ಶೀತ, ದವಡೆ, ಕತ್ತು ನೋವು ಕೂಡ ಹಾರ್ಟ್ ಅಟ್ಯಾಕ್ ನ ಲಕ್ಷಣ : ಡಾ.ಸಿ.ಎನ್ ಮಂಜುನಾಥ್ ರಿವೀಲ್ ಮಾಡಿದ್ರು ಆತಂಕಕಾರಿ ಸಂಗತಿ

ಬೆಂಗಳೂರು : ಕೊರೋನಾ ಬಳಿಕ ಜನರ ಆರೋಗ್ಯ ಸ್ಥಿತಿ ಬದಲಾಗಿದೆ. ಜನರು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾರೆ‌. ಈ ಮಧ್ಯೆ ಜನರನ್ನು ಇತ್ತೀಚಿಗೆ ಹೆಚ್ಚಾಗಿ ಕಾಡ್ತಿರೋ ಹೃದಯರೋಗ ಹಾಗೂ ಹೃದಯಾಘಾತ ಸಮಸ್ಯೆ (Dr. CN Manjunath) ಬಗ್ಗೆ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೌದು ವೈದ್ಯರ ಮಾಹಿತಿ ಪ್ರಕಾರ ಈಗ ಹೃದಯಾಘಾತದ ಲಕ್ಷಣಗಳು ಬದಲಾಗಿದೆ. ಹೌದು ನಿಮಗೇನಾದ್ರೂ ಶೀತದ ಬದಲು ಬೇರೆ ರೀತಿ ದವಡೆ ನೋವು, ಕತ್ತು ಅಥ್ವಾ ಗಂಟಲು ನೋವು ಬರ್ತಿದ್ದರೇ ನೀವು ಹುಶಾರಗಿರಬೇಕು.

ಹೌದು ಸಾಮಾನ್ಯ ಕೋಲ್ಡ್ ನ ಬದಲು ಪದೇ ಪದೇ ಈ ಸಿಂಪ್ಟಮ್ಸ್ ಕಂಡು ಬರ್ತಿದ್ರೆ‌ ನೀವು ನಿರ್ಲಕ್ಷ್ಯ ಮಾಡ್ಬೇಡಿ, ಯಾಕೆಂದ್ರೆ ಇದ್ರಿಂದ ನಿಮ್ಮ ಜೀವಕ್ಕೆ ಬರಬಹುದು, ಯಾಕೆಂದರೇ ಇದೆಲ್ಲವೂ ಹೃದಯಾಘಾತದ ಹೊಸ ಲಕ್ಷಣಗಳಾಗಿರುತ್ತದೆ. ಹೃದಯಾಘಾತಕ್ಕೂ ಮೊದಲು ಕೆಲವೊಂದು ಸೂಚನೆಗಳನ್ನು ದೇಹ ನಮಗೆ ನೀಡುತ್ತೆ, ಮೊದಲೆಲ್ಲಾ ಎದೆ ನೋವು, ಎಡಗೈ ಕೈನೋವು, ವಾಂತಿ, ಬೆವರುವಿಕೆ, ಹೆಚ್ಚು ಓಡಾಡಿದಾಗ ಸುಸ್ತು ಇದೆಲ್ಲವೂ ಹೃದಯಾಘಾತದ ಹೊಸ ಸಿಂಪ್ಟಮ್ಸ್ ಆಗಿತ್ತು. ಆದ್ರೆ ಈಗ ವರ್ಷ ಬದಲಾದಂತೆ ಇದೀಗ ಈ ಎಲ್ಲಾ ಸಿಂಪ್ಟಮ್ಸ್‌ಗೆ ದವಡೆ ನೋವು, ಗಂಟಲು ನೋವು, ಕತ್ತುನೋವು ಹೊಸ ಸೇರ್ಪಡೆಯಾಗಿದೆ. ಈಗ ಹೃದಯಾಘಾತ ಆಗ್ತಿರೋವ್ರಲ್ಲಿ ಈ ಹೊಸ ಸಿಂಪ್ಟಮ್ಸ್‌ಗಳು ಕಾಣಿಸ್ತಿವೆ ಎನ್ನಲಾಗಿದೆ.

ಜಯದೇವ ಹೃದ್ರೋಗ ಸಂಸ್ಥೆಗೆ ಬರೋ ಅನೇಕರಲ್ಲಿ ಈ ಸಿಂಪ್ಟಮ್ಸ್‌ಗಳು ಕಾಣಿಸ್ತಿವೆ. ಹೀಗಾಗಿ ಜನರಿಗೆ ತಮ್ಮ ಸಿಂಪ್ಟಮ್ಸ್ ಬಗ್ಗೆ ತಿಳಿದುಕೊಳ್ಳೋದು ಮುಖ್ಯ,ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ರೆ ಉತ್ತಮ ಅಂತಿದ್ದಾರೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್. ಕರೋನಾ ಬಳಿಕ ರೋಗಗಳ ಪರಿಭಾಷೆ ಕೂಡ ಬದಲಾಗಿದೆ. ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ದೈಹಿಕ ಅನಾರೋಗ್ಯ,ಲಕ್ಷಣ ಅಥವಾ ಸಮಸ್ಯೆಯನ್ನು ನಿರ್ಲಕ್ಷಿಸೋದು ಸರಿಯಲ್ಲ.

ಇದನ್ನೂ ಓದಿ : ಬೇಸಿಗೆಯಲ್ಲಿ ಕಾಡುವ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : World Kidney Day 2023: ನಿಮ್ಮ ಕಿಡ್ನಿಗೆ ಹಾನಿ ಮಾಡುವ ಈ ಸಾಮಾನ್ಯ ಅಭ್ಯಾಸಗಳನ್ನು ಇಂದೇ ಬಿಟ್ಟು ಬಿಡಿ

ಇದನ್ನೂ ಓದಿ : H3N2 Influenza Virus: ಹೆಚ್ಚುತ್ತಿರುವ H3N2 ವೈರಸ್‌ : ನಿರ್ಬಂಧ ಹೇರಲಿದ್ಯಾ ರಾಜ್ಯ ಸರಕಾರ?

ಕೇವಲ ಅತಿಯಾದ ಬೆವರುವಿಕೆ, ಎದೆನೋವು,ಕಣ್ಣು ಮಂಜಾಗುವುದು ಮಾತ್ರವಲ್ಲ ಇತರ ಸಣ್ಣ ಪುಟ್ಟ ಲಕ್ಷಣಗಳು ಕೂಡ ನಮ್ಮ ಮೇಜರ್ ಆರೋಗ್ಯ ಸಮಸ್ಯೆಯ ಕುರುಹುಗಳಾಗಿರಬಹುದು. ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆ ಬೇಕು. ಆರೋಗ್ಯಕರ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನ ಅಳವಡಿಸಿಕೊಳ್ಳಬೇಕು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಯಾವುದೇ ಅನಾರೋಗ್ಯದ ಭಯವಿಲ್ಲದೇ ಜೀವನ ನಡೆಸಬಹುದು ಅಂತಾರೇ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್. ಹೀಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮರಿಬೇಡಿ.

Cold, jaw, throat pain are also symptoms of heart attack: Dr. CN Manjunath has revealed an alarming fact.

Comments are closed.