Shehbaz Sharif : ಪಾಕ್​ ಪ್ರಧಾನಿ ಪಟ್ಟ ಅಲಂಕರಿಸಿದ ಶಹಬಾಜ್​ ಷರೀಫ್​​

Shehbaz Sharif :ಪಾಕಿಸ್ತಾನದ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಪಾಕ್​ನ ನೂತನ ಪ್ರಧಾನಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್​ ಸಹೋದರ ಹಾಗೂ ಪಿಎಂಎಲ್​ – ಎನ್​ ನಾಯಕ ಶಹಬಾಜ್​ ಷರೀಫ್​ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್​ ಖಾನ್​ ಪಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶಹಬಾಜ್​ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ.


ಪಾಕ್​ನಲ್ಲಿ ಪ್ರಧಾನಿ ಆಯ್ಕೆ ನಡೆಯುವ ಮುನ್ನ ಇಮ್ರಾನ್​ ಖಾನ್​ ರಾಷ್ಟ್ರೀಯ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಕಳ್ಳರ ಜೊತೆ ತಾನು ಅಸೆಂಬ್ಲಿಯಲ್ಲಿ ಕುಳಿತುಕೊಳ್ಳಲಾರೆ ಎಂದು ಹೇಳಿದ್ದರು. ಇಮ್ರಾನ್​ ಖಾನ್​ ಪಕ್ಷವಾರದ ಪಾಕಿಸ್ತಾನ್​ ತೆಹ್ರೀಕ್​ ಎ ಇನ್ಸಾಫ್​​ ಮತದಾನವನ್ನು ಬಹಿಷ್ಕರಿಸಿತು.


ಪಾಕ್​ ಅಧಿವೇಶನಕ್ಕೆ ಕೆಲವೇ ನಿಮಿಷಗಳ ಮೊದಲು ಮಾಜಿ ಸಚಿವ ಫವಾದ್​ ಚೌಧರಿ ಎಲ್ಲಾ ಪಿಟಿಐ ಶಾಸಕರು ಸದನಕ್ಕೆ ರಾಜೀನಾಮೆ ನೀಡುತ್ತಾರೆ ಹಾಗೂ ಸರ್ಕಾರದ ಯಾವುದೇ ಭಾಗವಾಗಿ ಇರುವುದಿಲ್ಲ ಎಂದು ಹೇಳಿದರು. ಪಾಕಿಸ್ತಾನ ಸರ್ಕಾರವನ್ನು ಉರುಳಿಸುವಲ್ಲಿ ಅಮೆರಿಕದ ಜೊತೆಯಲ್ಲಿ ವಿಪಕ್ಷಗಳು ಕೈ ಜೋಡಿಸಿವೆ ಎಂದು ಇಮ್ರಾನ್ ಖಾನ್​ ಆರೋಪಿಸುತ್ತಲೇ ಬಂದಿದ್ದಾರೆ.


ಪ್ರಧಾನಿ ಚುನಾವಣೆಗೆ ಮುನ್ನ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚೌಧರಿ ಹೇಳಿದ್ದಾರೆ.


“ಒಂದು 16 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಕೇಸ್ ಮತ್ತು 8 ಸಾವಿರ ಕೋಟಿ ರೂಪಾಯಿಯ ಇನ್ನೊಂದು ಭ್ರಷ್ಟಾಚಾರದ ಕೇಸ್ ಹೊಂದಿರುವ ವ್ಯಕ್ತಿ… ಆ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಆಯ್ಕೆ ಮಾಡಿರುವುದು ದೇಶಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇರಲಾರದು. ರಾಷ್ಟ್ರೀಯ ಅಸೆಂಬ್ಲಿಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಇಮ್ರಾನ್ ಖಾನ್ ಅವರು ಪಿಟಿಐ ಅಧಿಕೃತ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ : congress leader mallikarjuna kharge : ಇಡಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ

ಇದನ್ನೂ ಓದಿ : gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

Shehbaz Sharif, Pakistan Opposition Leader, Elected New PM

Comments are closed.