ಸ್ಮಾರ್ಟ್‌ಪೋನ್ ವಾಲ್ಯೂಮ್ ಬಟನ್‌ನ 5 ಸ್ಮಾರ್ಟ್ ಟ್ರಿಕ್‌ಗಳು
ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್‌ಗಳು ಎಲ್ಲರಿಗೂ ತಿಳಿದಿದ್ದರೆ, ಇನ್ನು ಕೆಲವು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಅಂತಹವುಗಳಲ್ಲಿ ವಾಲ್ಯೂಮ್ ಬಟನ್ ಕೂಡಾ ಒಂದು.

ಸ್ಮಾರ್ಟ್‌ಫೋನ್ ಇಂದಿನ ಆಧುನಿಕ ಜಗತ್ತಿನ ಅತ್ಯಂತ ಅಗತ್ಯ ವಸ್ತು. ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು ಎಲ್ಲ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು ಎಂಬ ಹಂತಕ್ಕೆ ನಾವೀಗ ಬಂದಿದ್ದೇವೆ. ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್‌ಗಳು ಎಲ್ಲರಿಗೂ ತಿಳಿದಿದ್ದರೆ, ಇನ್ನು ಕೆಲವು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಅಂತಹವುಗಳಲ್ಲಿ ವಾಲ್ಯೂಮ್ ಬಟನ್ ಕೂಡಾ ಒಂದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಲ್ಯೂಮ್ ಬಟನ್ ಹಲವು ಕಾರ್ಯಗಳನ್ನು ಸಹ ನಿರ್ವಹಿಸಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ವಾಲ್ಯೂಮ್ ಬಟನ್ ಅನ್ನು ಸರಿಯಾಗಿ ಬಳಸಿಕೊಂಡರೆ ನಿಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ಮಾಡಕೊಳ್ಳಬಹುದು. ಅಂತಹ 5 ಉಪಯುಕ್ತ ಟ್ರಿಕ್ಸ್ ಇಲ್ಲಿದೆ ಓದಿ.
ಲಾಕ್ ಸ್ಕ್ರೀನ್‌ನಿಂದ ಕ್ಯಾಮೆರಾ ಓಪನ್
ಇಂದು ಅನೇಕ ಆಂಡ್ರಾಯ್ಡ್ ಫೋನ್‌ಗಳು ವಾಲ್ಯೂಮ್ ಬಟನ್ ಬಳಸಿಕೊಂಡು ಸ್ಕ್ರೀನ್ ಲಾಕ್ ಇರುವಾಗಲೇ ಕ್ಯಾಮೆರಾ ತೆರೆಯಬಹುದಾದ ಆಯ್ಕೆ ನೀಡುತ್ತವೆ. ಕೆಲವು ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಡಬಲ್ ಪ್ರೆಸ್ ವಾಲ್ಯೂಮ್ ಬಟನ್ ವೈಶಿಷ್ಟ್ಯ ನೀಡುತ್ತವೆ. ಇದರಿಂದ ಸ್ಕ್ರೀನ್ ಲಾಕ್ ಆಗಿದ್ದ ಸಮಯದಲ್ಲೂ ಸೆಲ್ಫಿ, ಫೋಟೋಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ.
ವಿಡಿಯೋ ರೆಕಾರ್ಡಿಂಗ್
ನಿಮಗೆ ವಿಡಿಯೋ ರೆಕಾರ್ಡಿಂಗ್ ಮಾಡಬೇಕೆಂದಾದಾಗ ಆನ್–ಸ್ಕ್ರೀನ್ ಶಟರ್ ಬಟನ್ ಒತ್ತುವ ಬದಲು ವಾಲ್ಯೂಮ್ ಬಟನ್ ಬಳಸಬಹುದು ಸೆಲ್ಫಿ ತೆಗೆದುಕೊಳ್ಳುವಾಗ ಈ ವೈಶಿಷ್ಟ್ಯ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ವಿಡಿಯೋ ಅಥವಾ ಫೋಟೋ ಕ್ಲಿಯರ್ ಆಗಿ ರೆಕಾರ್ಡ್ ಮಾಡಬಹುದು ಜೊತೆಗೆ ಫೋನ್ ಜಾರಿಬೀಳುವ ಅಪಾಯವೂ ಕಡಿಮೆ
ಸಿಂಗಲ್ ಟ್ಯಾಪ್‌ನಲ್ಲಿ ಕಾಲ್ ಅನ್ನು ಸೈಲಂಟ್ ಮಾಡಬಹುದು
ನೀವು ಮೀಟಿಂಗ್, ಕ್ಲಾಸ್ ಅಥವಾ ಯಾವುದಾದರೂ ಮುಖ್ಯವಾದ ಕೆಲಸದಲ್ಲಿದ್ದಾಗ, ನಿಮ್ಮ ಫೋನ್ ರಿಂಗ್ ಆಗುತ್ತಿದ್ದರೆ, ನೀವು ಹ್ಯಾಂಗ್ ಅಪ್ ಮಾಡುವ ಬದಲು ವಾಲ್ಯೂಮ್ ಬಟನ್ ಅನ್ನು ತ್ವರಿತವಾಗಿ ಬಳಸಬಹುದು. ಅಂತಹ ಸಂದರ್ಭಗಳಲ್ಲಿ, ವಾಲ್ಯೂಮ್ ಬಟನ್ ಅನ್ನು ಒಮ್ಮೆ ಒತ್ತುವುದರಿಂದ ಒಳಬರುವ ಕರೆಯ ರಿಂಗ್‌ಟೋನ್ ಅನ್ನು ಸೈಲಂಟ್ ಮಾಡಬಹುದು.
ಇದನ್ನೂ ಓದಿ: ನೋಕಿಯಾದಿಂದ ಹೊಸ 4G ಫೋನ್‌ಗಳು; AI ಫೀಚರ್‌ಗಳೊಂದಿಗೆ ಎಂಟ್ರಿ
ಹ್ಯಾಂಗ್ ಆದ ಫೋನ್ ಸರಿಪಡಿಸಿ
ವಾಲ್ಯೂಮ್ ಬಟನ್‌ನ ಮತ್ತೊಂದು ವೈಶಿಷ್ಟ್ಯವೆಂದರೆ ಫೀಜ್ ಆದ ಫೋನ್ ಅನ್ನು ಸಹ ಸರಿಪಡಿಸಬಹುದು. ಕೆಲವೊಮ್ಮೆ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ ಫ್ರೀಜ್ ಆಗುತ್ತದೆ. ಯಾವುದೇ ಸ್ಪರ್ಶಕ್ಕೂ ಸ್ಕ್ರೀನ್ ಪ್ರತಿಕ್ರಿಯಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ, ವಿಶೇಷವಾಗಿ ಸ್ಯಾಮ್‌ಸಂಗ್ ಸಾಧನಗಳಲ್ಲಿ, ಪವರ್ ಬಟನ್ ಮತ್ತು ವಾಲ್ಯೂಮ್ ಡೌನ್ ಬಟನ್ ಅನ್ನು ಏಕಕಾಲದಲ್ಲಿ ಕೆಲವು ಸೆಕೆಂಡುಗಳ ಕಾಲ ಒತ್ತುವುದರಿಂದ ಫೋನ್ ಮರುಪ್ರಾರಂಭಗೊಳ್ಳುತ್ತದೆ.
ಫೆವರೆಟ್ ಆಪ್ ಓಪನ್ ಮಾಡಿ
ವಾಲ್ಯೂಮ್ ಬಟನ್ ಅನ್ನು ಶಾರ್ಟ್‌ಕಟ್ ಕೀ ಆಗಿಯೂ ಬಳಸಬಹುದು. ಆಕ್ಸೆಸಿಬಿಲಿಟಿ ಶಾರ್ಟ್‌ಕಟ್ ಅಥವಾ ಬಟನ್ ಮ್ಯಾಪರ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು, ನೀವು ಎರಡೂ ವಾಲ್ಯೂಮ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತುವ ಮೂಲಕ WhatsApp, UPI ಅಪ್ಲಿಕೇಶನ್, ಫ್ಲ್ಯಾಶ್‌ಲೈಟ್ ಅಥವಾ ಯಾವುದೇ ಇತರ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಓಪನ್ ಮಾಡಬಹುದು. ಇದರಿಂದ ಪದೇ ಪದೇ ಹೋಮ್‌ಸ್ಕ್ರೀನ್ ತೆರೆಯುವುದು ತಪ್ಪುತ್ತದೆ.

