India vs New Zealand playing XI : ನಾಳೆ ಭಾರತ Vs ನ್ಯೂಜಿಲೆಂಡ್ ಅಭ್ಯಾಸ ಪಂದ್ಯ, ಇಲ್ಲಿದೆ ಮ್ಯಾಚ್ ಟೈಮಿಂಗ್ಸ್, ಪ್ಲೇಯಿಂಗ್ XI ಡೀಟೇಲ್ಸ್

ಬ್ರಿಸ್ಬೇನ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಭಾರತ ತಂಡ ಬುಧವಾರ ತನ್ನ ಕೊನೆಯ ಅಭ್ಯಾಸ ಪಂದ್ಯವನ್ನಾಡಲಿದ್ದು, ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡವನ್ನು (India vs New Zealand playing XI) ಎದುರಿಸಲಿದೆ.

ಸೋಮವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಕೊನೆಯ ಓವರ್’ನಲ್ಲಿ ಆಸೀಸ್ ಗೆಲುವಿಗೆ 11 ರನ್’ಗಳು ಬೇಕಿದ್ದಾಗ ಅದ್ಭುತ ಬೌಲಿಂಗ್ ಸಂಘಟಿಸಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೇವಲ 4 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಫೀಲ್ಡಿಂಗ್’ನಲ್ಲಿ ಮಿಂಚಿದ್ದ ವಿರಾಟ್ ಒಂದು ರನೌಟ್ ಹಾಗೂ ಒಂದು ಅದ್ಭುತ ಕ್ಯಾಚ್ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. 19ನೇ ಓವರ್’ನಲ್ಲಿ ಟಿಮ್ ಡೇವಿಡ್’ರನ್ನು ಡೈರೆಕ್ಟ್ ಹಿಟ್ ಮೂಲಕ ರನೌಟ್ ಮಾಡಿದ್ದ ಕೊಹ್ಲಿ, ಅಂತಿಮ ಓವರ್’ನಲ್ಲಿ ಆಸೀಸ್ ಗೆಲುವಿಗೆ 3 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಪ್ಯಾಟ್ ಕಮಿನ್ಸ್ ಕ್ಯಾಚನ್ನು ಲಾಂಗ್ ಆನ್’ನಲ್ಲಿ ಒಂದೇ ಕೈನಲ್ಲಿ ಹಿಡಿದು ಗಮನ ಸೆಳೆದಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತಕ್ಕೆ ಡೇಂಜರಲ್ ನ್ಯೂಜಿಲೆಂಡ್ ಸುಲಭ ಎದುರಾಳಿಯಲ್ಲ. ಹೀಗಾಗಿ ಕಿವೀಸ್ ವಿರುದ್ಧ ಗೆಲ್ಲಬೇಕಾದರೆ ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕಿಡಬೇಕಿದೆ.

ಅಕ್ಟೋಬರ್ 23ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಫಾರ್ಮ್ ಕಂಡುಕೊಳ್ಳಲು ಭಾರತದ ಬ್ಯಾಟರ್’ಗಳಿಗೆ ಇದು ಕೊನೆಯ ಅವಕಾಶ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಶರ್ಮಾ ಅವರ ಫಾರ್ಮ್ ಟೀಮ್ ಇಂಡಿಯಾ think tankನ ಆತಂಕಕ್ಕೆ ಕಾರಣವಾಗಿದೆ. ಕಳೆದ 8 ಟಿ20 ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಶ್ರೀಲಂಕಾ ವಿರುದ್ಧ ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ 72 ರನ್ ಗಳಿಸಿದ ನಂತರ ರೋಹಿತ್ ಶರ್ಮಾ ಏಳು ಬೀಳಿನ ಹಾದಿಯಲ್ಲಿದ್ದಾರೆ.

ಕಳೆದ 8 ಟಿ20 ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಗಳಿಸಿರುವ ರನ್
11, 46*, 17: ಆಸ್ಟ್ರೇಲಿಯಾ ವಿರುದ್ಧ
00, 43, 00: ದಕ್ಷಿಣ ಆಫ್ರಿಕಾ ವಿರುದ್ಧ
03: ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ (ಅಭ್ಯಾಸ ಪಂದ್ಯ)
15: ಆಸ್ಟ್ರೇಲಿಯಾ ವಿರುದ್ಧ (ಅಭ್ಯಾಸ ಪಂದ್ಯ)

ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ (India vs New Zealand playing XI ) ಭಾರತದ ಸಂಭಾವ್ಯ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್, 7.ಅಕ್ಷರ್ ಪಟೇಲ್, 8.ರವಿಚಂದ್ರನ್ ಅಶ್ವಿನ್/ಯುಜ್ವೇಂದ್ರ ಚಹಲ್, 9.ಭುವನೇಶ್ವರ್ ಕುಮಾರ್, 10.ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, 11.ಅರ್ಷದೀಪ್ ಸಿಂಗ್

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಬ್ರಿಸ್ಬೇನ್ ಕ್ರಿಕೆಟ್ ಗ್ರೌಂಡ್, ಬ್ರಿಸ್ಬೇನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್

ಇದನ್ನೂ ಓದಿ : Roger Binny BCCI president : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಅವಿರೋಧ ಆಯ್ಕೆ

ಇದನ್ನೂ ಓದಿ : Virat Kohli Pakistan Players : ಪಾಕಿಸ್ತಾನ ಆಟಗಾರರೊಂದಿಗೆ ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್

T20 World Cup 2022 India vs New Zealand warm-up game India playing XI

Comments are closed.