ಭಾರತ – ನೆದರ್‌ಲ್ಯಾಂಡ್‌ ಪಂದ್ಯ : ವಿಶ್ವದಾಖಲೆ ಬರೆಯುತ್ತಾರಾ ಕೊಹ್ಲಿ, ಇಲ್ಲಿದೆ ಇಂಡಿಯಾ ಪ್ಲೇಯಿಂಗ್ XI

ಭಾರತ ಕ್ರಿಕೆಟ್‌ ತಂಡ ಇದೀಗ ಅಂತಿಮ ಪಂದ್ಯದಲ್ಲಿ ವಿಶ್ವದ ಬಲಾಢ್ಯ ತಂಡಗಳಿಗೆ ಸೋಲುಣಿಸಿದ ನೆದರ್‌ಲ್ಯಾಂಡ್‌ ತಂಡ ಸವಾಲು ಒಡ್ಡಲಿದೆ. ಈಗಾಗಲೇ ಸಮಿಫೈನಲ್‌ಗೆ ಎಂಟ್ರಿ ಕೊಟ್ಟಿರುವ ಭಾರತ ತಂಡಕ್ಕೆ ಈ ಪಂದ್ಯ ಕೇವಲ ಅಭ್ಯಾಸ ಪಂದ್ಯವಾಗಲಿದೆ.

ಬೆಂಗಳೂರು : ವಿಶ್ವಕಪ್‌ (World Cup 2023) ನಲ್ಲಿ ಭಾರತ ಕ್ರಿಕೆಟ್‌ ತಂಡ (Indian Cricket Team) ತನ್ನ ಕೊನೆಯ ಲೀಗ್‌ ಪಂದ್ಯವನ್ನು ನೆದರ್‌ಲ್ಯಾಂಡ್‌ (India vs Netherlands) ತಂಡದ ವಿರುದ್ದ ಆಡಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಮತ್ತೊಂದು ವಿಶ್ವದಾಖಲೆಗೆ ವೇದಿಕೆಯಾಗಲಿದೆ. ಟೀ ಇಂಡಿಯಾ ಪರ ಯಾರೆಲ್ಲಾ ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವಕಪ್‌ ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಭಾರತ ಕ್ರಿಕೆಟ್‌ ತಂಡ ಇದೀಗ ಅಂತಿಮ ಪಂದ್ಯದಲ್ಲಿ ವಿಶ್ವದ ಬಲಾಢ್ಯ ತಂಡಗಳಿಗೆ ಸೋಲುಣಿಸಿದ ನೆದರ್‌ಲ್ಯಾಂಡ್‌ ತಂಡ ಸವಾಲು ಒಡ್ಡಲಿದೆ. ಈಗಾಗಲೇ ಸಮಿಫೈನಲ್‌ಗೆ ಎಂಟ್ರಿ ಕೊಟ್ಟಿರುವ ಭಾರತ ತಂಡಕ್ಕೆ ಈ ಪಂದ್ಯ ಕೇವಲ ಅಭ್ಯಾಸ ಪಂದ್ಯವಾಗಲಿದೆ.

India vs Netherlands World cup 2023 Will Kohli world record here is the India playing XI
Image Credit to Original Source

ಭಾರತ ಕ್ರಿಕೆಟ್‌ ತಂಡ ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 8 ಗೆಲುವು ಕಂಡಿದ್ದು, ೯ನೇ ಗೆಲುವಿನೊಂದಿಗೆ ಸೆಮಿಫೈನಲ್‌ ಆಡಲು ಸಜ್ಜಾದಂತಿದೆ. ಭಾರತ ತಂಡದಲ್ಲಿನ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಯಕ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇನ್ನು ಬೌಲಿಂಗ್‌ ವಿಭಾಗ ಬಲಿಷ್ಠವಾಗಿದ್ದು, ಮೊಹಮ್ಮದ್‌ ಸೆಮಿ, ಮೊಹಮ್ಮದ್‌ ಸಿರಾಜ್‌, ಬೂಮ್ರಾ, ಕುಲದೀಪ್‌ ಯಾದವ್‌, ಜಡೇಜಾ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಈಗಾಗಲೇ ಭಾರತ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿರುವ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುತ್ತಾರಾ ಅನ್ನೋ ಬಗ್ಗೆ ಇದುವರೆಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಬದಲಾಗಿ ದಕ್ಷಿಣ ಆಫ್ರಿಕಾ ವಿರುದ್ದದ ತಂಡವನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು. ಅಲ್ಲದೇ ಸೆಮಿಫೈನಲ್‌ ಪಂದ್ಯಕ್ಕೆ ಈ ಪಂದ್ಯ ಹೆಚ್ಚು ನೆರವಾಗಲಿದೆ. ಹೀಗಾಗಿ ಬಲಾಢ್ಯ ತಂಡವನ್ನೇ ಕಣಕ್ಕೆ ಇಳಿಸಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ ಫ್ಲ್ಯಾನ್‌ ಹಾಕಿಕೊಂಡಿದೆ.

ವಿಶ್ವಕಪ್‌ನ ಇದುವರೆಗೆ ಟೀಂ ಇಂಡಿಯಾ ಸೋಲನ್ನೇ ಕಂಡಿಲ್ಲ. ಅದ್ರಲ್ಲೂ ಎಲ್ಲಾ ಪಂದ್ಯಗಳನ್ನೂ ಭರ್ಜರಿ ಅಂತರದಿಂದಲೇ ಗೆಲುವು ಕಂಡಿದೆ. ಕೊನೆಯ ಪಂದ್ಯವನ್ನು ಹೆಚ್ಚಿನ ಅಂತರದಲ್ಲಿ ಗೆಲುವು ಕಾಣುವ ಮೂಲಕ ಮತ್ತೊಂದು ವಿಶ್ವದಾಖಲೆ ಬರೆಯುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್‌ ತಂಡ ಕಣಕ್ಕೆ ಇಳಿಯಲಿದೆ.

ಇದನ್ನೂ ಓದಿ : Rohit Sharma – Virat Kohli : ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್‌ !

ನದೆರ್‌ಲ್ಯಾಂಡ್‌ ತಂಡವನ್ನು ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಸೋಲಿನ ರುಚಿ ತೋರಿಸಿವೆ. ಭಾರತ ವಿರುದ್ದವೂ ಕೂಡ ಅದೇ ಆಟವನ್ನು ನೆದರ್‌ಲ್ಯಾಂಡ್‌ ಆಟಗಾರರು ಮುಂದುವರಿಸುವ ಸಾಧ್ಯತೆಯಿದೆ.

ವಿಶ್ವದಾಖಲೆ ಬರೆಯುತ್ತಾ ವಿರಾಟ್‌ ಕೊಹ್ಲಿ ?
ಟೀಂ ಇಂಡಿಯಾದ ಭರವಸೆಯ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಈಗಾಗಲೇ ವಿಶ್ವಕಪ್‌ನಲ್ಲಿ ತಮ್ಮ ಆರ್ಭಟ ಮುಂದುವರಿಸಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ೪೯ ಶತಕ ಸಿಡಿಸಿದ್ದಾರೆ. ಈ ಮೂಲಕ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೂ ಒಂದು ಶತಕ ಬಾರಿಸಿದ್ರೆ ವಿರಾಟ್‌ ಕೊಹ್ಲಿ ಏಕದಿನ ದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಾಳೆಯ ಪಂದ್ಯ ಕೂಡ ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ವಿರಾಟ್‌ ಕೊಹ್ಲಿ ನೆದರ್‌ಲ್ಯಾಂಡ್‌ ವಿರುದ್ದ ಆರ್ಭಟಿಸುವುದು ಖಚಿತ.

India vs Netherlands World cup 2023 Will Kohli world record here is the India playing XI
Image Credit to Original Source

ಟೀಂ ಇಂಡಿಯಾ ಪರ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಖಚಿತ. ಒಂದನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದು, ವಿಶ್ವದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಶ್ರೇಯಸ್‌ ಅಯ್ಯರ್‌ ಹಾಗೂ ಕೆಎಲ್‌ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಉಳಿದಂತೆ ಸೂರ್ಯ ಕುಮಾರ್‌ ಯಾದವ್‌, ಜಡೇಜಾ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತ್ತುಗೊಳಿಸಿದ ಐಸಿಸಿ : ಅನಿಶ್ಚಿತತೆಯಲ್ಲಿ T20 ವಿಶ್ವಕಪ್ ಭವಿಷ್ಯ

ಮೊಹಮದ್‌ ಸೆಮಿ, ಮೊಹಮ್ಮದ್‌ ಸಿರಾಜ್‌, ಜಸ್ಪ್ರಿತ್‌ ಬೂಮ್ರಾ ವೇಗದ ಬೌಲರ್‌ ಆಗಿದ್ರೆ, ಕುಲದೀಪ್‌ ಯಾದವ್‌ ಸ್ಪಿನ್ನರ್‌ ಸ್ಥಾನವನ್ನು ತುಂಬಲಿದ್ದಾರೆ. ಸದ್ಯ ಈ ಹಿಂದೆ ಆಡಿರುವ ತಂಡವನ್ನೇ ಕಣಕ್ಕೆ ಇಳಿಸಲು ಭಾರತ ತಂಡ ರೆಡಿ ಆಗಿದೆ. ಸೂರ್ಯ ಕುಮಾರ್‌ ಯಾದವ್‌ ಬ್ಯಾಟಿನಿಂದ ಹೆಚ್ಚಿನ ರನ್‌ ನಿರೀಕ್ಷೆ ಮಾಡಲಾಗುತ್ತಿದೆ.

ಇಂಡಿಯಾ ಪ್ಲೇಯಿಂಗ್ XI
ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ಜಸ್ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಸೆಮಿ, ಕುಲದೀಪ್‌ ಯಾದವ್.‌

ವಿಶ್ವಕಪ್ 2023 ಭಾರತ ತಂಡ :

ಬ್ಯಾಟಿಂಗ್‌ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್
ವಿಕೆಟ್‌ ಕೀಪರ್‌ : ಕೆಎಲ್ ರಾಹುಲ್ (ಉಪನಾಯಕ, ಇಶಾನ್ ಕಿಶನ್
ವೇಗದ ಆಲ್ ರೌಂಡರ್ಸ್: ಶಾರ್ದೂಲ್ ಠಾಕೂರ್
ಸ್ಪಿನ್ ಆಲ್ ರೌಂಡರ್ಸ್: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್
ವೇಗದ ಬೌಲರ್ : ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ಸ್ಪಿನ್ನರ್‌ : ಕುಲದೀಪ್ ಯಾದವ್

India vs Netherlands World cup 2023 Will Kohli world record ? here is the India playing XI

Comments are closed.