ಈಗಂತೂ ಆ್ಯಪಲ್ ಫೋನ್ (Apple Phone) ಖರೀದಿ ಮಾಡುವವರಿಗೆ ಬರಗಾಲವಿಲ್ಲ. ಕೈಯಲ್ಲಿ ಹಣವಿಲ್ಲವೆಂದ್ರೂ ಟ್ರೆಂಡ್ಗೆ ಸರಿಯಾಗಿ ಇರಬೇಕು ಅಂತ ಇಎಂಐ (EMI) ಮಾಡಿಕೊಂಡು ಐಫೋನ್ (Iphone 12 ) ಖರೀದಿ ಮಾಡುತ್ತಾರೆ. ನೀವು ಕೂಡ ಇದೇ ರೀತಿ ಹೇಗಾದರೂ ಮಾಡಿ ಒಂದು ಐಫೋನ್ ಖರೀದಿ ಮಾಡಬೇಕು ಎಂದಿಕೊಂಡಿದ್ದರೆ ನಿಮಗೊಂದು ಒಳ್ಳೆಯ ಅವಕಾಶವಿದೆ.

ಆಪಲ್ ಕಂಪನಿಯ ಐಫೋನ್ 12 ಸ್ಮಾರ್ಟ್ಫೋನ್ ನಿಮಗೆ ಅತ್ಯಂತ ಕಡಿಮೆ ದರಕ್ಕೆ ಸಿಗುತ್ತದೆ. ಐಫೋನ್ 12 ಬಳಿಕ ಸಾಕಷ್ಟು ಹೊಸ ಹೊಸ ಫೋನ್ಗಳನ್ನ ಆ್ಯಪಲ್ ಕಂಪನಿ ಲಾಂಚ್ ಮಾಡಿದೆ . ಸದ್ಯ ಈಗ ಐಫೋನ್ 15 ಜನರೇಷನ್ ನಡೆಯುತ್ತಿದೆ. ಆದರೆ ಇದರ ಬೆಲೆ ಕೇಳಿದ್ರೆ ತಲೆತಿರುಗುವಂತಿದೆ. 1 ಲಕ್ಷದ ಕೆಳಗೆ ನಿಮಗೆ ಹೊಸ ಜನರೇಷನ್ನ ಆ್ಯಪಲ್ ಕಂಪನಿಯ ಫೋನ್ಗಳು ಸಿಗೋದು ತುಂಬಾನೇ ಕಷ್ಟ.

ಸಾಲ ಮಾಡಿ ತೆಗೆದುಕೊಂಡರೂ ಸಹ ಮುಂದೆ ನೀವೆ ಆ ಹಣವನ್ನು ತೀರಿಸಬೇಕು ಅನ್ನೋದನ್ನ ಮರಯೋ ಹಾಗೂ ಇಲ್ಲ. ಹೀಗಾಗಿ ಈ ಹಬ್ಬದ ಸೀಸನ್ ನಿಮಗೆ ನಿಜವಾಗಿಯೂ ಒಂದು ಬೆಸ್ಟ್ ಆಯ್ಕೆಯನ್ನ ನೀಡಿದೆ. ಐಫೋನ್ 15 ಜನರೇಷನ್ಗಿಂತ ಹಿಂದಿನ ಜನರೇಷನ್ಗಳ ಫೋನ್ಗಳು ಸಹ 70 ಸಾವಿರ ರೂಪಾಯಿಗಳಿಗಿಂತ ಕಮ್ಮಿ ದರಕ್ಕೆ ಲಭ್ಯವಿಲ್ಲ.
ಇದನ್ನೂ ಓದಿ : WhatsApp Alert : ತಪ್ಪಿಯೂ ಈ ಲಿಂಕ್ ಕ್ಲಿಕ್ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ
ಹೀಗಾಗಿ ಐಫೋನ್ ಖರೀದಿ ಮಾಡೋದು ಅಂದ್ರೆ ದೊಡ್ಡ ಸಾಲವನ್ನ ಮೈ ಮೇಲೆ ಎಳೆದುಕೊಂಡಂತೆಯೇ ಸರಿ. ಆದರೆ ಇದೀಗ ನಿಮಗೊಂದು ಗುಡ್ ನ್ಯೂಸ್ ಕಾದಿದೆ. ಅದೇನೆಂದ್ರೆ ಪ್ರಸ್ತುತ ಐಫೋನ್ 12 ಮೊಬೈಲ್ ನಿಮಗೆ ಕೇವಲ 40 ಸಾವಿರ ರೂಪಾಯಿಗೆ ಲಭ್ಯವಿದೆ. ಹಳೆಯ ಜನರೇಷನ್ನ ಫೋನ್ ಅನ್ನೋದು ಒಂದನ್ನ ಬಿಟ್ರೆ ಎಲ್ಲಾ ರೀತಿಯಿಂದಲೂ ಐಫೋನ್ 12 ಒಳ್ಳೆಯ ಆಯ್ಕೆಯೇ ಆಗಿದೆ.

ಫ್ಲಿಪ್ಕಾರ್ಟ್ನಲ್ಲಿ ಪ್ರಸ್ತುತ ಐಫೋನ್ 12 39.999 ರೂಪಾಯಿಗಳಿಗೆ ಲಭ್ಯವಿದೆ. 64 ಜಿಬಿ ಐಫೋನ್ 12 ಖರೀದಿಸುವವರಿಗೆ ಈ ಬೆಲೆ ಅನ್ವಯವಾಗಲಿದೆ. ಇನ್ನುಳಿದಂತೆ 128 ಜಿಬಿಯ ಐಫೋನ್ 12 ಬೇಕು ಎಂದು ನೀವು ಬಯಸಿದ್ರೆ 45 ಸಾವಿರ ರೂಪಾಯಿಗೆ ಸಿಗುತ್ತದೆ. ಒಂದು ವೇಳೆ ನೀವು ಫೋನ್ ವಿನಿಮಯ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ರೆ ಕೇವಲ 35 ಸಾವಿರ ರೂಪಾಯಿಗೆ ಐಫೋನ್ 12ನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಐಫೋನ್ 13ಗೆ 10,000 ರೂ. ಡಿಸ್ಕೌಂಟ್ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್ ಮಿಸ್ ಮಾಡ್ಲೇಬೇಡಿ
ಅಲ್ಲದೇ ಆಫರ್ ನೀಡಿರುವ ಬ್ಯಾಂಕುಗಳ ಕ್ರೆಡಿಟ್ ಏನಾದರೂ ನಿಮ್ಮ ಬಳಿ ಇದ್ದರೆ ಇನ್ನೂ ಹೆಚ್ಚಿನ ರಿಯಾಯಿತಿ ನಿಮಗೆ ಸಿಗೋದಂತೂ ಪಕ್ಕಾ..! ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಶ್ರೇಯಾಂಕದ ಎಷ್ಟೋ ಆಂಡ್ರಾಯ್ಡ್ ಫೋನ್ಗಳಿಗೆ ಹೋಲಿಕೆ ಮಾಡಿದ್ರೆ ಐಫೋನ್ 12 ನಿಜಕ್ಕೂ ಒಂದು ಒಳ್ಳೆಯ ಆಯ್ಕೆಯಾಗಿದೆ.

ಐಫೋನ್ 12 A14 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿದೆ, ಇದು Snapdragon 8 Gen 1 SoC ಗೆ ಹೋಲಿಸಿದರೆ, ಬೆಂಚ್‌ಮಾರ್ಕ್‌ಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ, ನೀವು iPhone 12 ನ ಕಾರ್ಯಕ್ಷಮತೆಯನ್ನು ಹೋಲಿಸಿದರೆ, ಇದು 2022 ರಲ್ಲಿ ಲಾಂಚ್ ಆಗಿರುವ ಎಲ್ಲಾ ಆಂಡ್ರಾಯ್ಡ್ ಫೋನ್ಗಳಿಗಿಂತ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಮೊಬೈಲ್ ನಂಬರ್ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್ ಗೊತ್ತೇ..?
ಯಾವ ಜನರೇಷನ್ ಆದರೂ ಓಕೆ ಐಫೋನ್ ಒಂದು ಸಿಕ್ಕರೆ ಸಾಕು ಎನ್ನುವವರಿಗೆ ಅಥವಾ ಉತ್ತಮ ಬೆಲೆಯ ಆಂಡ್ರಾಯ್ಡ್ ಫೋನ್ಗಳಿಗೆ ಹುಡುಕಾಟ ನಡೆಸುತ್ತಿರುವವರಿಗೆ ಎಲ್ಲರಿಗೂ ಐಫೋನ್ 12 ಬೆಸ್ಟ್ ಆಯ್ಕೆಯಾಗಿದೆ. ಕ್ಯಾಮರಾ ಕ್ಲಾರಿಟಿ ಕೂಡ ತುಂಬಾನೇ ಚೆನ್ನಾಗಿದ್ದು ಡೀಪ್ ಫ್ಯೂಶನ್ ಫೋಟೋಗಳನ್ನೂ ಕ್ಲಿಕ್ಕಿಸಬಹುದಾಗಿದೆ.
iphone 12 available less than 40000 rs price