ಶಕ್ತಿಶಾಲಿ ಕ್ಯಾಮೆರಾ, ಸೂಪರ್ ಡಿಸ್ಪ್ಲೇ ಇರುವ ವಿವೋ X300 ಸರಣಿ ಫೋನ್‌ಗಳು ಅನಾವರಣ
Vivo X300 Series: ವಿವೋ ತನ್ನ ಬಹುನಿರೀಕ್ಷಿತ ವಿವೋ X300 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ.
ಈ ಸರಣಿಯಲ್ಲಿ X300 ಮತ್ತು X300 ಪ್ರೋ ಸ್ಮಾರ್ಟ್‌ಫೋನ್ ಸೇರಿವೆ. ಈ ಎರಡೂ ಫೋನ್‌ಗಳ ವೈಶಿಷ್ಟ್ಯಗಳು ಬಹಿರಂಗವಾಗಿವೆ. ಇವು X200 ಸರಣಿಯ ಅಪಗ್ರೇಡೆಡ್ ಫೋನ್ ಆಗಿದೆ.
ಛಾಯಾಗ್ರಹಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಈ ಫೋನ್ ಅನ್ನು ಪರಿಚಯಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಏಕೆಂದರೆ X300 ಸರಣಿಯ ಫೋನ್‌ಗಳು ಝೈಸ್ ಬ್ರಾಂಡ್ ಕ್ಯಾಮೆರಾದೊಂದಿಗೆ ಬರುತ್ತವೆ.
ಮೀಡಿಯಾಟೆಕ್‌ನ ಇತ್ತೀಚಿನ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗುವ ಈ ಫೋನ್‌ಗಳು ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ ಓಸ್ 6 ನಲ್ಲಿ ಕಾರ್ಯನಿರ್ವಹಿಸುತ್ತವೆ.
ವಿವೋ X300 ಸರಣಿಯ ಫೋನ್‌ನಲ್ಲಿ ಏನೇನು ವೈಶಿಷ್ಟ್ಯಗಳನ್ನು ನೀಡಲಾಗಿದೆ ಎಂದು ನೋಡೋಣ.
ವಿವೋ X300 ಪ್ರೋ ವೈಶಿಷ್ಟ್ಯಗಳು
ವಿವೋ X300 ಪ್ರೋ, 6.78-ಇಂಚಿನ 1.5K ಫ್ಲಾಟ್ BOE Q10+ LTPO OLED ಡಿಸ್ಪ್ಲೇಯನ್ನು ಮತ್ತು 120Hz ರಿಫ್ರೆಶ್ ದರ ಹೊಂದಿದೆ.
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ.
LPDDR5x RAM ಮತ್ತು UFS 4.1 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ OS 6 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದು ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿದೆ. ವಿವೋ X300 ಪ್ರೊ 50-ಮೆಗಾಪಿಕ್ಸೆಲ್ ಸೋನಿ LYT-828 ಮುಖ್ಯ ಸಂವೇದಕವನ್ನು ಹೊಂದಿದೆ.
ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ, 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಅಲ್ಟ್ರಾವೈಡ್ ಶೂಟರ್ ಮತ್ತು OIS ಬೆಂಬಲದೊಂದಿಗೆ 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಹೊಂದಿದೆ.
ಇದು ಝೈಸ್ ನ 2.35x ಟೆಲಿಫೋಟೋ ಟೆಲಿಕನ್ವರ್ಟರ್ ಆಯ್ಕೆ ಪರಿಕರವನ್ನು ಸಹ ಬೆಂಬಲಿಸುತ್ತದೆ.
ಝೈಸ್ ಚಾಲಿತ ಕ್ಯಾಮೆರಾ ವ್ಯವಸ್ಥೆಯು ಕ್ರಮವಾಗಿ ಪೋಸ್ಟ್-ಪ್ರೊಸೆಸಿಂಗ್ ಮತ್ತು ಪ್ರಿ-ಪ್ರೊಸೆಸಿಂಗ್‌ಗಾಗಿ V3+ ಮತ್ತು Vs1 ಇಮೇಜಿಂಗ್ ಚಿಪ್‌ಗಳೊಂದಿಗೆ ಇರುತ್ತದೆ.
ಮುಂಭಾಗದಲ್ಲಿ, ಈ ಫೋನ್ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಸೆಲ್ಫಿ ಶೂಟರ್ ಅನ್ನು ಹೊಂದಿದೆ.
ವಿವೋ X300 ಪ್ರೋ, 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ 6510mAh ಬ್ಯಾಟರಿಯನ್ನು ಹೊಂದಿದೆ.
ಸುರಕ್ಷತೆಗಾಗಿ ಇದು ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.
ಫೋನ್ ನಲ್ಲಿ ಡ್ಯುಯಲ್ ಸ್ಪೀಕರ್‌ಗಳು, X-ಸರಣಿಯ ಅತಿದೊಡ್ಡ X-ಆಕ್ಸಿಸ್ ಲೀನಿಯರ್ ಮೋಟಾರ್, ಆಕ್ಷನ್ ಬಟನ್, ಸಿಗ್ನಲ್ ಆಂಪ್ಲಿಫಯರ್ ಚಿಪ್ ಮತ್ತು ನಾಲ್ಕು ವೈ-ಫೈ ಬೂಸ್ಟರ್‌ಗಳಿವೆ.
ಸಂಪರ್ಕ ಆಯ್ಕೆಗಳಲ್ಲಿ Wi-Fi 7, ಬ್ಲೂಟೂತ್ 5.4, NFC, GPS ಮತ್ತು USB 3.2 ಜೆನ್ 1 ಟೈಪ್-C ಪೋರ್ಟ್ ಸೇರಿವೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಫೋನ್ ಅನ್ನು IP68 ರೇಟಿಂಗ್ ಮಾಡಲಾಗಿದೆ. ಇದರ ತೂಕ 226 ಗ್ರಾಂ. ಇದೆ.
ಇದನ್ನೂ ಓದಿ: 50MP ಸೆಲ್ಪಿ ಕ್ಯಾಮೆರಾ, 200MP ಮೇನ್ ಕ್ಯಾಮೆರಾ ಇರುವ ವಿವೋ V60e ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
ವಿವೋ X300 ನ ವೈಶಿಷ್ಟ್ಯಗಳು
ವಿವೋದ ಸ್ಟ್ಯಾಂಡರ್ಡ್ X300, X300 ಪ್ರೋನಂತೆಯೇ ಅದೇ ಚಿಪ್‌ಸೆಟ್, ಆಪರೇಟಿಂಗ್ ಸಿಸ್ಟಮ್, ಕನೆಕ್ಟಿವಿಟಿ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 150.57×71.92×7.95mm ಅಳತೆ ಮತ್ತು 190 ಗ್ರಾಂ ತೂಕವಿದೆ.
ಈ ಮೂಲ ಮಾದರಿಯು 120Hz ರಿಫ್ರೆಶ್ ದರದೊಂದಿಗೆ 6.31-ಇಂಚಿನ 1.5K ಫ್ಲಾಟ್ BOE Q10+ LTPO OLED ಪರದೆಯನ್ನು ಹೊಂದಿದೆ.
ಇದರ ಚಾರ್ಜಿಂಗ್ ವ್ಯವಸ್ಥೆಯು ಪ್ರೊ ಆವೃತ್ತಿಯಂತೆಯೇ ಇದೆ. ಆದರೆ ಇದರಲ್ಲಿ 6040mAh ಸಣ್ಣ ಬ್ಯಾಟರಿಯನ್ನು ಪ್ಯಾಕ್ ಮಾಡಲಾಗಿದೆ.
ಇನ್ನು ಕ್ಯಾಮೆರಾಗಳ ವಿಷಯದಲ್ಲಿ, ವಿವೋ X300 ಫೋನ್ ಪ್ರೊ ಮಾದರಿಯಂತೆಯೇ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಹಿಂಭಾಗದಲ್ಲಿ, ಇದು 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HPB ಪ್ರಾಥಮಿಕ OIS-ಬೆಂಬಲಿತ ಸಂವೇದಕ, ಅಲ್ಟ್ರಾವೈಡ್ ಲೆನ್ಸ್ ಹೊಂದಿರುವ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಸಂವೇದಕ ಮತ್ತು 50-ಮೆಗಾಪಿಕ್ಸೆಲ್ LYT-602 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.
ಝೈಸ್‌ನಿಂದ ಟ್ಯೂನ್ ಮಾಡಲಾದ ಈ ಸೆಟಪ್, V3+ ಪೋಸ್ಟ್-ಪ್ರೊಸೆಸಿಂಗ್ ಇಮೇಜಿಂಗ್ ಚಿಪ್ ಮತ್ತು ಝೈಸ್‌ನ 2.35x ಟೆಲಿಫೋಟೋ ಟೆಲಿಕನ್ವರ್ಟರ್ ಆಯ್ಕೆ ಪರಿಕರಕ್ಕೆ ಬೆಂಬಲಿಸುತ್ತದೆ.
ರೂಪಾಂತರ ಮತ್ತು ಬೆಲೆ
ಚೀನಾದಲ್ಲಿ ಬಿಡುಗಡೆಯಾದ ವಿವೋ X300ನ ಬೆಲೆಯು ಈ ರೀತಿಯಾಗಿದೆ:
12GB+256GB ರೂಪಾಂತರಕ್ಕೆ CNY 4,399 (ಸುಮಾರು 54,700 ರೂ.)
16GB+256GB ರೂಪಾಂತರಕ್ಕೆ CNY 4,699 (ಸುಮಾರು 58,400 ರೂ.)
12GB+512GB ರೂಪಾಂತರಕ್ಕೆ CNY 4,999 (ಸುಮಾರು 62,100 ರೂ.)
16GB+512GB ರೂಪಾಂತರಕ್ಕೆ CNY 5,299 (ಸುಮಾರು 65,900 ರೂ.) ಮತ್ತು
16GB+1TB ರೂಪಾಂತರಕ್ಕೆ CNY 5,799 (ಸುಮಾರು 72,900 ರೂ.) ಆಗಿದೆ.
ಇದು ಫ್ರೀ ಬ್ಲೂ, ಕಂಫರ್ಟಬಲ್ ಪರ್ಪಲ್, ಪ್ಯೂರ್ ಬ್ಲ್ಯಾಕ್ ಮತ್ತು ಲಕ್ಕಿ ಬಣ್ಣಗಳಲ್ಲಿ ಲಭ್ಯವಿದೆ.
ಇದೇ ಸರಣಿಯ ವಿವೋ X300 ಪ್ರೊ ಫೋನ್‌ನ ಬೆಲೆಯು ಹೀಗಿದೆ:
12GB + 256GB ರೂಪಾಂತರಕ್ಕೆ CNY 5,299 (ಸರಿಸುಮಾರು 65,900 ರೂ.)
16GB + 512GB ರೂಪಾಂತರದ ಬೆಲೆ CNY 5,999 (ಸರಿಸುಮಾರು 74,600 ರೂ.)
16GB + 1TB ರೂಪಾಂತರದ ಬೆಲೆ CNY 6,699 (ಸರಿಸುಮಾರು 83,300 ರೂ.)
16GB + 1TB ಸ್ಯಾಟಲೈಟ್ ಕಮ್ಯುನಿಕೇಷನ್ ಆವೃತ್ತಿಯ ಬೆಲೆ CNY 8,299 (ಸರಿಸುಮಾರು 1,03,200 ರೂ.)
ಈ ಫೋನ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ – ವೈಲ್ಡರ್ನೆಸ್ ಬ್ರೌನ್, ಸಿಂಪಲ್ ವೈಟ್, ಫ್ರೀ ಬ್ಲೂ ಮತ್ತು ಪ್ಯೂರ್ ಬ್ಲ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: 15,000ಕ್ಕಿಂತ ಕಡಿಮೆ ಬೆಲೆ, 50MP OIS ಕ್ಯಾಮೆರಾ: ಮೋಟೋರೋಲಾದ ದೀಪಾವಳಿ ಧಮಾಕಾ!
(Vivo X300 Series phone launched with 200MP Camera and powerful battery)



