ವಿಶ್ವದ ಈ ಕಾಮರ್ಸ್ ದೈತ್ಯ ಅಮೇಜಾನ್ ದೀಪಾವಳಿ ಆಫರ್ (Amazon) ಘೋಷಣೆ ಮಾಡಿದೆ. ಈಗಾಗಲೇ ಸ್ಮಾರ್ಟ್‌ಪೋನ್ ಖರೀದಿಯ ಮೇಲೆ ವಿಶೇಷ ಆಪರ್ ನೀಡುತ್ತಿದೆ. ಇದೀಗ ರೆಡ್‌ಮಿ 12C ಪೋನ್ ಅನ್ನು ಅರ್ಧ ಬೆಲೆಗೆ ಖರೀದಿಸುವ ಅವಕಾಶವನ್ನು ಕಲ್ಪಿಸಿದ್ದು, ಜನರು ಮುಗಿ ಬಿದ್ದು ಸ್ಮಾರ್ಟ್‌ಪೋನ್ ಖರೀದಿ ಮಾಡುತ್ತಿದ್ದಾರೆ.
ಅಮೇಜಾನ್ ಘೋಷಿಸಿರುವ ಆಫರ್‌ನಲ್ಲಿ Redmi 12C ಸ್ಮಾರ್ಟ್‌ಫೋನ್ ಮೇಲೆ ವಿಶೇಷ ಕೊಡುಗಡೆ ಘೋಷಣೆಯಾಗಿದೆ. ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫೈನಲ್ ಡೇಸ್ ಸೇಲ್ ಮೇಲೆ ಹೆಚ್ಚುವರಿಯಾಗಿ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ರೆಡ್‌ಮಿ ಕಂಪೆನಿಯ ಈ ಅತ್ಯುತ್ತಮ ಸ್ಮಾರ್ಟ್ ಬೆಲೆ ಶೇ. ೫೦ರ ಡಿಸ್ಕೌಂಟ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ರೆಡ್‌ಮೀ ಸ್ಮಾರ್ಟ್ ಪೋನ್ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿತ್ತು. ಆದರೆ ಇದೀಗ ಅಮೇಜಾನ್ ಸ್ಮಾರ್ಟ್‌ಪೋನ್ ಖರೀದಿಯ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಜೊತೆಗೆ ನೋ ಕಾಸ್ಟ್ ಇಎಂಐ ಆಫರ್ ಕೂಡ ಲಭ್ಯವಿದ್ದು, ಫೀಚರ್ ಫೋನ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವಿದೆ.
Amazon ನಲ್ಲಿ Redmi 12C ಸ್ಮಾರ್ಟ್‌ಫೋನ್‌ನಲ್ಲಿ ವಿಶೇಷ ಕೊಡುಗೆಯನ್ನು ಈಗಾಗಲೇ ನೀಡಲಾಗಿದೆ. ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫೈನಲ್ ಡೇಸ್ ಸೇಲ್ ಅದರ ಮೇಲೆ ಹೆಚ್ಚಿನ ಹೆಚ್ಚುವರಿ ರಿಯಾಯಿತಿಗಳನ್ನು ಘೋಷಿಸಿದೆ. ಇದರೊಂದಿಗೆ Redmi 12C ಸ್ಮಾರ್ಟ್‌ಫೋನ್ ಹಿಂದೆಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ ಮೊಬೈಲ್ ನಂಬರ್ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್ ಗೊತ್ತೇ..?
ಇದನ್ನೂ ಓದಿ : ಹ್ಯೂಮನ್ AI ಪಿನ್ : ನಿಮ್ಮ ಶರ್ಟ್ನಲ್ಲಿರೋ ಪಿನ್ ಮೊಬೈಲ್ನಂತೆ ಕಾರ್ಯನಿರ್ವಹಿಸುತ್ತೆ ಅಂದರೆ ನಂಬ್ತೀರಾ ? ಮೂಗಿನ ಮೇಲೆ ಬೆರಳಿಡುವಂತೆ ಮಾಡ್ತಿದೆ ಈ ಹೊಸ ಸ್ಮಾರ್ಟ್‌ಫೋನ್

ಅಮೇಜಾನ್ ಸೇಲ್‌ನಲ್ಲಿ ಅರ್ಧ ಬೆಲೆಗೆ ಮಾರಾಟವಾಗುತ್ತಿರುವ ಈ ಸ್ಮಾರ್ಟ್‌ಪೋನ್ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. Redmi 12C ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸಂಗ್ರಹಣೆ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಮೊಬೈಲ್ ಅನ್ನು ಮಾರುಕಟ್ಟೆಯಲ್ಲಿ 13,999 ರೂ ಇದೆ. ಆದರೆ ಕೇವಲ 6,799 ರೂ.ಗಳಲ್ಲಿ ಅಮೇಜಾನ್ ಆಫರ್ ಮೂಲಕ ಖರೀದಿ ಮಾಡಲು ಅವಕಾಶವಿದೆ.
ಇಷ್ಟೇ ಅಲ್ಲಾ Redmi 12C ಸ್ಮಾರ್ಟ್‌ಫೋನ್ 6.71-ಇಂಚಿನ HD+ ಡಿಸ್ಪ್ಲೇ ಹೊಂದಿದೆ. 1600×720 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. 60Hz ರಿಫ್ರೆಶ್ ದರದ ಜೊತೆಗೆ 20:9 ಆಕಾರ ಅನುಪಾತವನ್ನು ಒಳಗೊಂಡಿದೆ. ಈ ಡಿಸ್ಪ್ಲೇ ವಾಟರ್ ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.
ಇದನ್ನೂ ಓದಿ : ಈ ಮೊಬೈಲ್ ಖರೀದಿ ಮಾಡಿದ್ರೆ ಸಾಕು : ಯಾವುದೇ ಭಾಷೆಯ ಕರೆಯನ್ನೂ ನಿಮ್ಮ ಭಾಷೆಗೆ ಅನುವಾದಿಸಿ ಕೊಡುತ್ತೆ..!
ರೆಡ್ ಮೀ 12ಸಿ ಸ್ಮಾರ್ಟ್‌ಫೋನ್ MediaTek Helio G85 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು Android 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರ ಮೂಲ ಮಾದರಿಯು 4GB RAM ಮತ್ತು 64GB ಆಂತರಿಕ ಸಂಗ್ರಹಣೆಯ ಆಯ್ಕೆಯನ್ನು ಪಡೆಯುತ್ತದೆ. ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಲು ಇದು ಅವಕಾಶವನ್ನು ಒದಗಿಸುತ್ತದೆ.
ರೆಡ್ ಮೀ ಆಫರ್ ಘೋಷಣೆ ಮಾಡಿರುವ ಈ ಸ್ಮಾರ್ಟ್‌ಪೋನ್ 50 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಒಳಗೊಂಡಿದೆ. ಅಲ್ಲದೇ ರಾತ್ರಿಯಲ್ಲಿಯೂ ಪೋಟೋ, ವಿಡಿಯೋ ಶೂಟಿಂಗ್‌ಗೆ ಪ್ರತ್ಯೇಕ ಕ್ಯಾಮರಾ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಪೋನ್ 5,000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.
ಜೊತೆಗೆ 10W ಚಾರ್ಜಿಂಗ್ ಹೊಂದಿರುವ ಕಾರಣಕ್ಕೆ ವೇಗವಾಗಿ ಚಾರ್ಜಿಂಗ್ ಮಾಡಬಹುದು. ವೈಫೈ, ಹಾಟ್‌ಸ್ಪಾಟ್, ಬ್ಲೂಟೂತ್, ಹೆಡ್‌ಫೋನ್ ಜ್ಯಾಕ್, ಮೈಕ್ರೋ ಯುಎಸ್‌ಬಿ ಪೋರ್ಟ್ ಹಲವು ಸೌಕರ್ಯಗಳನ್ನು ಪಡೆಯಬಹುದಾಗಿದೆ.
Redmi 12C Smartphone Half price (51% Discount) sale Amazon Great Indian Festival Sale