actress meghana raj : ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾದ ನಟಿ ಮೇಘನಾ ರಾಜ್​

actress meghana raj : ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟಿ ಮೇಘನಾ ರಾಜ್​ ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್​ ಫ್ರಾನ್ಸಿಸೋದ ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ ಆಯೋಜಿಸಿದ್ದ ಫೆಸ್ಟಿವಲ್​ ಆಫ್​ ಗ್ಲೋಬ್​ ಸಮಾರಂಭದ ಪ್ರಯುಕ್ತ ನಟಿ ಮೇಘನಾ ರಾಜ್​ಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಕಳೆದ 40 ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು ಹಿಂದೊಮ್ಮೆ ಬಿಗ್​ ಬಿ ಅಮಿತಾಬ್​ ಬಚ್ಛನ್​ ಕೂಡ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಬಾರಿ ಈ ಪ್ರಶಸ್ತಿಯು ಕನ್ನಡದ ತಾರೆ ಮೇಘನಾ ರಾಜ್​ಗೆ ಸಂದಿದೆ.


ಭಾರತದ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮದ ಪ್ರಯುಕ್ತ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಹೀಗಾಗಿ ಆಗಸ್ಟ್​ ತಿಂಗಳಲ್ಲಿಯೇ ಈ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಆಗಸ್ಟ್​ 19,20 ಹಾಗೂ 21ರಂದು ಈ ಕಾರ್ಯಕ್ರಮ ನಡೆಯಲಿದೆ. ಕ್ಯಾಲಿಫೋರ್ನಿಯಾದ ಸ್ಥಳೀಯ ನಾಯಕರು ಸೇರಿದಂತೆ ಲಕ್ಷಕ್ಕೂ ಅಧಿಕ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.


ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜನೆಯಾಗುತ್ತದೆ. ಈ ಸಮಾರಂಭದಲ್ಲಿ ಭಾರತದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದರಲ್ಲೂ ಹೆಚ್ಚಾಗಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರಿಗೆಯೇ ಈ ಪ್ರಶಸ್ತಿ ಸಂದುವುದು ಹೆಚ್ಚು. ಈಗಾಗಲೇ ಅಮಿತಾಬ್​ ಬಚ್ಚನ್​, ದೇವಾನಂದ್​, ವಿನೋದ್​ ಖನ್ನಾ , ಧರ್ಮೇಂದ್ರ ಹಾಗೂ ಆಶಾ ಪರೇಕ್​ ಸೇರಿದಂತೆ ಅನೇಕರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೀಗ ಈ ಸಾಲಿಗೆ ನಟಿ ಮೇಘನಾ ರಾಜ್​ ಕೂಡ ಸೇರಿದಂತಾಗಿದೆ.


FOG HERO ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾತನಾಡಿದ ನಟಿ ಮೇಘನಾ ರಾಜ್​, ಅಮಿತಾಬ್​ ಬಚ್ಚನ್​ರಂತಹ ಗಣ್ಯರು ಸ್ವೀಕರಿಸಿದ ಪ್ರಶಸ್ತಿಗೆ ನಾನು ಆಯ್ಕೆಯಾಗಿದ್ದೇನೆ ಎಂಬುದೇ ನನಗೆ ಸಂತಸದ ವಿಚಾರವಾಗಿದೆ. ನನ್ನ ತಂದೆ ನನಗೆ ಈ ವಿಚಾರವನ್ನು ತಿಳಿಸಿದರು. ಕನ್ನಡ ಚಿತ್ರರಂಗ ಪ್ರಸ್ತುತ ವಿಶ್ವಾದ್ಯಂತ ಹೆಸರು ಗಳಿಸಿದೆ. ಓರ್ವ ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾನೇ ಖುಷಿಯಿದೆ ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡರು.


ಕನ್ನಡತಿ ಮೇಘನಾ ರಾಜ್​ ಈ ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದ್ದಾರೆ. ನಟಿ ಮೇಘನಾ ರಾಜ್​ ಆಗಸ್ಟ್​ 21ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಇದನ್ನು ಓದಿ : Tasteless Kebabs : ಪತ್ನಿ ಮಾಡಿಕೊಟ್ಟ ಕಬಾಬ್​ ರುಚಿಯಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ..!

ಇದನ್ನೂ ಓದಿ : Salman Khan : ಸಲ್ಮಾನ್​​ ಖಾನ್​ಗೆ ಲೈಸೆನ್ಸ್​ ಪರವಾನಗಿ ನೀಡಿದ ಮುಂಬೈ ಪೊಲೀಸ್​ ಇಲಾಖೆ

actress meghana raj with fog hero award for excellence in the indian film industry for over a decade

Comments are closed.