Road Trip : ಮಾನ್ಸೂನ್‌ನಲ್ಲಿ ಪ್ರಕೃತಿಯ ಸುಂದರ ದೃಶ್ಯ ಸವಿಯಲು ಸ್ಪೆಷಲ್‌ ಆಗಿ ರೋಡ್‌ ಟ್ರಿಪ್‌ಗೆ ಹೋಗಿ

ಮಳೆಗಾಲದ (Monsoon) ದಿನಗಳಲ್ಲಿ ರೋಡ್‌ ಮೂಲಕ ಪ್ರವಾಸಕ್ಕೆ (Road Trip) ಹೋಗುವುದು ಒಂದು ಅವಿಸ್ಮರಣೀಯ ಅನುಭವ. ತುಂತುರು ಮಳೆ, ತಿರುವು ರಸ್ತೆಗಳು, ಅಲ್ಲಲ್ಲಿ ಕಾಣಿಸುವ ಸಣ್ಣ ಸಣ್ಣ ಝರಿಗಳು, ಹಸಿರಿನಿಂದ ಕಂಗೊಳಿಸುವ ವಿಶಾಲವಾದ ಹೊಲ ಗದ್ದೆಗಳು ಅವೆಲ್ಲವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಮಳೆಗಾಲದ ಪ್ರಕೃತಿ ಸೌಂದರ್ಯ ವಿಶೇಷವಾದದ್ದು. ಕೆಲವು ನಿರ್ದಿಷ್ಟ ಭಾಗಗಳಲ್ಲಂತೂ ನಿಸರ್ಗ ನಿಮ್ಮನ್ನು ಕೈ ಬೀಸಿ ಕರೆಯುವಂತೆ ಕಾಣಿಸುತ್ತದೆ. ಈ ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಲು ಈ ಮಾನ್ಸೂನ್‌ನಲ್ಲಿ ರೋಡ್‌ ಟ್ರಿಪ್‌ಗೆ ಹೋಗಬಹುದು.

ಭಾರತದಲ್ಲಿ ಮಳೆಗಾಲದ ರೋಡ್‌ ಟ್ರಿಪ್‌ಗೆ ಅತ್ಯುತ್ತಮವಾದ ಮಾರ್ಗಗಳ ಪಟ್ಟಿ ಇಲ್ಲಿದೆ. ಪ್ರಕೃತಿಯ ದೃಶ್ಯ ಕಾವ್ಯದ ಅನುಭವವನ್ನು ನಿಮ್ಮದಾಗಿಸಿಕೊಳ್ಳಲು ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮುಂಬೈ-ಗೋವಾ
ವಾಸ್ತವವಾಗಿ ಮುಂಬೈನಿಂದ ಗೋವಾಕ್ಕೆ ರಸ್ತೆಯ ಮೂಲಕ ಹೋಗಲು ಮಾನ್ಸೂನ್‌ ಸರಿಯಾದ ಸಮಯ. ಈ ಪ್ರಯಾಣವನ್ನು ಭಾರತದ ಉತ್ತಮ ರೋಡ್‌ ಟ್ರಿಪ್‌ ಎನ್ನಬಹುದು. ಮಂಜು ಮುಸುಕಿದ ವಾತಾವರಣ, ಪ್ರಕೃತಿಯ ಕೆಲವು ಅದ್ಭುತ ನೋಟಗಳು ಮತ್ತು ಸ್ಥಳೀಯ ಕೊಂಕಣ ಪಾಕಪದ್ಧತಿಗಳು ಇವೆಲ್ಲವೂ ನಿಮ್ಮ ಪ್ರಯಾಣವನ್ನು ಶಾಶ್ವತವಾಗಿ ನೆನಪಿರುವಂತೆ ಮಾಡುತ್ತದೆ.

ಬೆಂಗಳೂರು-ಕೊಡಗು
ಬೆಂಗಳೂರಿನಿಂದ ಕೊಡಗಿನ ರೋಡ್‌ ಟ್ರಿಪ್‌ ಅನ್ನು ಅತ್ಯಂತ ಸುಂದರ ಪ್ರಯಾಣ ಎಂದು ಪರಿಗಣಿಸಲಾಗಿದೆ. ಬೆಂಗಳೂರಿನಿಂದ 265 ಕಿಮೀ ದೂರದಲ್ಲಿರುವ ಕೊಡಗಿನ ಪ್ರಯಾಣದಲ್ಲಿ ನೀವು ಹಚ್ಚ ಹಸಿರಿನ ಸುಂದರ ಪ್ರಕೃತಿ, ಮುಗಲೆತ್ತರಕ್ಕೆ ಬೆಳೆದ ನಿಂತ ಮರಗಳು, ಆಗಾಗ ಸುರಿಯುವ ಮಳೆ ಯ ಅನುಭವಗಳನ್ನು ಸವಿಯಬಹುದು. ಎಂದೂ ಮರೆಯಲು ಸಾಧ್ಯವೇ ಇಲ್ಲದ ರಮಣೀಯ ದೃಶ್ಯಗಳ ಕಾರಣದಿಂದ ಮಳೆಗಾಲದ ಬೆಂಗಳೂರು–ಕೊಡಗು ರೋಡ್‌ ಟ್ರಿಪ್‌ ವಿಶೇಷವಾಗಿದೆ.

ದೆಹಲಿ-ಅಲ್ಮೋರಾ
ಮಳೆಗಾಲದಲ್ಲಿ ದೆಹಲಿಯಿಂದ ಅಲ್ಮೋರಾವರೆಗಿನ ಪ್ರಯಾಣವು ದೃಶ್ಯಕಾವ್ಯವಾಗಿದೆ. ಉತ್ತರಾಖಂಡದ ಅಲ್ಮೋರಾ ದೆಹಲಿಯಿಂದ ಕೇವಲ 370 ಕಿಲೋಮೀಟರ್ ದೂರದಲ್ಲಿದೆ. ರಸ್ತೆ ಪ್ರವಾಸದಲ್ಲಿ ಮಳೆಯ ರಮಣೀಯ ನೋಟವನ್ನು ನೀವು ವೀಕ್ಷಿಸಬಹುದು. ದಾರಿಯಲ್ಲಿ ಸಿಗುವ ಭೀಮತಾಲ್, ಲಾನ್ಸ್‌ಡೌನ್ ಮತ್ತು ಕಾಸರದೇವಿ ದೇವಾಲಯಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ :Starbucks New CEO : ಸ್ಟಾರ್‌ಬಕ್ಸ್ ನ ಮುಂದಿನ ಸಿಇಒ ಲಕ್ಷ್ಮಣ್ ನರಸಿಂಹನ್ : ಪುಣೆ ಎಂಜಿನಿಯರ್‌ನ, ಕಾಫಿ ದೈತ್ಯ ‘ಸ್ಟಾರ್‌ಬಕ್ಸ್‌’ ನ ವರೆಗಿನ ಪ್ರಯಾಣ

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

(Road Trip special Road trip during monsoon form Mumbai to goa and Bengaluru to Kodagu)

Comments are closed.