Domestic LPG Cylinder Hiked : ಗೃಹೋಪಯೋಗಿ ಸಿಲಿಂಡರ್​ಗಳ ದರದಲ್ಲಿ 50 ರೂಪಾಯಿ ಏರಿಕೆ

ದೆಹಲಿ : Domestic LPG Cylinder Hiked : ದೇಶದಲ್ಲಿ ದಿನಕ್ಕೊಂದರಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಶ್ರೀ ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಪೆಟ್ರೋಲ್​ – ಡೀಸೆಲ್​ ದರ ಏರಿಕೆ , ತರಕಾರಿ ಬೆಲೆ ಹೆಚ್ಚಳ, ವಿದ್ಯುತ್​ ದರ ಹೆಚ್ಚಳ , ಅಡುಗೆ ಎಣ್ಣೆಗಳ ಬೆಲೆ ಏರಿಕೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೀಗ ಪ್ರಮುಖ ಬೆಳವಣಿಗೆಯೊಂದರಲ್ಲಿ 14.2 ಕೆಜಿ ತೂಕವುಳ್ಳ ಗೃಹೋಪಯೋಗಿ ಎಲ್​ಪಿಜಿ ಸಿಲಿಂಡರ್​ಗಳ ದರದಲ್ಲಿ ಇಂದಿನಿಂದ ಅನ್ವಯವಾಗು ವಂತೆ ಬೆಲೆ ಏರಿಕೆಯಾಗಿದೆ. ಎಲ್​ಪಿಜಿ ಸಿಲಿಂಡರ್​ನ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ ಪ್ರತಿ ಸಿಲಿಂಡರ್​ಗೆ 50 ರೂಪಾಯಿ ಏರಿಕೆ ಮಾಡಿವೆ. ಈ ಬೆಲೆ ಏರಿಕೆಯ ಬಳಿಕ ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ 1003 ರೂಪಾಯಿಗೆ ಲಭ್ಯವಿದ್ದ ಸಿಲಿಂಡರ್​ ದರ 1053 ರೂಪಾಯಿ ಆಗಿದೆ.

ಇದರ ಜೊತೆಯಲ್ಲಿ ಐದು ಕೆಜಿ ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್​​ಗಳ ಬೆಲೆಯನ್ನು ಪ್ರತಿ ಲೀಟರ್​​ಗೆ 18 ರೂಪಾಯಿ ಏರಿಕೆ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 5 ಕೆಜಿ ದೇಶಿಯ ಎಲ್​ಪಿಜಿ ಸಿಲಿಂಡರ್​ಗಳ ಈ ಹಿಂದೆ 369 ರೂಪಾಯಿಗೆ ಸಿಗುತ್ತಿದ್ದರೆ ಇಂದಿನಿಂದ 387 ರೂಪಾಯಿಗಳನ್ನು ನೀಡಿ ಖರೀದಿ ಮಾಡುವುದು ಅನಿವಾರ್ಯ ವಾಗಲಿದೆ. ಆದರೆ 19 ಕೆ.ಜಿ ವಾಣಿಜ್ಯ ಬಳಕೆಯ ಸಿಲಿಂಡರ್​ಗಳ ಬೆಲೆ 8.5 ರೂಪಾಯಿ ಇಳಿಕೆ ಕಂಡಿದೆ. ಈ ಹಿಂದೆ 2021 ರೂಪಾಯಿಗೆ ಲಭ್ಯವಿದ್ದ ವಾಣಿಜ್ಯ ಸಿಲಿಂಡರ್​ ದರ 2012.5 ರೂಪಾಯಿಗಳಿಗೆ ಇಳಿಕೆಯಾಗಿದೆ.

ಇತ್ತರ ಮುಂಬೈನಲ್ಲಿ 14.2 ಕೆಜಿ ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆಯು 1002.50 ರೂಪಾಯಿಗಳಿಂದ 1052.50 ರೂಪಾಯಿಗಳಿಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ ಗ್ರಾಹಕರು 1029 ರೂಪಾಯಿ ಬದಲಿಗೆ 1079 ರೂಪಾಯಿಗಳನ್ನು ಪಾವತಿಸಿ ಗೃಹೋಪಯೋಗಿ ಸಿಲಿಂಡರ್​ಗಳನ್ನು ಖರೀದಿಸಬೇಕಾಗಿದೆ. ಚೆನ್ನೈನಲ್ಲಿ ಈ ಹಿಂದೆ 1058 ರೂಪಾಯಿ ಇದ್ದ ಸಿಲಿಂಡರ್​ ಬೆಲೆಯು ಇದೀಗ 1068.50 ರೂಪಾಯಿಗಳಿಗೆ ಮಾತ್ರ ಏರಿಕೆ ಕಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್​ಗಳ ಬೆಲೆ ಕೊಂಚ ಇಳಿಕೆ ಕಂಡು ಬಂದಿರುವುದು ಸಮಾಧಾನಕರ ಎನಿಸಿದ್ದರೂ ಸಹ ಗೃಹೋಪಯೋಗಿ ಸಿಲಿಂಡರ್​ಗಳ ಬೆಲೆಯಲ್ಲಿ ದಿಢೀರ್​ ಏರಿಕೆ ಕಂಡು ಬಂದಿರುವುದು ಮಧ್ಯಮ ವರ್ಗದ ಜನತೆಗೆ ತಲೆ ಕೆಟ್ಟಂತಾಗಿದೆ. ಈ ಹಿಂದೆ ಅಂದರೆ ಮೇ 7ರಂದು ಹಾಗೂ ಮೇ 19ರಂದೂ ದೇಶಿ ಸಿಲಿಂಡರ್​ಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು.

ಇದನ್ನು ಓದಿ : ವಿಷ್ಣು ದಾದಾ ಎವರ್‌ಗ್ರೀನ್ ಸಾಂಗ್ ಯಾಕೋ ನೆನಪಾಗ್ತಿದೆ ಎಂದ ತಮಿಳುನಾಡು ಕ್ರಿಕೆಟರ್ !

ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Delhi: Prices Of 14.2 Kg Domestic LPG Cylinder Hiked By Rs 50, Check Revised Rates

Comments are closed.