ಬರ್ತಿದೆ ಮೊದಲ ಸೆಲ್ಫಿ ಮಿರರ್ ಫೋನ್! ಕ್ಯಾಮೆರಾ ವೈಶಿಷ್ಟ್ಯದಿಂದಲೇ ಕುತೂಹಲ ಹೆಚ್ಚಿಸಿದೆ ರಿಯಲ್‌ಮಿ 16 5G ಫೋನ್
Realme 16 5G: ಇಂದಿನ ಕಾಲದಲ್ಲಿ ಫೋನ್ ಕೊಳ್ಳುವುದಿದ್ದರೆ ಮೊದಲು ಕ್ಯಾಮೆರಾ ಹೇಗಿದೆ ಎಂದು ಚೆಕ್ ಮಾಡುತ್ತಾರೆ. ಆಮೇಲೆ ಅದರ ವೈಶಿಷ್ಟ್ಯ, ಬಣ್ಣ ಇತ್ಯಾದಿ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಪವರ್‌ಫುಲ್ ಕ್ಯಾಮೆರಾ ಇರುವ ಫೋನ್‌ಗಳು ಒಂದರ ಮೇಲೊಂದು ಬಿಡುಗಡೆಯಾಗುತ್ತಲೇ ಇವೆ. ಈಗ ಅವುಗಳ ಸಾಲಿಗೆ ಸೇರಲು ಸಿದ್ಧವಾಗಿದೆ ರಿಯಲ್‌ಮಿ 16 5G ಫೋನ್. ಕಂಪನಿ ಈ ಫೋನ್ ಅನ್ನು ‘ಸೆಲ್ಫಿ ಮಿರರ್ ಫೋನ್’ ಎಂದು ಟೀಸ್ ಮಾಡಿದೆ. ಇದು ಭಾರತದಲ್ಲಿ ಮೊದಲ ಸೆಲ್ಫಿ ಮಿರರ್ ಇರುವ ಸ್ಮಾರ್ಟ್‌ಫೋನ್ ಆಗಲು ಹೊರಟಿದೆ. ಇದರ ಹಿಂಬದಿಯ ಕ್ಯಾಮೆರಾದಿಂದಲೂ ಅದ್ಭುತ ಸೆಲ್ಫಿ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತದೆ. ಈ ಫೋನ್ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಚಿಕ್ಕ ಮಿರರ್ ವ್ಯವಸ್ಥೆಯಿದೆ. ಅದನ್ನು ಬಳಸಿಕೊಂಡು ಸುಲಭವಾಗಿ ಪ್ರೈಮರಿ ಕ್ಯಾಮರದಿಂದಲೇ ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಶಕ್ತಿಶಾಲಿ ಬ್ಯಾಟರಿ, ಪವರ್‌ಫುಲ್ ಕ್ಯಾಮೆರಾ ಇರುವ ಈ ಫೋನ್ ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ಎಂದು ಟೀಸರ್ ಸ್ಪಷ್ಟವಾಗಿ ಸೂಚಿಸುತ್ತದೆ.
ಸೆಲ್ಫಿ ಮಿರರ್ ವೈಶಿಷ್ಟ್ಯ ಎಂದರೇನು?
ರಿಯಲ್‌ಮಿ 16 5G ಫೋನ್‌ನ ಅತಿ ದೊಡ್ಡ ಹೈಲೈಟ್ ಅಂದರೆ ಅದು ಸೆಲ್ಫಿ ಮಿರರ್ ವೈಶಿಷ್ಟ್ಯ. ಇದರ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಸಣ್ಣ ಮಿರರ್ ಅನ್ನು ಅಳವಡಿಸಲಾಗಿದೆ. ಇದು ಹಿಂಬದಿಯ ಪವರ್‌ಫುಲ್ ಕ್ಯಾಮೆರಾ ಬಳಸಿ ಸೆಲ್ಫಿ ತೆಗೆದುಕೊಳ್ಳುವಾಗ ನಿಮ್ಮನ್ನು ನೀವು ವೀಕ್ಷಿಸಲು ಮತ್ತು ಫೋಟೋ ಫ್ರೇಮ್ ಹೊಂದಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಿಂಬದಿಯ ಕ್ಯಾಮೆರಾ ಮುಂಭಾಗದ ಕ್ಯಾಮೆರಾಕ್ಕಿಂತಲೂ ಹೆಚ್ಚು ಪವರ್‌ಫುಲ್ ಆಗಿರುತ್ತದೆ. ಹಾಗಾಗಿ ಅದರಲ್ಲಿ ತೆಗೆದ ಫೋಟೋ ಚೆನ್ನಾಗಿ ಮೂಡಿಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ರಿಯಲ್‌ಮಿ16 5G ವೈಶಿಷ್ಟ್ಯ
ಸೋರಿಕೆಯಾದ ಮಾಹಿತಿಯ ಪ್ರಕಾರ ರಿಯಲ್‌ಮಿ 16 5G ಕ್ಯಾಮೆರಾ ವಿಶೇಷವಾಗಿದೆ. ಇದು 50MP ಸೋನಿ IMX852 ಮುಖ್ಯ ಕ್ಯಾಮೆರಾ ಜೊತೆಗೆ 2MP ಸೆಕೆಂಡರಿ ಸೆನ್ಸರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ಉತ್ತಮ ಗುಣಮಟ್ಟದ ಸೆಲ್ಪಿಗಳಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಸಹ ಒಳಗೊಂಡಿರಬಹುದು. ಈ ಕ್ಯಾಮೆರಾ ಸೆಟಪ್, ಸೆಲ್ಸಿ ಮಿರರ್ ಜೊತೆಗೆ, ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತದೆ. ಇನ್ನು ಈ ಫೋನ್ ದೊಡ್ಡದಾದ ಅಂದರೆ 7000mAh ಬ್ಯಾಟರಿಯನ್ನು ಹೊಂದಿದೆ ಎಂಬ ಮಾಹಿತಿ ವರದಿಯಾಗಿದೆ. ಇದರಿಂದ ಒಮ್ಮೆ ಚಾರ್ಜ್ ಮಾಡಿದರೆ ಇದು ಸುಲಭವಾಗಿ 1-2 ದಿನಗಳವರೆಗೆ ಇರುತ್ತದೆ. 60W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ರಿಯಲ್‌ಮಿ 16 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಟರ್ಬೊ ಪ್ರೊಸೆಸರ್ ಹೊಂದಿರುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.57-ಇಂಚಿನ AMOLED ಡಿಸ್‌ಪ್ಲೇ, IP66, IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದೆ. ಇದು ನೀರು ಮತ್ತು ಧೂಳಿನಿಂದ ಹೆಚ್ಚು ರಕ್ಷಣೆ ಒದಗಿಸುತ್ತದೆ.
ಇದನ್ನೂ ಓದಿ: ಟೈಪ್ ಮಾಡುವ ಕಿರಿಕಿರಿ ಬಿಡಿ ! ಕನ್ನಡದಲ್ಲೇ ಮಾತನಾಡಿ ಮೀಶೋನಲ್ಲಿ ಶಾಪಿಂಗ್ ಮಾಡಿ : ಏನಿದು ‘ವಾಣಿ’ ಎಐ?
ಬೆಲೆ ಎಷ್ಟಿರಬಹುದು?
ವರದಿಗಳ ಪ್ರಕಾರ ಭಾರತದಲ್ಲಿ ರಿಯಲ್‌ಮಿ 16 5G ಫೋನ್ 40,000 ರೂ. ದಿಂದ 45,000 ರೂ. ಗಳ ನಡುವೆ ಬೆಲೆ ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ. ಕಂಪನಿಯು ಇನ್ನೂ ಅಧಿಕೃತ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲವಾದರೂ ಏಪ್ರಿಲ್ 2026 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.



