top 5 houseboat : ಹೌಸ್‌ಬೋಟ್‌ ಪ್ರವಾಸ ನಿಮಗೆ ಇಷ್ಟಾನಾ; ಭಾರತದ ಟಾಪ್‌ 5 ಹೌಸ್‌ಬೋಟ್‌ ತಾಣಗಳು

top 5 houseboat : ಭಾರತ (India) ವೈವಿಧ್ಯತೆಗಳ ತವರು. ಇಲ್ಲಿ ಸಾಗರ–ಸಮುದ್ರ, ಬೆಟ್ಟ–ಗುಡ್ಡ, ನದಿ–ಜಲಪಾತ, ಕಣಿವೆ, ಸುಂದರ ದೇವಾಲಯಗಳಿವೆ. ಭವ್ಯವಾದ ಅರಮನೆ, ಕೋಟೆಗಳಿಂದ ಹಿಡಿದು ಆಧ್ಯಾತ್ಮಿಕ ಅನುಭವಗಳನ್ನು ನೀಡುವ ತಾಣ (Place) ಗಳಿವೆ. ಪ್ರವಾಸ (Travel) ಕ್ಕೆ ಸೂಕ್ತ ಪರಿಸರವಿದೆ. ಇವುಗಳು ಪ್ರವಾಸದ ಹೊಸ ಅನುಭವವನ್ನು ನೀಡುತ್ತವೆ. ಇದನ್ನು ಬಿಟ್ಟು ಇನ್ನೂ ಏನನ್ನಾದರೂ ಯೋಚಿಸುತ್ತಿದ್ದರೆ, ಹೌಸ್‌ಬೋಟ್‌ಗಳ ಆಯ್ಕೆ ಸಹ ಇದೆ. ಹೌಸ್‌ಬೋಟ್‌ಗಳೆಂದರೆ ಮನೆಯಂತೆ ಇರುವ ದೋಣಿಗಳು. ನೀರಿನ ಮಧ್ಯದಲ್ಲಿ ಬೋಟ್‌ಗಳ ಮೇಲಿರುವ ಮನೆಯಂತೆ ಅನಿಸುವ ಇವುಗಳು ಬಹಳ ಸುಂದರವಾಗಿರುತ್ತದೆ ಮತ್ತು ಹೊಸ ಅನುಭವವನ್ನು ನೀಡುತ್ತದೆ. ಸೂರ್ಯೋದಯ, ಸೂರ್ಯಾಸ್ತಗಳು ಕಣ್ಮನ ಸೆಳೆಯುತ್ತವೆ.

top 5 houseboat : ಭಾರತದ ಟಾಪ್‌ 5 ಹೌಸ್‌ಬೋಟ್‌ತಾಣ

ದಾಲ್‌ ಲೇಕ್‌, ಶ್ರೀನಗರ :
ಭಾರತದಲ್ಲಿ ಹೌಸ್‌ಬೋಟ್‌ಗೆ ಬಹಳ ಪ್ರಸಿದ್ಧಿ ಪಡೆದ ಸ್ಥಳವೆಂದರೆ ಅದು ಶ್ರೀನಗರದಲ್ಲಿರುವ ದಾಲ್‌ ಲೇಕ್‌. ದಾಲ್‌ ಸರೋವರದ ಮೇಲಿರುವ ಹೌಸ್‌ಬೋಟ್‌ಗಳು ಸ್ವಪ್ನನಗರಿಯಂದರೆ ಕಾಣಿಸುತ್ತದೆ. ಅಲ್ಲಿನ ಸನ್‌ಸೆಟ್‌ ಒಂದು ಅದ್ಭುತ ದೃಶ್ಯ.

ಕೇರಳ :
ಹಿನ್ನೀರು ಮತ್ತು ಹೌಸ್‌ಬೋಟ್‌ಗಳು ಎಂದರೆ ಮೊದಲು ನೆನಪಾಗುವುದೇ ಕೇರಳ. ಕೆಟ್ಟವಲ್ಲಂ ಎಂದು ಕರೆಯಲ್ಪಡುವ ಹೌಸ್‌ಬೋಟ್ ಸಾಕಷ್ಟು ಜನಪ್ರಿಯವಾಗಿದೆ. ಅಲಪ್ಪುಳ (ಅಲೆಪ್ಪಿ), ಕುಮಾರಕೋಮ್ ಮತ್ತು ಕೋವಲಂಗಳು ಹೌಸ್‌ಬೋಟ್ ಅಡ್ವೆಂಚರ್‌ ತಾಣಗಳಾಗಿವೆ.

ಇದನ್ನೂ ಓದಿ : Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

ಅಸ್ಸಾಂ:
ಗಿರಿಧಾಮಗಳಿಗೆ ಹೆಸರುವಾಸಿಯಾದ ಭಾರತದ ಒಂದು ರಾಜ್ಯವೆಂದರೆ ಅದು ಅಸ್ಸಾಂ. ಸುಂದರ ಚಹಾ ತೋಟಗಳು, ಬ್ರಹ್ಮಪುತ್ರ ನದಿ ಅಲ್ಲಿನ ವಿಶೇಷತೆ. ಅಲ್ಲಿನ ದೋಣಿ ವಿಹಾರ ಮತ್ತು ಹೌಸ್‌ಬೋಟ್‌ಗಳು ಪ್ರವಾಸಿಗರಿಗೆ ಬಹಳ ಆನಂದವನ್ನು ನೀಡುತ್ತದೆ. ಅಲ್ಲಿ ಡಾಲ್ಫಿನ್‌ ಮತ್ತು ವಲಸೆ ಹಕ್ಕಿಗಳನ್ನು ಸಹ ನೋಡಬಹುದು.

ಗೋವಾ :
ಗೋವಾ ಸಾಮಾನ್ಯವಾಗಿ ಪಾರ್ಟಿ ಮತ್ತು ನೈಟ್‌ಲೈಫ್‌ಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ಐಷಾರಾಮಿ ಹೌಸ್‌ಬೋಟ್‌ಗಳನ್ನು ಸಹ ನೋಡಬಹುದು.

ಉಡುಪಿ, ಕರ್ನಾಟಕ :
ಸ್ವರ್ಣಾ ನದಿ ಹೌಸ್‌ಬೋಟ್‌ಗಳು, ಕರ್ನಾಟಕದ ಏಕೈಕ ಹಿನ್ನೀರು ಹೌಸ್‌ಬೋಟ್‌. ತೆಂಗಿನ ತೋಟ, ಗದ್ದೆಗಳ ಸುಂದರ ದೃಶ್ಯಗಳನ್ನು ಒಳಗೊಂಡಿದೆ. ಐಷಾರಾಮಿಯಿಂದ ಬಜೆಟ್‌ವರೆಗು ಆಯ್ಕೆಗಳಿರುವ ಹೌಸ್‌ಬೋಟ್‌ಗಳು ಪ್ರವಾಸದ ಸುಂದರ ಅನುಭವ ನೀಡಬಲ್ಲದು.

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

(top 5 houseboat : Travel India’s top 5 houseboat destinations Dal lake, Kerala, Goa, Assam, Udupi)

Comments are closed.