Jio Attractive Prepaid Offers: ಒಳ್ಳೊಳ್ಳೆ ಪ್ರಿಪೇಯ್ಡ್ ಪ್ಲಾನ್ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಗ್ರಾಹಕರಿಗೆ ಸಾಕಷ್ಟು ಲಾಭವನ್ನು ನೀಡಬಲ್ಲ ವಿವಿಧ ಪ್ರಿಪೇಯ್ಡ್ ಆಫರ್ಗಳನ್ನು ಜಿಯೋ ಕಂಪನಿ ನೀಡುತ್ತಲೇ ಬರ್ತಿದೆ. ಇದೀಗ ಸಂಪೂರ್ಣ ದೇಶ ದೀಪಾವಳಿ ಹಬ್ಬ(Diwali Festival) ದ ಸಂಭ್ರಮದಲ್ಲಿದೆ.
ಈ ಹಬ್ಬದ ಮೂಡ್ನಲ್ಲಿ ರಿಲಯನ್ಸ್ ಜಿಯೋ (Realince jio) ಕೂಡ ತನ್ನ ಗ್ರಾಹಕರಿಗೆ ಬಂಪರ್ ಪ್ರಿಪೇಯ್ಡ್ ಪ್ಲಾನ್ (Prepaid Recharge Plan) ಒಂದನ್ನು ನೀಡುವ ಮೂಲಕ ಹಬ್ಬದ ಗಿಫ್ಟ್ ನೀಡಿದೆ. ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ನ ಮೂಲಕ ಜಿಯೋ ಕಂಪನಿಯು ಸ್ವಿಗ್ಗಿ ಆನ್ಲೈಟ್ ಚಂದಾದಾರಿಕೆ ಯನ್ನೂ ನೀಡುತ್ತಿದೆ. ಜಿಯೋ ಕಂಪನಿ ನೀಡುತ್ತಿರುವ ಈ ಪ್ರೀಪೇಯ್ಡ್ ಪ್ಲಾನ್ನ ಬೆಲೆ ಕೇವಲ 866 ರೂಪಾಯಿ ಆಗಿದೆ.

ಈ ಮೊತ್ತದ ಹಣವನ್ನು ನೀವು ರಿಚಾರ್ಜ್ ಮಾಡಿಕೊಂಡಲ್ಲಿ ಗ್ರಾಹಕರು ಯಾವುದೇ ಅಡೆತಡೆಯಿಲ್ಲದ ಸೌಕರ್ಯವನ್ನು ಪಡೆಯುತ್ತಾರೆ. ಇದರ ಜೊತೆಯಲ್ಲಿ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆ ಕೂಡ ಗ್ರಾಹಕರದ್ದಾಗಲಿದೆ. ಅಂದ್ರೆ ನೀವು ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿದಲ್ಲಿ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕ ಇರೋದಿಲ್ಲ.
ಇದನ್ನೂ ಓದಿ : ವಾಟ್ಸಾಪ್ ಬಳಕೆದಾರರಿಗೆ ಖಡಕ್ ವಾರ್ನಿಂಗ್ ನೀಡಿದೆ ಸುಪ್ರೀಂಕೋರ್ಟ್: ಇದನ್ನು ಪಾಲಿಸದಿದ್ದಲ್ಲಿ ನಿಮ್ಮ ಗೌಪ್ಯ ಮಾಹಿತಿಗಳಾಗಬಹುದು ಲೀಕ್
ಇದರ ಜೊತೆಯಲ್ಲಿ ಸ್ವಿಗ್ಗಿ ದಿನಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿಯೂ ನಿಮಗೆ ಫ್ರೀ ಶಿಪ್ಪಿಂಗ್ ಸೌಕರ್ಯ ಇರಲಿದೆ ಎಂದು ರಿಲಯನ್ಸ್ ಜಿಯೋ ಕಂಪನಿ ತಿಳಿಸಿದೆ. ಕೇವಲ ಸ್ವಿಗ್ಗಿ ಒನ್ ಲೈಟ್ ಸೌಕರ್ಯ ಮಾತ್ರವಲ್ಲ. 866 ರೂಪಾಯಿ ಮೌಲ್ಯದ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಳ್ಳುವವರ ಮೈ ಜಿಯೋ ಖಾತೆಗೆ ಐವತ್ತು ರೂಪಾಯಿಗಳ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ.
ಅಲ್ಲದೇ ಮೂರು ತಿಂಗಳ ಅವಧಿಗೆ ಸ್ವಿಗ್ಗಿ ಆನ್ಲೈನ್ ಸೇವೆ ಬೇಕು ಎನ್ನುವವರು ಹೆಚ್ಚುವರಿ 99 ರೂಪಾಯಿ ಪಾವತಿ ಮಾಡಿದರೆ ಸಾಕು. ಇನ್ನು 866 ರೂಪಾಯಿಗಳ ಪ್ರಿಪೇಯ್ಡ್ ಚಂದಾದಾರಿಕೆಗೆ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಅನಿಮಿಯತ ಕರೆ ಸೌಕರ್ಯ ಕೂಡ ನಿಮ್ಮದಾಗಲಿದೆ. 84 ದಿನಗಳ ಕಾಲ ಈ ಪ್ರಿಪೇಯ್ಡ್ ಪ್ಯಾಕ್ನ ವ್ಯಾಲಿಡಿಟಿ ಇರಲಿದೆ ಎಂದು ರಿಲಯನ್ಸ್ ಜಿಯೋ ಕಂಪನಿ ಮಾಹಿತಿ ನೀಡಿದೆ.
866 ರೂಪಾಯಿಗಳ ಪ್ರಿಪೇಯ್ಡ್ ಸೌಕರ್ಯ ಪಡೆದವರು 149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದಾಗ ಉಚಿತ ಹೋಮ್ ಡೆಲಿವರಿ ಪಡೆಯುತ್ತಾರೆ. 199 ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಆರ್ಡರ್ಗೆ 10 ಸ್ಪಾಮಾರ್ಟ್ ಆರ್ಡರ್ಗಳ 10 ಉಚಿತ ಹೋಂ ಡೆಲಿವರಿ ಸಿಗಲಿದೆ. ಸಾಮಾನ್ಯ ಸ್ವಿಗ್ಗಿ ಚಂದಾದಾರನಿಗಿಂತ ಹೆಚ್ಚುವರಿ ರೆಸ್ಟಾರೆಂಡ್ ಡಿಸ್ಕೌಂಟ್ ಸಿಗಲಿದೆ.

ಜೆನಿ ಡೆಲಿವರಿಗಳು ಆರವತ್ತು ರೂಪಾಯಿಗಳ ಮೇಲಿದ್ದರೂ 10 ಪ್ರತಿಶತ ರಿಯಾಯಿತಿ ಕೂಡ ಈ ಪ್ರಿಪೇಯ್ಡ್ ಖರೀದಿಸಿದ ಗ್ರಾಹಕರದ್ದಾಗಲಿದೆ. ಸ್ಟಾಮಾರ್ಟ್ ಆರ್ಡರ್ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ದೀಪಾವಳಿ ಹಬ್ಬಕ್ಕೆ ಉಳಿದೆಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದ್ರೆ ರಿಲಾಯನ್ಸ್ ಜಿಯೋ ಅತ್ಯಂತ ಲಾಭದ ಪ್ರಿಪೇಯ್ಡ್ ಆಫರ್ನ್ನು ಗ್ರಾಹಕರಿಗೆ ನೀಡಿದೆ.
ಇದನ್ನೂ ಓದಿ : 50 MP ಕ್ಯಾಮೆರಾ 64 GB ಸ್ಟೋರೇಜ್ : ಆರ್ಧಕ್ಕೀಂತ ಕಡಿಮೆ ಬೆಲೆಗೆ ಸಿಗುತ್ತೆ ರೆಡ್‌ಮೀ 12C 5G ಸ್ಮಾರ್ಟ್ ಪೋನ್
ಹೀಗಾಗಿ ಗ್ರಾಹಕರು ಈ ಆಫರ್ನ ಲಾಭ ಪಡೆದುಕೊಳ್ಳುವುದು ಒಳ್ಳೆಯದು. ಅದರಲ್ಲೂ ನಗರ ಪ್ರದೇಶಗಳಲ್ಲಿ ಸ್ವಿಗ್ಗಿ ಸೌಕರ್ಯವನ್ನು ಹೊಂದಿರುವ ಸಿಟಿಯಲ್ಲಿ ವಾಸಿಸುವವರಿಗೆ ಜಿಯೋ ಕಂಪನಿಯ ಈ ದೀಪಾವಳಿ ಹಬ್ಬದ ಪ್ರಿಪೇಯ್ಡ್ ಪ್ಲಾನ್ ಸಿಗಲಿದೆ.
Jio Attractive Prepaid Offers for Diwali, dont miss this prepaid pack