OnePlus 15T ಬಿಡುಗಡೆಗೂ ಮೊದಲೇ ಸೋರಿಕೆಯಾದ ವೈಶಿಷ್ಟ್ಯ: ಕ್ಯಾಮೆರಾ ಪವರ್ಗೆ ಫಿದಾ ಆದ ಸ್ಮಾರ್ಟ್ಫೋನ್ ಪ್ರಿಯರು
ಸ್ಮಾರ್ಟ್ಫೋನ್ ಪ್ರಪಂಚವೇ ಎದುರುನೋಡುತ್ತಿರುವ ಬಹುನಿರೀಕ್ಷಿತ ಒನ್ಪ್ಲಸ್ 15T (OnePlus 15T) ಬಿಡುಗಡೆಗೆ ಮಾರ್ಚ್ 24 ರಂದು ಚೀನಾದಲ್ಲಿ ವೇದಿಕೆ ಸಜ್ಜಾಗುತ್ತಿದೆ.
ಸ್ಮಾರ್ಟ್ಫೋನ್ ಪ್ರಪಂಚವೇ ಎದುರುನೋಡುತ್ತಿರುವ ಬಹುನಿರೀಕ್ಷಿತ ಒನ್ಪ್ಲಸ್ 15T (OnePlus 15T) ಬಿಡುಗಡೆಗೆ ಮಾರ್ಚ್ 24 ರಂದು ಚೀನಾದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಕಂಪನಿ ಫೋನ್ ಬಿಡುಗಡೆಗೂ ಮುನ್ನ ಇದರ ವೈಶಿಷ್ಟ್ಯಗಳನ್ನು ಟೀಸರ್ ಮೂಲಕ ಬಹಿರಂಗಪಡಿಸಲು ಪ್ರಾರಂಭಿಸಿದೆ. ಟೀಸರ್ ನೋಡಿದ ಸ್ಮಾರ್ಟ್ಫೋನ್ ಪ್ರಿಯರಲ್ಲಿ ಇದರ ಕ್ಯಾಮೆರಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿದೆ. ಹೊಸ LUMO ಲೈಟ್ ಕಂಡೆನ್ಸಿಂಗ್ ಇಮೇಜಿಂಗ್ ಸಿಸ್ಟಮ್ ಮತ್ತು ಸುಧಾರಿತ ಜೂಮ್ ಹಾರ್ಡ್ವೇರ್ ಮುಂತಾದವು ಇದರ ವೈಶಿಷ್ಟ್ಯ ಎನ್ನುವುದು ಬಹಿರಂಗವಾಗುತ್ತಿದೆ.
ಒನ್ಪ್ಲಸ್ 15T ವೈಶಿಷ್ಟ್ಯ
ಒನ್ಪ್ಲಸ್15T ಫೋನ್ 3nm ಸ್ನಾಪ್ಡ್ರಾಗನ್ 8 ಇಲೈಟ್ ಜೆನ್ 5 SoC ಹೊಂದಿರುವ ನಿರೀಕ್ಷೆಯಿದೆ. ಇದು G2 Wi-Fi ಚಿಪ್ ಮತ್ತು ಗೇಮಿಂಗ್ ಸಮಯದಲ್ಲಿ ಸುಧಾರಿತ ಇನ್ಪುಟ್ಗಾಗಿ ಮೀಸಲಾದ “Lingxi” ಟಚ್ ರೆಸ್ಪಾನ್ಸ್ ಚಿಪ್ನೊಂದಿಗೆ ಬರುವ ಎಲ್ಲಾ ಸಾಧ್ಯತೆಯಿದೆ. ಫೋನ್ ಹೊಸ ವಿಂಡ್ ಚೇಸರ್ ಗೇಮಿಂಗ್ ಕರ್ನಲ್ ಅನ್ನು ಸಹ ಪರಿಚಯಿಸುತ್ತಿದೆ. ಗೇಮಿಂಗ್ ದುನಿಯಾದಲ್ಲಿ ಪವರ್ಫುಲ್ ಆಗುವ ಸಾಮರ್ಥ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ.
ಒನ್ಪ್ಲಸ್ 15T ಮೊಬೈಲ್ 7,500mAh ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಹಾಗೂ ಗೇಮಿಂಗ್ಗಾಗಿ ಬೈಪಾಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಬಹು ಸಂರಚನೆಗಳಲ್ಲಿ ಲಭ್ಯವಿರುತ್ತದೆ. 16GB ವರೆಗೆ RAM ಮತ್ತು 1TB ವರೆಗೆ ಆಂತರಿಕ ಸಂಗ್ರಹಣೆಯೊಂದಿಗೆ ಬರುವ ಈ ಫೋನ್ ಹೆಚ್ಚಿನ ಸ್ಟೊರೇಜ್ಗೆ ಅವಕಾಶ ಮಾಡಿಕೊಡುತ್ತದೆ. ಇನ್ನು ಇದರ ಬಣ್ಣ ಆಯ್ಕೆಗಳಲ್ಲಿ ಪ್ಯೂರ್ ಕೋಕೋ, ರಿಲ್ಯಾಕ್ಸಿಂಗ್ ಮಚ್ಚಾ ಮತ್ತು ಹೀಲಿಂಗ್ ವೈಟ್ ಚಾಕೊಲೇಟ್ ನಂತಹ ಆಕರ್ಷಕ ಬಣ್ಣ ಸೇರಿದೆ.
ಒನ್ಪ್ಲಸ್ 15T ಮೊಬೈಲ್ ಕ್ಯಾಮೆರಾ ಹೇಗಿದೆ?
ಬಿಡುಗಡೆಯಾದ ಟೀಸರ್ ಪ್ರಕಾರ ಒನ್ಪ್ಲಸ್ 15T ಯ ಕ್ಯಾಮೆರಾ ಸೆಟ್ಅಪ್ ಅಧ್ಬುತವಾಗಿದೆ ಎನ್ನುವುದನ್ನು ಕಾಣಬಹುದು. ಇದು 50MP ಸೋನಿ ಅಲ್ಟ್ರಾ ವಿಷನ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, ಹೆಚ್ಚಿನ ಬೆಳಕನ್ನು ಸೆರೆಹಿಡಿಯಲು ಮತ್ತು ವಿಭಿನ್ನ ಬೆಳಕಿನ ಪರಿಸ್ಥಿತಿಯಲ್ಲೂ ಉತ್ತಮ ಫೋಟೋ ತೆಗೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 3.5x ಆಪ್ಟಿಕಲ್ ಜೂಮ್ ನೀಡುವ 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಬರುತ್ತದೆ. ಕಂಪನಿಯು 7x ವರೆಗೆ ಯಾವುದೇ ಅಡೆತಡೆಯಲ್ಲಿದೆ ಜೂಮ್ ಮಾಡಬಹುದು ಎಂಬುದನ್ನು ಹೇಳುತ್ತದೆ. ಇದರಿಂದ ದೂರದ ವಸ್ತುಗಳನ್ನು ಸಹ ಸ್ಪಷ್ಟವಾಗಿ ಸೆರೆಹಿಡಿಯಬಹುದು. LUMO ಲೈಟ್ ಕಂಡೆನ್ಸಿಂಗ್ ಇಮೇಜಿಂಗ್ ವ್ಯವಸ್ಥೆಯು ಹೆಚ್ಚು ನಿಖರವಾದ ಫೋಟೋಗಳನ್ನು ಸೆರೆಹಿಡಿಯಲು ಅನುವುಮಾಡಿಕೊಡುತ್ತದೆ. ಒನ್ಪ್ಲಸ್ 15Tಯಲ್ಲಿ ಶ್ಯಾಡೊಲೆಸ್ ಕ್ಯಾಪ್ಚರ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದನ್ನು ಬಳಸಿಕೊಂಡು ಸುಲಭವಾಗಿ ಫೋಟೋಗಳನ್ನು ವೇಗವಾಗಿ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: 7,200mAh ಬ್ಯಾಟರಿ, 50MP ಕ್ಯಾಮೆರಾ, 18,999 ರೂ. ಬೆಲೆಯ ಮೊಬೈಲ್ ಲಾಂಚ್! ಯಾವುದೀ ಗೇಮಿಂಗ್ ಫೋನ್?
ನ್ಯಾಚುರಲ್ ಫೋಟೋ ತೆಗೆಯಲು ಹೆಚ್ಚು ಅನುಕೂಲವಾಗುವ 3.5x ಟೆಲಿಫೋಟೋ ಲೆನ್ಸ್ 85mm ಫೋಕಲ್ ಲೆಂತ್ ಅನ್ನು ಸಹ ಹೊಂದಿದೆ. ಕ್ಲಾಸಿಕ್, ಸಾಫ್ಟ್ ಲೈಟ್ ಮತ್ತು ಫಿಲ್ಮ್ ಸ್ಟೈಲ್ನಂತಹ ವಿಭಿನ್ನ ಭಾವಚಿತ್ರ ಶೈಲಿಗಳನ್ನು ಸಹ ಇದು ಒಳಗೊಂಡಿದೆ. ಇದರಿಂದ ಪ್ರತಿಯೊಂದು ಫೋಟೋ ವಿಭಿನ್ನವಾಗಿರುವುದರ ಜೊತೆಗೆ ವಿಶೇಷವೆನಿಸುವಂತೆ ಮಾಡುತ್ತದೆ.



