Facebook ಮಕ್ಕಳಿಗೆ ಹಾನಿಕರ ಎಂದ ಫೇಸ್‌ಬುಕ್‌ ಮಾಜಿ ದತ್ತಾಂಶ ತಜ್ಞೆ

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಮಕ್ಕಳಿಗೆ ಹಾನಿಕಾರಕವಾಗಿದ್ದು, ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಫೇಸ್‌ಬಕ್‌ನ ಮಾಜಿ ದತ್ತಾಂಶ ತಜ್ಞೆ ಫ್ರಾನ್ಸಿಸ್‌ ಹೌಗೆನ್‌ ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕ ಸಂರಕ್ಷಣೆ ಕುರಿತ ಸೆನೆಟ್‌ ವಾಣಿಜ್ಯ ಉಪಸಮಿತಿ ಮುಂದೆ ಹಾಜರಾಗಿ ಈ ಹೇಳಿಕೆ ದಾಖಲಿಸಿರುವ ಅವರು, ‘ಫೇಸ್‌ಬುಕ್‌ನಿಂದ ಆಗುವ ಅಪಾಯಗಳನ್ನು ತಡೆಗಟ್ಟಲು ಸರ್ಕಾರದ ಕಟ್ಟು ನಿಟ್ಟಿನ ಮೇಲ್ವಿಚಾರಣೆಯ ಅಗತ್ಯವಿದೆ’ ಎಂದು ಆಗ್ರಹಿಸಿದ್ದಾರೆ.

ಕೇವಲ ಫೇಸ್‌ಬುಕ್‌ ಮಾತ್ರವಲ್ಲ ಇನ್‌ಸ್ಟಾಗ್ರಾಂನಿಂದಲೂ ಕೆಲ ಹದಿಹರೆಯದವರಿಗೆ ಆಗುತ್ತಿರುವ ಹಾನಿಯ ಬಗ್ಗೆ ಹಾಗೂ ಸಾರ್ವಜನಿಕ ಹೋರಾಟಕ್ಕೆ ಸಂಬಂಧಿಸಿದಂತೆ ತಪ್ಪು ಮತ್ತು ದ್ವೇಷಪೂರಿತ ಮಾಹಿತಿ ಹಂಚಿಕೆ ಆಗಿದ್ದ ಕುರಿತು ಕಂಪನಿಯ ಆಂತರಿಕ ಸಂಶೋಧನೆಯಿಂದ ಸ್ಪಷ್ಟವಾಗಿದ್ದರೂ, ಇನ್‌ಸ್ಟಾಗ್ರಾಮ್‌ನಲ್ಲಿ ಬದಲಾವಣೆಗಳನ್ನು ತರುವಲ್ಲಿ ಕಂಪನಿ ವಿಫಲವಾಗಿದೆ. ಈ ಮೂಲಕ ಅದು ಅಪ್ರಾಮಾಣಿಕತೆ ತೋರಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: China’s Electricity Problems : ಕೆಂಪು ರಾಷ್ಟ್ರದಲ್ಲೀಗ ವಿದ್ಯುತ್‌ ಕೊರತೆ : ಚೀನಾದಲ್ಲಿ ವಿದ್ಯುತ್ ಕಾರ್ಖಾನೆಗಳು ಕ್ಲೋಸ್ !

ಕಂಪನಿಯಲ್ಲಿ ಕೆಲಸ ಬಿಡುವ ಮೊದಲು ಹೌಗೆನ್‌ ಅವರು, ಆಂತರಿಕ ಸಂಶೋಧನೆಗೆ ಸಂಬಂಧಿಸಿದ ಸಹಸ್ರಾರು ಪುಟಗಳ ದಾಖಲೆಗಳನ್ನು ಗೋಪ್ಯವಾಗಿ ನಕಲು ಮಾಡಿಕೊಂಡಿದ್ದರು. ಸೆನೆಟ್‌ನ ಎರಡೂ ಪಕ್ಷಗಳ ಸದಸ್ಯರು ಹಾಗೂ ಹಲವು ಗ್ರಾಹಕ ವಕೀಲರ ಮನವಿಗಳ ಮೇರೆಗೆ ಅವರು ಸಮಿತಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿದ್ದಾರೆ.

37 ವರ್ಷದ ಹೌಗೆನ್‌ ಅವರು 2019ರಲ್ಲಿ ಫೇಸ್‌ಬುಕ್‌ನಲ್ಲಿ ಕೆಲಸಕ್ಕೆ ಸೇರುವ ಮೊದಲು ಗೂಗಲ್‌, ಪಿನ್‌ಟ್ರೆಸ್ಟ್‌ ಮತ್ತು ಯೆಲ್ಪ್‌ ಕಂಪನಿಗಳಲ್ಲಿ 15 ವರ್ಷ ಕೆಲಸ ಮಾಡಿದ್ದರು. ಅವರು ಕಂಪ್ಯೂಟರ್‌ ಎಂಜಿನಿಯರಿಂಗ್‌ ಪದವೀಧರೆಯಾಗಿದ್ದು, ಹಾರ್ವಡ್‌ ವಿಶ್ವವಿದ್ಯಾಲಯದಿಂದ ವ್ಯವಹಾರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ : ಸುಳ್ಳು ಹೇಳಿ ಸಿಕ್ಕಿ ಬಿದ್ದ ಪ್ರಧಾನಿ ಇಮ್ರಾನ್ ಖಾನ್

ಕಂಪನಿಯ ನಾಯಕತ್ವಕ್ಕೆ ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಮ್‌ಗಳನ್ನು ಹೇಗೆ ಸುರಕ್ಷಿತವಾಗಿಸಬಹುದು ಎಂಬುದು ತಿಳಿದಿದೆ. ಆದರೆ ಅವರು ಈ ಅಗತ್ಯ ಬದಲಾವಣೆಗಳನ್ನು ತರಲು ಮುಂದಾಗುತ್ತಿಲ್ಲ. ಇದರ ಹಿಂದೆ ಲಾಭದ ಉದ್ದೇಶ ಇದೆ’ ಎಂದು ಹೌಗೆನ್‌ ದೂರಿದ್ದಾರೆ. ಈ ಸಂಬಂಧ ಸಂಸತ್ತು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

(A former Facebook expert at Facebook called Facebook harmful to children)

Comments are closed.