Upcoming 5G Smartphones : 2023 ರಲ್ಲಿ ಬಿಡುಗಡೆಯಾಗಲಿರುವ 5G ಸ್ಮಾರ್ಟ್‌ಫೋನ್‌ಗಳು

ಈಗ ಭಾರತದಲ್ಲಿ 5ಜಿ ನೆಟ್‌ವರ್ಕ್‌ಗಳ ಕಾಲ ಶುರುವಾಗಿದೆ. ಅದಕ್ಕೆ ತಕ್ಕಂತೆ ಮುಂದಿನ ವರ್ಷ ಅನೇಕ ಕಂಪನಿಗಳು 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡುವುದಾಗಿ ಹೇಳಿವೆ (Upcoming 5G Smartphones). 2023 ರ ಆರಂಭದಲ್ಲಿ ರೆಡ್ಮಿ ನೋಟ್‌ 12 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ. ಅದೇ ರೀತಿ ಒನ್‌ಪ್ಲಸ್‌ 11 5ಜಿ, iQOO 11 5G, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S23 ಸಹ ಬಿಡುಗಡೆಯಾಗಲಿದೆ. ಆದರೆ ಆ್ಯಪಲ್‌, ಗೂಗಲ್‌ನಂತಹ ಫ್ಲಾಗ್‌ಶಿಪ್‌ ಫೋನ್‌ಗಳಿಗಾಗಿ ಜನರು ಸ್ವಲ್ಪ ಕಾಯಬೇಕಾಗಿದೆ.

ಮುಂದಿನ ವರ್ಷ ಬಿಡುಗಡೆಯಾಗಲಿರುವ 5G ಸ್ಮಾರ್ಟ್‌ಫೋನ್‌ಗಳು:

ಶಿಯೋಮಿ ರೆಡ್ಮಿ ನೋಟ್‌ 12 5G:
4GB RAM ಮತ್ತು 128GB ಸಂಗ್ರಹಣೆಯಿರುವ ರೆಡ್ಮಿ ನೋಟ್‌ 12 5G ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 4 ಜೆನ್‌ 1 ಪ್ರೊಸೆಸ್ಸರ್‌ನೊಂದಿಗೆ ಬರಲಿದೆ. ಇದರ ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸೆಲ್‌ದ್ದಾಗಿದೆ. ಈ ಫೋನ್‌ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೆಡ್ಮಿ ನೋಟ್‌ 12 ಅನ್ನು13,690 ರೂ.ಗಳಿಗೆ ನಿರೀಕ್ಷಿಸಬಹುದಾಗಿದೆ.

ಶಿಯೋಮಿ ರೆಡ್ಮಿ ನೋಟ್‌ 12 ಪ್ರೋ 5G :
ಭಾರತದಲ್ಲಿ ರೆಡ್ಮಿ ನೋಟ್‌ 12 ಸರಣಿಯ ಫೋನ್‌ಗಳು ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಮಿಡ್‌ ರೇಂಜ್‌ನ 5 ಜಿ ಮೊಬೈಲ್‌ ಆಗಿದೆ. ಕಂಪನಿ ಹೇಳಿರುವ ಪ್ರಕಾರ ಅದು ರೆಡ್ಮಿ ನೋಟ್‌ 12 ಪ್ರೋ ಮತ್ತು ರೆಡ್ಮಿ ನೋಟ್‌ 12 ಪ್ರೋ+ ಗಳನ್ನು ಮಾರುಕಟ್ಟಗೆ ಬರಲಿದೆ. ಪ್ರೋ+ ಇದು 12 ಸರಣಿಯ ಹೈಯರ್‌–ಎಂಡ್‌ ಮಾದರಿಯ ಫೋನ್ ಆಗಿದೆ. 6.67 ಇಂಚಿನ FHD+ ಡಿಸ್ಪ್ಲೇ , 120Hz ರಿಫ್ರೆಶ್‌ ದರ, ಮಿಡಿಯಾಟೆಕ್‌ ಡೈಮೆನ್ಸಿಟಿ 1080 SoC ಚಿಪ್‌ಸೆಟ್‌ ಹೊಂದಿರಲಿದೆ. ಇದು 5,000mAh ಬ್ಯಾಟರಿ ಜೊತೆ 200W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ರೆಡ್ಮಿ ನೋಟ್‌ 12 ಪ್ರೋ ಅನ್ನು 20,590 ರೂ.ಗಳಿಗೆ ನಿರೀಕ್ಷಿಸಬಹುದಾಗಿದೆ.

ರಿಯಲ್‌ಮಿ 10 5G:
ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ರಿಯಲ್‌ಮಿ, ರಿಯಲ್‌ಮಿ 10 5G ಫೋನ್‌ ಅನ್ನು 14,873 ರೂ. ಗಳಿಗೆ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನು 128ಜಿಬಿ ಮತ್ತು 256 ಜಿಬಿ ಸಂಗ್ರಹಣೆಯ ಎರಡು ಆವೃತ್ತಿಗಳಲ್ಲಿ ನಿರೀಕ್ಷಿಸಬಹುದಾಗಿದೆ. 6.6 ಇಂಚಿನ ಡಿಸ್ಪ್ಲೇ, ಮೀಡಿಯಾಟೆಕ್‌ MT 6833 ಡೈಮೆನ್ಸಿಟಿ 700 ಚಿಪ್‌ಸೆಟ್‌ ಮತ್ತು 5000mAh ಬ್ಯಾಟರಿಗಳನ್ನು ಇದರಲ್ಲಿ ನಿರೀಕ್ಷಿಸಬಹುದಾಗಿದೆ.

ಒನ್‌ಪ್ಲಸ್‌ ನಾರ್ಡ್‌ N20 SE:
ಈ ವರ್ಷ ಉತ್ತಮ ಫೋನ್‌ಗಳನ್ನು ಬಿಡುಗಡೆ ಮಾಡಿದ್ದ ಒನ್‌ಪ್ಲಸ್‌ ಮುಂದಿನ ವರ್ಷ ಬಜೆಟ್‌ ಬೆಲೆಯ 5G ಫೋನ್‌ ಬಿಡುಗಡೆ ಮಾಡಲಿದೆ. ನಾರ್ಡ್‌ N20 SE ಅನ್ನು 15,000 ರೂ. ಗಳಿಗೆ ನಿರೀಕ್ಷಿಸಬಹುದಾಗಿದೆ. ಮಿಡಿಯಾಟೆಕ್‌ MT6765G ಹೀಲಿಯಂ, G35 ಚಿಪ್‌ಸೆಟ್‌ನ ಪ್ರೊಸೆಸ್ಸರ್‌, ಹಿಂಬದಿಯಲ್ಲಿ 50 MP ಮುಖ್ಯ ಕ್ಯಾಮೆರಾವಿರುವ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಒಳಗೊಂಡಿರುವ ಸಾಧ್ಯತೆಯಿದೆ. ಇದು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾ ಹೊಂದಿರುವ ನಿರೀಕ್ಷೆಯಿದೆ.

ವಿವೋ Y35 5G :
ಭಾರತದಲ್ಲಿ ಹೆಸರು ಮಾಡಿರುವ ವಿವೋ, Y35 5G ಅನ್ನು ಮೂರು ಆವೃತ್ತಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 4 GB, 6GB, ಮತ್ತು 8GB RAM ನೊಂದಿಗೆ ಬರಲಿದೆ. ಮೂರು ಆವೃತ್ತಿಗಳು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು 13ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ ಗಳಿರು ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಮತ್ತು 5 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ವಿವೋ Y35 5G ಸ್ಮಾರ್ಟ್‌ಫೋನ್‌ 6.51ಇಂಚಿನ ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ ಬರಲಿದೆ.

ಒಪ್ಪೋ A58x 5G:
ಕ್ಯಾಮೆರಾಗಳಿಂದ ಹೆಸರುವಾಸಿಯಾಗಿರುವ ಒಪ್ಪೋ ಮುಂದಿನ ವರ್ಷ A58x 5G ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಇದು ಬಜೆಟ್‌ ಬೆಲೆಯ 5ಜಿ ಸ್ಮಾರ್ಟ್‌ಫೋನ್‌ ಆಗಿದೆ. ಹಿಂಬದಿಯಲ್ಲಿ 13 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ಗಳ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ನಿರೀಕ್ಷಿಸಬಹುದಾಗಿದೆ. ಮಿಡೆಇಯಾಟೆಕ್‌ MT6833 ಡೈಮೆನ್ಸಿಟಿ 700 ಚಿಪ್‌ಸೆಟ್‌ ನಿಂದ ಚಾಲಿತವಾಗಲಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆಯನ್ನು 13,990 ರೂ. ಗಳಿಗೆ ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ :Top 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳಿವು

ಇದನ್ನೂ ಓದಿ : Metro AG – Reliance Retail Ventures : 2,850 ಕೋಟಿ ರೂ.ಗೆ ಮೆಟ್ರೋ ಎಜಿಯನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ರಿಟೇಲ್ ವೆಂಚರ್ಸ್

(Upcoming 5G Smartphones under rs 20000 in India in 2023)

Comments are closed.