PM Narendra Modi stay : ಮೂರನೇ ಬಾರಿಗೆ Radisson Blu ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ: ಹೊಟೇಲ್ ಸುತ್ತ ಸರ್ಪಗಾವಲು

ಮೈಸೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಾಲ್ಕನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಎಂದಿನಂತೇ ನರೇಂದ್ರ ಮೋದಿ ಮೈಸೂರಿನ ರ್ಯಾಡಿಸನ್ ಬ್ಲೂ ನಲ್ಲಿ (PM Narendra Modi stay) ವಾಸ್ತವ್ಯ ಹೂಡಲಿದ್ದು, ಅದಕ್ಕಾಗಿ ಹೊಟೇಲ್ ಸುತ್ತ ಸರ್ಪಗಾವಲು ಹಾಕಲಾಗಿದೆ. ಈ ಹಿ‌ಂದೆ ಮೂರು ಭಾರಿ ಮೈಸೂರಿಗೆ ಬಂದಾಗ ನರೇಂದ್ರ ಮೋದಿಯವರು ಎರಡು ಭಾರಿ ಲಲಿತ್ ಮಹಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಕಳೆದ ಎರಡು ಭಾರಿ ನರೇಂದ್ರ ಮೋದಿಯವರು ರಾಡಿಸನ್ ಬ್ಲೂ ಹೊಟೇಲ್ ನಲ್ಲೇ ವಾಸ್ತವ್ಯ ಹೂಡಿದ್ದರು.

ಈ ಭಾರಿಯೂ ಮೋದಿ ರ್ಯಾಡಿಸನ್ ಬ್ಲೂ ನಲ್ಲೇ ವಾಸ್ತವ್ಯ ಹೂಡಲಿದ್ದು, ಇದಕ್ಕಾಗಿ ಹೊಟೇಲ್ ನಲ್ಲಿ ಸಿದ್ದತೆ ನಡೆದಿದೆ. ಕಳೆದ ಎರಡು ದಿನಗಳಿಂದಲೇ ರ್ಯಾಡಿಸನ್ ಬ್ಲೂ ಹೊಟೇಲ್ ನ್ನು ಪ್ರಧಾನಿ ಭದ್ರತಾ ಪಡೆ ತಮ್ಮ ವಶಕ್ಕೆ ಪಡೆದಿದ್ದು, ನಾಲ್ಕನೇ ಪ್ಲೋರ್ ನಲ್ಲಿರೋ ಪಿಎಂ ಸೂಟ್ ನಲ್ಲೇ ಪ್ರಧಾನಿ ವಾಸ್ತವ್ಯ ಹೂಡಲಿರೋದರಿಂದ ಆ ಪ್ಲೋರ್ ನ್ನು ಸಂಪೂರ್ಣ ಖಾಲಿಮಾಡಲಾಗಿದೆ. ನಾಲ್ಕನೇ ಮಹಡಿಯ ಪ್ರೆಸಿಡೆಂಟ್ ಸೂಟ್‌ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ವಾಸ್ತವ್ಯ ಹಿನ್ನೆಲೆಹೊಟೆಲ್ ಕಟ್ಟಡದ ಮಾಲ್‌ ಆಫ್‌ ಮೈಸೂರು ಬಂದ್ ಮಾಡಲಾಗಿದೆ. ಶಾಪಿಂಗ್‌ಮಾಲ್ ಮಾತ್ರವಲ್ಲ ಸಿನಿಮಾ ಥಿಯೇಟರ್ ಕೂಡ ಬಂದ ಮಾಡಲಾಗಿದೆ.

ಇನ್ನು ಕ್ಷಣ ಕ್ಷಣಕ್ಕೂ ಭದ್ರತೆ ಬಿಗಿ ಗೊಳಿಸಿರುವ ಎಸ್‌ಪಿಜಿ ಹೊಟೆಲ್ ಸುತ್ತ ನಿರಂತರ ತಪಾಸಣೆ ನಡೆಸುತ್ತಿದೆ. ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳಗಳಿಂದ ನಿರಂತರ ತಪಾಸಣೆ ನಡೆಸಿದೆ. ಇನ್ನು ಮೈಸೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಲಾಗ್ತಿದೆ. ಇನ್ನು ನಗರವೂ ಕೂಡ ಸಜ್ಜಾಗಿದ್ದು, ಅಲಂಕಾರಿಕ ಗಿಡಗಳಿಂದ ರಸ್ತೆ ಸಿಂಗರಿಸಿ ಸ್ವಚ್ಚಗೊಳಿಸಿ ಮೋದಿಯವರನ್ನು ಸ್ವಾಗತಿಸಲು ಸಿದ್ಧತೆ ಮಾಡಲಾಗಿದೆ.

ಇದು ನಾಲ್ಕನೆಯ ಬಾರಿ ಮೈಸೂರಿನಲ್ಲಿ ಮೋದಿ ವಾಸ್ತವ್ಯ ಹೂಡುತ್ತಿದ್ದು, ಅದಕ್ಕಾಗಿ‌ ನಗರಾಡಳಿತ ಸಿದ್ಧತೆ ನಡೆಸಿದೆ‌‌ ಒಟ್ಟು 95 ಕೋಟಿ ವೆಚ್ಚದಲ್ಲಿ ನಗರದ ರಸ್ತೆಗಳ ಸುಧಾರಣೆ, ರಿಪೇರಿ ಹಾಗೂ ಪೇಂಟಿಂಗ್ ಗೆ ವ್ಯಯಿಸಲಾಗಿದೆ. ಮಾತ್ರವಲ್ಲ ಮೈಸೂರಿನ ಹಲವೆಡೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ಕೂಡ ಮೋದಿ ಆಗಮನದ ಹಿನ್ನೆಲೆಯಲ್ಲಿ ಬೇರೆಡೆ ಸ್ಥಳಾಂತರಿಸಿ ಕ್ಲೀನ್ ಮಾಡಲಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಇದನ್ನೂ ಓದಿ : ಬೆಂಗಳೂರಿಗೆ ಇಂದು ಬರ್ತಾರೆ ಪ್ರಧಾನಿ ನರೇಂದ್ರ ಮೋದಿ : ರೋಡ್ ಗಿಳಿಯೋ ಮುನ್ನ ಈ ಸುದ್ದಿ ಓದಿ

ಇದನ್ನೂ ಓದಿ : Mysore golden gift : ಪ್ರಧಾನಿ ನರೇಂದ್ರ ಮೋದಿ ಕೈಗೆ ಮೈಸೂರು ಚಿನ್ನ: ಸಿದ್ಧವಾಗಿದೆ ಸ್ವರ್ಣಲೇಪಿತ ಸ್ಪೆಶಲ್ ಗಿಫ್ಟ್

PM Narendra Modi stay Radisson Blu Hotel Mysore in 3rd time, tight security

Comments are closed.