ಗೂಗಲ್‌ನಿಂದ ‘ಮಾಸ್ಟರ್ ಸ್ಟ್ರೋಕ್’: AI ಸಬ್‌ಸ್ಕ್ರಿಪ್ಷನ್ ಗ್ರಾಹಕರಿಗೆ ಭರ್ಜರಿ ಕೊಡುಗೆ
ಈ ಹಿಂದೆ ಗೂಗಲ್ ಐಐ ಪ್ರೊ (Google AI Pro) ಬಳಕೆದಾರರಿಗೆ ಕೇವಲ 2TB ಕ್ಲೌಡ್ ಸ್ಟೋರೇಜ್ ನೀಡಲಾಗುತ್ತಿತ್ತು. ಆದರೆ ಈಗ ಯಾವುದೇ ಹೆಚ್ಚುವರಿ ಹಣವಿಲ್ಲದೆ ಇದನ್ನು 5TB ಗೆ ಏರಿಸಲಾಗಿದೆ.

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಲು ಗೂಗಲ್ ಈಗ ಬಳಕೆದಾರರಿಗೆ ಹಿಂದೆಂದೂ ಕಾಣದ ಆಫರ್ ನೀಡಿದೆ. ತನ್ನ ಪ್ರೀಮಿಯಂ ಯೋಜನೆಯಾದ Google AI Pro ಸಬ್‌ಸ್ಕ್ರಿಪ್ಷನ್‌ನಲ್ಲಿ ದೊಡ್ಡ ಬದಲಾವಣೆ ಮಾಡಿರುವ ಗೂಗಲ್, ಈಗ ಅದೇ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸಿದೆ.
2TB ಇನ್ಮುಂದೆ 5TB: ಸ್ಟೋರೇಜ್‌ನಲ್ಲಿ ಭಾರಿ ಏರಿಕೆ
- ಈ ಹಿಂದೆ ಗೂಗಲ್ ಐಐ ಪ್ರೊ (Google AI Pro) ಬಳಕೆದಾರರಿಗೆ ಕೇವಲ 2TB ಕ್ಲೌಡ್ ಸ್ಟೋರೇಜ್ ನೀಡಲಾಗುತ್ತಿತ್ತು. ಆದರೆ ಈಗ ಯಾವುದೇ ಹೆಚ್ಚುವರಿ ಹಣವಿಲ್ಲದೆ ಇದನ್ನು 5TB ಗೆ ಏರಿಸಲಾಗಿದೆ.
- ಈ 5TB ಸ್ಟೋರೇಜ್ ಅನ್ನು ಗೂಗಲ್ ಡ್ರೈವ್ (Google Drive), ಜಿಮೇಲ್ (Gmail) ಮತ್ತು ಗೂಗಲ್ ಫೋಟೋಸ್ (Google Photos) ಬ್ಯಾಕ್‌ಅಪ್‌ಗಾಗಿ ಬಳಸಬಹುದು.
- ಭಾರತದಲ್ಲಿ ಈ ಯೋಜನೆಯ ಬೆಲೆ ತಿಂಗಳಿಗೆ ₹1,950 ಆಗಿದ್ದು, ಹೆಚ್ಚಿನ ಸ್ಟೋರೇಜ್ ಜೊತೆಗೆ ‘ಜೆಮಿನಿ 3.1 ಪ್ರೊ’ ನಂತಹ ಸುಧಾರಿತ ಎಐ ಮಾಡೆಲ್‌ಗಳ ಲಭ್ಯತೆಯೂ ಇರಲಿದೆ.
- ಕುಟುಂಬದ ಐವರು ಸದಸ್ಯರೊಂದಿಗೆ ಈ ಸ್ಟೋರೇಜ್ ಹಂಚಿಕೊಳ್ಳಲು ಅವಕಾಶವಿರುವುದರಿಂದ, ಇದು ವೃತ್ತಿಪರರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಬಹಳ ಉಪಯುಕ್ತವಾಗಲಿದೆ.
Also Read : ಆಪಲ್ 50ನೇ ವಾರ್ಷಿಕೋತ್ಸವ ಸಂಭ್ರಮ: iPhone 17 Pro Max ಭರ್ಜರಿ ಡಿಸ್ಕೌಂಟ್, ಅತೀ ಕಡಿಮೆ ಬೆಲೆಗೆ ಆಪಲ್ ಉತ್ಪನ್ನ
ಪ್ರಯಾಣದ ವೇಳೆಯಲ್ಲೂ ಗೂಗಲ್ ಮೀಟ್ (Google Meet) ಲಭ್ಯ
ಇನ್ನೊಂದು ಪ್ರಮುಖ ಅಪ್‌ಡೇಟ್ ಎಂದರೆ, ಗೂಗಲ್ ಮೀಟ್ ಸೇವೆಯು ಈಗ Apple CarPlay ಮತ್ತು Android Auto ಎರಡರಲ್ಲೂ ಲಭ್ಯವಿದೆ.
- ಇನ್ಮುಂದೆ ಕಾರು ಚಾಲನೆ ಮಾಡುವಾಗ ಮೊಬೈಲ್ ನೋಡುವ ಅಗತ್ಯವಿಲ್ಲದೆ, ಕಾರಿನ ಸ್ಕ್ರೀನ್ ಮೂಲಕವೇ ಆಡಿಯೋ ಮೀಟಿಂಗ್‌ಗಳಲ್ಲಿ ಭಾಗವಹಿಸಬಹುದು.
- ಮೀಟಿಂಗ್ ಲಿಂಕ್‌ಗಳು ನೇರವಾಗಿ ಕಾರಿನ ಡಿಸ್‌ಪ್ಲೇನಲ್ಲಿ ಕಾಣಿಸಿಕೊಳ್ಳಲಿದ್ದು, ಒಂದೇ ಕ್ಲಿಕ್‌ನಲ್ಲಿ ಜಾಯಿನ್ ಆಗಬಹುದು. ಇದು ಕಚೇರಿ ಕೆಲಸದ ಒತ್ತಡದಲ್ಲಿರುವವರಿಗೆ ವರದಾನವಾಗಲಿದೆ.
Also Read : Redmi 15A 5G ಲಾಂಚ್: ಕೇವಲ 12,999 ರೂಪಾಯಿಗೆ 6,300mAh ಬ್ಯಾಟರಿ, 120Hz ಡಿಸ್‌ಪ್ಲೇ
AI ಸಬ್‌ಸ್ಕ್ರಿಪ್ಷನ್ : ಹೆಚ್ಚುವರಿ ಸೌಲಭ್ಯಗಳು
ಈ ಹೊಸ ಅಪ್‌ಡೇಟ್‌ನೊಂದಿಗೆ ಗೂಗಲ್ ಐಐ ಪ್ರೊ ಚಂದಾದಾರರಿಗೆ ಇತರೆ ಕೆಲವು ಲಾಭಗಳೂ ಸಿಗಲಿವೆ:
- Google Home Premium: ಸ್ಮಾರ್ಟ್ ಹೋಮ್ ಸಾಧನಗಳನ್ನು ನಿರ್ವಹಿಸಲು $10 ಮೌಲ್ಯದ ಪ್ರೀಮಿಯಂ ಫೀಚರ್‌ಗಳು ಉಚಿತವಾಗಿ ಸಿಗಲಿವೆ.
- AI In Gmail & Docs: ಜಿಮೇಲ್‌ನಲ್ಲಿ ಇಮೇಲ್ ಬರೆಯಲು ಮತ್ತು ಡಾಕ್ಸ್‌ನಲ್ಲಿ ಕರಡು ಸಿದ್ಧಪಡಿಸಲು ಎಐ ನೆರವು ಈ ಪ್ಲಾನ್‌ನಲ್ಲಿ ಮುಂದುವರಿಯಲಿದೆ.
ಗೂಗಲ್‌ನ ಈ ನಡೆಗೆ ಕಾರಣವೇನು ?
ಓಪನ್ ಎಐ (OpenAI) ಮತ್ತು ಆಪಲ್ ನಡುವಿನ ಹೆಚ್ಚುತ್ತಿರುವ ಪೈಪೋಟಿಗೆ ಉತ್ತರವಾಗಿ ಗೂಗಲ್ ಈ ಕ್ರಮ ಕೈಗೊಂಡಿದೆ. ಕೇವಲ ಎಐ ತಂತ್ರಜ್ಞಾನ ನೀಡುವುದಷ್ಟೇ ಅಲ್ಲದೆ, ಸ್ಟೋರೇಜ್ ಮತ್ತು ದಿನನಿತ್ಯದ ಆಪ್‌ಗಳ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುವುದು ಗೂಗಲ್‌ನ ಗುರಿಯಾಗಿದೆ.
google ai pro update 5tb storage free



