ಳುವ ಪ್ಲಾನ್‌ ಮಾಡಿದ್ದರೆ ಅಮೆಜಾನ್‌ ಡೀಲ್‌ನ ಲಾಭ ಪಡೆದುಕೊಳ್ಳಬಹುದು.

ಮೊಟೊರೊಲಾ ಎಡ್ಜ್‌ 50 ಪ್ರೋ ನ ವೈಶಿಷ್ಟ್ಯಗಳೇನು?

ಮೊಟೊರೊಲಾ ಎಡ್ಜ್‌ 50 ಪ್ರೊ ಮೊಬೈಲ್‌ 6.7-ಇಂಚಿನ ಕರ್ವ್ಡ್‌ pOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಶನ್ 1.5K ಹಾಗೂ 144Hz ರಿಫ್ರೆಶ್ ದರ, 2,000 ನಿಟ್ಸ್ ವರೆಗೆ ಗರಿಷ್ಠ ಹೊಳಪು ಮತ್ತು HDR10+ ಬೆಂಬಲವನ್ನು ನೀಡುತ್ತದೆ.

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನಿಂದ ಚಲಿಸುವ ಈ ಫೋನ್‌ನಲ್ಲಿ, 12GB ವರೆಗೆ RAM ಮತ್ತು 256GB ಆಂತರಿಕ ಸಂಗ್ರಹಣೆಯಿದೆ.

ಇದರಲ್ಲಿ 125W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡಲಾಗಿದೆ. ಇನ್ನು ಛಾಯಾಗ್ರಹಣಕ್ಕಾಗಿ, ಎಡ್ಜ್ 50 ಪ್ರೊ ನಲ್ಲಿ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಕಾಣಬಹುದು.

ಇದರಲ್ಲಿ OIS ಹೊಂದಿರುವ 50MP ಪ್ರಾಥಮಿಕ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 10MP ಟೆಲಿಫೋಟೋ ಕ್ಯಾಮೆರಾಗಳು ಸೇರಿವೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಸೆಟ್‌ಅಪ್‌ ಕಾಣಬಹುದು.

ಇದನ್ನೂ ಓದಿ: 7,000mAh ಬ್ಯಾಟರಿಯ ರಿಯಲ್‌ಮಿ 16 ಪ್ರೊ ಪ್ಲಸ್: ಸ್ನಾಪ್‌ಡ್ರಾಗನ್ 7 ಜೆನ್ 4 ಫೀಚರ್ಸ್‌ಗೆ ಫ್ಯಾನ್ಸ್ ಫಿದಾ!

ಅಮೆಜಾನ್‌ನಲ್ಲಿ ಮೊಟೊರೊಲಾ ಎಡ್ಜ್ 50 ಪ್ರೊ ಡೀಲ್ ಹೇಗಿದೆ?

ಮೊಟೊರೊಲಾ ಎಡ್ಜ್ 50 ಪ್ರೊ ನ 12GB + 256GB ರೂಪಾಂತರವನ್ನು ಭಾರತದಲ್ಲಿ 35,999 ರೂ. ಗೆ ಬಿಡುಗಡೆ ಮಾಡಲಾಗಿತ್ತು.

ಅಮೆಜಾನ್‌ನಲ್ಲಿ ಈ ಮಾದರಿಯನ್ನು ಪ್ರಸ್ತುತ 23,985 ರೂ. ಗೆ ಪಟ್ಟಿ ಮಾಡಲಾಗಿದೆ. ಅಂದರೆ ಇದಕ್ಕೆ 12,014 ರೂ. ನೇರ ರಿಯಾಯಿತಿ ನೀಡಿದೆ.

ಇನ್ನೂ ಹೆಚ್ಚು ಲಾಭ ಪಡೆಯಲು, ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು.

ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ 22,500 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ಆದರೆ ಈ ಮೌಲ್ಯವು ಫೋನ್‌ನ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನೆಪಿಡಿ.

EMI ಆಯ್ಕೆಗಳು ಸಹ ಇದಿಕ್ಕೆ ಲಭ್ಯವಿದೆ. ಗ್ರಾಹಕರು ಕೆಲವು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯಬಹುದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories