Hong Kong gifted Jersey to Virat Kohli : ಕೊಹ್ಲಿಗೆ ಜರ್ಸಿ ಉಡುಗೊರೆಯೊಂದಿಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಹಾಂಕಾಂಗ್ ಟೀಮ್

ದುಬೈ: (Virat Kohli gifted Jersey) ಟೀಮ್ ಇಂಡಿಯಾದ ಮಾಜಿ ನಾಯಕ, ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಎಷ್ಟೋ ಕ್ರಿಕೆಟಿಗರಿಗೆ ರೋಲ್ ಮಾಡೆಲ್, ಸ್ಫೂರ್ತಿ. ಇದರಿಂದ ಹಾಂಕಾಂಗ್ ಆಟಗಾರರೂ ಹೊರತಲ್ಲ. ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2022) ಭಾರತ ವಿರುದ್ಧದ ಪಂದ್ಯವನ್ನು ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ ಕುರಿತಾಗಿ ತಮಗಿರುವ ಗೌರವ, ಅಭಿಮಾನ, ಪ್ರೀತಿಯನ್ನು ಹಾಂಕಾಂಗ್ ಆಟಗಾರರು ವಿಭಿನ್ನವಾಗಿ ತೋರಿಸಿದ್ದಾರೆ.

ಹಾಂಕಾಂಗ್ ತಂಡದ ಆಟಗಾರರೆಲ್ಲೂ ಜರ್ಸಿಯೊಂದನ್ನು ಸಹಿ ಮಾಡಿ ಅದನ್ನು ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ಜರ್ಸಿಯಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಬರೆದಿದ್ದಾರೆ. “ಒಂದು ಪೀಳಿಗೆಗೆ ಸ್ಫೂರ್ತಿ, ಪ್ರೇರಣೆಯಾಗಿದ್ದಕ್ಕೆ ಥ್ಯಾಂಕ್ಯೂ ವಿರಾಟ್. ನಾವು ನಿಮ್ಮೊದಿಗೆ ನಿಲ್ಲುತ್ತೇವೆ. ಸಾಕಷ್ಟು ಅದ್ಭುತ ದಿನಗಳು ನಿಮಗಾಗಿ ಕಾದಿವೆ. ಪ್ರೀತಿಯೊಂದಿಗೆ ಟೀಮ್ ಹಾಂಕಾಂಗ್” ಎಂದು ಜರ್ಸಿಯಲ್ಲಿ ಬರೆಯಲಾಗಿದೆ. ಹಾಂಕಾಂಗ್ ತಂಡದ ಆಟಗಾರರು ತಮ್ಮ ಮೇಲೆ ತೋರಿಸಿರುವ ಪ್ರೀತಿ, ಅಭಿಮಾನಕ್ಕೆ ವಿರಾಟ್ ಕೊಹ್ಲಿ ಇನ್’ಸ್ಟಾಗ್ರಾಂ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

“ಥ್ಯಾಂಕ್ಯೂ ಹಾಂಕಾಂಗ್ ಕ್ರಿಕೆಟ್. ಇದು ನಿಜಕ್ಕೂ ಅತ್ಯಂತ ಸಿಹಿಯಾದ ಮತ್ತು ವಿನಮ್ರವಾದ ಗೆಸ್ಚರ್” ಎಂದು ವಿರಾಟ್ ಕೊಹ್ಳಿ ಹೇಳಿದ್ದಾರೆ. ಬುಧವಾರ ದುಬೈ ಅಂತಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ, ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು 40 ರನ್’ಗಳಿಂದ ಸೋಲಿಸಿ ಗ್ರೂಪ್ ’ಎ ’ನಿಂದ ಅಜೇಯವಾಗಿ ಸೂಪರ್-4 ಹಂತಕ್ಕೇರಿತ್ತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಮಾಜಿ ನಾಯಕ ವಿರಾಟ್ ಕೊಹ್ಲಿ, 44 ಎಸೆತಗಳಲ್ಲಿ 3 ಸಿಕ್ಸರ್’ಗಳ ಸಹಿತ ಅಜೇಯ 59 ರನ್ ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ ಸಿಡಿಲಬ್ಬರದ ಅಜೇಯ 68 ರನ್ ಸಿಡಿಸಿದ್ದರು. ನಂತರ ಗುರಿ ಬೆನ್ನಟ್ಟಿದ್ದ ಹಾಂಕಾಂಗ್ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.

ಇದನ್ನೂ ಓದಿ : Indian Cricket Team: ಸರ್ಫಿಂಗ್, ವಾಲಿಬಾಲ್… ದುಬೈ ಬೀಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ ಬಿಂದಾಸ್ ಮಸ್ತಿ

ಇದನ್ನೂ ಓದಿ : Virat Kohli Babar Azam : ಒಂದೇ ತಂಡದಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ, ಪಾಕ್ ನಾಯಕ ಬಾಬರ್ ಅಜಮ್

Hong Kong gifted Jersey to Virat Kohli

Comments are closed.