ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರ ವಿಭಿನ್ನ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಪ್ರೀಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಪ್ರೀಪೇಯ್ಡ್ ಯೋಜನೆಗಳನ್ನು ಪಡೆಯಲು ಗ್ರಾಹಕರು ದಿನವೊಂದಕ್ಕೆ ಸುಮಾರು ₹10 ಪಾವತಿಸುತ್ತಾರೆ ಎಂಬುದನ್ನು ಮನಗೊಂಡು ಕಂಪನಿಯು ಇದೀಗ ಕಡಿಮೆ ಬೆಲೆಯ ಗರಿಷ್ಠ ಮಾನ್ಯತೆಯ ರೀಚಾರ್ಜ್ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಯೋಜನೆಯ ಪ್ರಕಾರ ದಿನವೊಂದಕ್ಕೆ ಗ್ರಾಹಕರು ಖರ್ಚು ಮಾಡುವ ದುಡ್ಡು ಕೇವಲ ₹ 5.3 ಆಗಿದೆ. ಜೊತೆಗೆ ಈ ಪ್ಲಾನ್‌ನ ಸೇವಾ ಮಾನ್ಯತೆಯು 84 ದಿನಗಳದ್ದಾಗಿದೆ. ಹಾಗಾಗಿ ಇದು ಕೈಗೆಟುಕುವ ಪ್ಲಾನ್ ಎನ್ನಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಡೇಟಾ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವಾದರೂ ಪ್ರೀಪೇಡ್ ಡೇಟಾ ವೋಚರ್‌ನ ಎಲ್ಲಾ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಜಿಯೋನ ಈ ಪ್ಲಾನ್ ಬೆಲೆ 448 ರೂ.ಗಳು. ನೀವು ಈ ಪ್ಲಾನ್‌ನಲ್ಲಿ MyJio ಅಪ್ಲಿಕೇಷನ್ ಅನ್ನು ಟೆಲಿಕಾಂ ಆಪರೇಟರ್‌ನ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್ ಹೇಗೆ ಲಾಭದಾಯಕವಾಗಿದೆ ಎಂದು ತಿಳಿಯೋಣ.
ಇದನ್ನೂ ಓದಿ: iPhone 18 Pro ಫೀಚರ್‌ಗಳು ಲೀಕ್: ಕ್ಯಾಮೆರಾ ನೋಡಿ ಟೆಕ್ ಪ್ರಿಯರು ಫಿದಾ! ಸೂಪರ್ ಅಪ್‌ಗ್ರೇಡ್
ಜಿಯೋ ನ 448 ರೂ. ಗಳ ಪ್ರೀಪೇಯ್ಡ್ ಪ್ಲಾನ್
ರಿಲಯನ್ಸ್ ಜಿಯೋದ ಹೊಸ 448 ರೂ.ಗಳ ಪ್ರೀಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 1000 ಎಸ್‌ಎಮ್‌ಎಸ್ ಇರಲಿದೆ. ಟೆಲಿಕಾಂ ಕಂಪನಿಯು ಈ ಪ್ಲಾನ್‌ನೊಂದಿಗೆ JioAICloud ಮತ್ತು JioTV ಯ ಸಬ್ಸ್‌ಕ್ರಿಪ್ಷನ್ ಅನ್ನು ನೀಡುತ್ತದೆ. ಈ ಪ್ಲಾನ್ ಸಂಪೂರ್ಣವಾಗಿ ವಾಯ್ಸ್ ಓನ್ಲಿ ಪ್ರೀಪೇಯ್ಡ್ ಪ್ಲಾನ್ ಆಗಿದೆ. ಈ ಪ್ಲಾನ್ ಅನ್ನು ಕಂಪನಿಯು ಪ್ರೀಪೇಯ್ಡ್ ಪ್ಲಾನ್‌ನ ಜೊತೆಗೆ ಡೇಟಾದ ಅಗತ್ಯವಿಲ್ಲದವರಿಗಾಗಿ ಪರಿಚಯಿಸಲಾಗಿದೆ.
ಜಿಯೋ 448 ರೂ. ಪ್ಲಾನ್‌ನಲ್ಲಿ ಇರುವ ಏಕೈಕ್ ನ್ಯೂನತೆಯೆಂದರೆ ಇದರಲ್ಲಿ 5G ಅಥವಾ ಒಟಿಟಿಯಂಥಹ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಪ್ಲಾನ್ ಡೇಟಾ ಬಳಕೆ ಮಾಡದ ಗ್ರಾಹಕರಿಗೆ ಉತ್ತಮವಾಗಿದೆ. ಜಿಯೋದಲ್ಲಿ ಇಂತಹುದ್ದೇ ಮತ್ತೊಂದು ಪ್ಲಾನ್ ಇದೆ. ಅದು 1748 ರೂ. ಗಳ ಪ್ಲಾನ್. ಈ ಪ್ಲಾನ್‌ನಲ್ಲಿಯೂ ಅನ್‌ಲಿಮಿಟೆಡ್ ಕರೆ ಮತ್ತು 336 ದಿನಗಳ ವ್ಯಾಲಿಡಿಟಿಯಿದೆ. ಜೊತೆಗೆ 3600 ಎಸ್‌ಎಮ್‌ಎಸ್ ಪ್ರಯೋಜನವೂ ಇದೆ. ನೀವು ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್‌ಗಳನ್ನು ಮಾತ್ರ ಬಳಕೆ ಮಾಡುತ್ತಿದ್ದರೆ ಈ ಯೋಜನೆ ಲಾಭದಾಯಕವಾಗಿದೆ.



