Bajaj Pulsar Price Hike: ಬಜಾಜ್ ಪಲ್ಸರ್ ಬೆಲೆ ಹೆಚ್ಚಳ; ಪರಿಷ್ಕೃತ ಬೆಲೆ ಕಾಸಿಗೆ ತಕ್ಕ ಕಜ್ಜಾಯವೇ?

ಬಜಾಜ್ ಭಾರತದಲ್ಲಿ ಪಲ್ಸರ್ N250 ಮತ್ತು ಪಲ್ಸರ್ F250 ಬೆಲೆಗಳನ್ನು (Bajaj Pulsar Price Hike) ಹೆಚ್ಚಿಸಿದೆ. ಹೊಸದಾಗಿ ಬೆಲೆಯನ್ನು ಪರಿಷ್ಕರಣೆ ಮಾಡಿದ ನಂತರ ಪಲ್ಸರ್ N250 ಮತ್ತು ಪಲ್ಸರ್ F250 ಕ್ರಮವಾಗಿ ಬೆಲೆ ರೂ. 1,117 ಮತ್ತು ರೂ. 915.ರೂಗಳಷ್ಟು ಏರಿಕೆಯಾಗಿದೆ. ಅಂದರೆ ಪಲ್ಸರ್ N250 ಬೆಲೆ ಈಗ ರೂ. 1,39,117 ಆದರೆ ಪಲ್ಸರ್ F250 ಬೆಲೆ ರೂ. 1,40,915 ಆಗಿದೆ. ಈ ಎರಡೂ ಬೈಕುಗಳು ಕಳೆದ ವರ್ಷವಷ್ಟೇ ಭಾರತದ ಮಾರುಕಟ್ಟೆಗೆ (Indian Market) ಲಗ್ಗೆಯಿಟ್ಟು ಬೈಕ್ ಪ್ರಿಯರಿಗೆ ಲಭ್ಯವಿದ್ದವು.  ಹಿಂದಿನ ವರ್ಷ ಬಿಡುಗಡೆಯಾದಾಗ ಇದ್ದ ವಿಶೇಷತೆ ಮತ್ತು ವೈಶಿಷ್ಟ್ಯಗಳನ್ನೇ ಹೊಂದಿದ್ದರೂ ಸಹ ಇದೀಗ ಪಲ್ಸರ್ N250 ಮತ್ತು ಪಲ್ಸರ್ F250 ಎರಡೂ ಬೈಕುಗಳ (Bajaj Pulsar N 250 F 250) ಬೆಲೆ ಕೊಂಚ ಏರಿಕೆಯಾಗಿದೆ.

ಭಾರತದ ಆಟೊಮೊಬೈಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಕಂಡುಬರುತ್ತಿದೆ.  ಕಚ್ಚಾವಸ್ತುಗಳ ಬೆಲೆ ಏರಿಕೆ ಗ್ರಾಹಕದ ಜೇಬಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಪಲ್ಸರ್ N250 ಮತ್ತು ಪಲ್ಸರ್ F250 ಎರಡೂ ಬೈಕುಗಳು ಹಳೆಯ ಪಲ್ಸರ್ 220 ಎಫ್‌ ಮಾಡೆಲ್‌ಗೆ ಬದಲಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಈ ಎರಡೂ ಬೈಕ್‌ಗಳು ದೇಶದಲ್ಲಿಅತ್ಯಂತ  ಜನಪ್ರಿಯ ಬೈಕುಗಳಾಗಿದ್ದು ಸದ್ಯ ಆಗಿರುವ ಬೆಲೆ ಏರಿಕೆ ಇವುಗಳ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಎಂದು ಕಾದುನೋಡಬೇಕಿದೆ.

ಪಲ್ಸರ್ N250 ಮತ್ತು ಪಲ್ಸರ್ F250 ಬೈಕುಗಳು ಸ್ಪ್ಲಿಟ್-ಶೈಲಿಯ ಸೀಟ್ ಎರಡು-ಪೀಸ್ ಗ್ರಾಬ್ ರೈಲ್, ಅಪ್‌ಸ್ವೆಪ್ಟ್ ಡ್ಯುಯಲ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಕೋನೀಯ ಕನ್ನಡಿಗಳನ್ನು ಹೊಂದಿದೆ. N250 ರೋಡ್‌ಸ್ಟರ್ ತರಹದ ನೇಕೆಡ್ ಮೋಟಾರ್‌ಸೈಕಲ್ ಆಗಿದ್ದು, F250 ಅರ್ಧ ಫೇರ್ಡ್ ವಿನ್ಯಾಸವನ್ನು ಹೊಂದಿದೆ. ಫ್ರೇಮ್-ಲೆಸ್ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಲಾ-ಎಲ್ಇಡಿ ಬೆಳಕಿನ ವ್ಯವಸ್ಥೆ ಮತ್ತು ಮಿಶ್ರಲೋಹದ ಚಕ್ರಗಳನ್ನು ಸಹ ಹೊಂದಿವೆ.

ಸದ್ಯ ಬೆಲೆ ಪರಿಷ್ಕರಣೆ ನಂತರ ಎಕ್ಸ್ ಶೋ ರೂಂನಲ್ಲಿ ಬಜಾಜ್ ಪಲ್ಸರ್ N250 ಮಾದರಿಗೆ 1,39,117 ಮತ್ತು  F250 ಆವೃತ್ತಿಯ ಬೆಲೆ ರೂ. 1,40,915 ದೊರೆಯಲಿವೆ.  

ಇದನ್ನೂ ಓದಿ: Top 5 Electric Scooters: ಭಾರತದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ ಯಾವುದು?

(Bajaj Pulsar Price Hike N 250 F 250 Costlier in India)

Comments are closed.