Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

ಚಳಿಗಾಲ (Winter) ಪ್ರಾರಂಭವಾಗಿದೆ. ಚಳಿ ನಿಧಾನವಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ತಂಪಾದ ವಾತಾವರಣದಲ್ಲಿ (Chilled Weather) ಬೆಚ್ಚಗೆ ಹೊದ್ದು ಮಲಗುವ ಮಜಾವೇ ಬೇರೆ. ಬೆಳಗಿನ ಹಬೆಯಾಡುವ ಚಹಾ, ಕಾಫಿ ದಿನವನ್ನು ಬೆಚ್ಚಗಾಗಿಸುತ್ತದೆ. ಚಳಿಗಾಲವನ್ನು ಪ್ರೀತಿಸುವ ಜನರಿದ್ದಾರೆ. ಚಳಿ ಪ್ರದೇಶಗಳಿಗೆ ಭೇಟಿ ನೀಡುವುದೆಂದರೆ (Winter Trip ) ಕೆಲವರಿಗೆ ಬಹಳ ಪ್ರೀತಿ. ಹಿಮಚ್ಛಾದಿತ ಪ್ರದೇಶಗಳು, ಸದಾ ತಂಪಿನ ವಾತಾವರಣ, ಮಂದ ಬೆಳಕು ಹೊಸ ಅನುಭವವನ್ನು ನೀಡುತ್ತದೆ. ಚಳಿಗಾಲದ ಸೊಬಗನ್ನು ಅನುಭವಿಸಲು ಇಲ್ಲಿ ಹೇಳಿರುವ ಸ್ಥಳಗಳಿಗೆ ಭೇಟಿ ಕೊಡಬಹುದು.

ಚಳಿಗಾಲದ ಪ್ರವಾಸಕ್ಕೆ (Winter Trip) ಪರಿಪೂರ್ಣವೆನಿಸುವ ಸ್ಥಳಗಳು :

ಸಿಕ್ಕಿಂನ ಝೀರೋ ಪಾಯಿಂಟ್‌:
ಸಿಕ್ಕಿಂನ ಯುಮ್‌ಥಾಂಗ್‌ ಕಣಿವೆಯ ಸಮೀಪ ಇರುವ ಝಿರೋ ಪಾಯಿಂಟ್‌ ಭಾರತದ ಅತ್ಯಂತ ತಂಪಾದ ಪ್ರದೇಶವಾಗಿದೆ. ಇಲ್ಲಿನ ಕನಿಷ್ಠ ತಾಪಮಾನ ಇದಕ್ಕೆ ಸಾಕ್ಷಿಯಾಗಿದೆ. ಚಳಿಗಾಲದ ಟ್ರಕ್ಕಿಂಗ್‌ ಗೆ ಇದು ಬಹಳ ಹೆಸರುವಾಸಿಯಾಗಿದೆ.

ಹಿಮಾಚಲ ಪ್ರದೇಶದ ಮನಾಲಿ :
ಚಳಿಗಾಲದ ಪ್ರವಾಸ ಎಂದ ತಕ್ಷಣ ಥಟ್ಟನೆ ನೆನಪಾಗುವ ಸ್ಥಳ ಮನಾಲಿ. ಬಹಳಷ್ಟು ಜನರು ಭೇಟಿ ಕೊಡುವ ಈ ಸ್ಥಳ ಚಳಿಗಾಲದಲ್ಲಿ ನಿಮ್ಮನ್ನು ಕೈಬೀಸಿ ಕರೆಯುವಂತೆ ಕಾಣಿಸುತ್ತದೆ. ಎಲ್ಲಿ ನೋಡಿದರೂ ಹಿಮದಿಂದ ಮುಚ್ಚಿರುವ ಮನೆ, ರಸ್ತೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಅಲ್ಲಿಯ ಸ್ಕೀಯಿಂಗ್‌ ಬಹಳ ಹೆಸರುವಾಸಿಯಾಗಿದೆ.

ಕಾಶ್ಮೀರದ ಗುಲ್‌ಮಾರ್ಗ್:
ಸ್ಕೀಯಿಂಗ್‌ ನ ರಾಜಧಾನಿ ಎಂದೇ ಜನಪ್ರಿಯವಾಗಿರುವ ಗುಲ್‌ಮಾರ್ಗ್‌ ಸ್ಕೀಯಿಂಗ್‌ ಪ್ರಿಯರಿಗೆ ಅಚ್ಚುಮೆಚ್ಚಾದ ಸ್ಥಳ. ಈ ಕಾರಣದಿಂದಲೇ ಬಹಳಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಹಿಮಾಚಲ ಪ್ರದೇಶದ ಡಾಲ್‌ಹೌಸಿ :
ಇದು ನವವಿವಾಹಿತರ ನೆಚ್ಚಿನ ಹನಿಮೂನ್‌ ತಾಣ. ಡಾಲ್‌ಹೌಸಿಗೆ ವರ್ಷ ಪೂರ್ತಿ ಭೇಟಿ ಕೊಡಬಹುದು. ಹಿಮ (ಸ್ನೋ) ಬೀಳುವ ಚಳಿಗಾಲದಲ್ಲಿ ಹೋಗುವುದು ವಿಶೇಷವಾಗಿರುತ್ತದೆ.

ಹಿಮಾಚಲ ಪ್ರದೇಶದ ಶಿಮ್ಲಾ:
ಚಳಿಗಾಲದಲ್ಲಿ ಶಿಮ್ಲಾ ನಗರ ಪೂರ್ತಿಯಾಗಿ ಬಿಳಿ ಚಾದರವನ್ನು ಹೊದ್ದು ಮಲಗಿದಂತೆ ಕಾಣಿಸುತ್ತದೆ. ಚಳಿಗಾಲದಲ್ಲಿನ ಇಲ್ಲಿಯ ರಮಣೀಯ ದೃಶ್ಯ ಎಂಥವರಿಗಾದರೂ ವಿಶೇಷ ಅನುಭವ ನೀಡುತ್ತದೆ.

ಇದನ್ನು ಓದಿ : Surat : ಸೂರತ್‌ : ‘ಟೆಕ್ಸ್‌ಟೈಲ್ ಸಿಟಿ ಆಫ್ ಇಂಡಿಯಾ’ದ ಈ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ಕೊಡಿ

ಇದನ್ನು ಓದಿ :Char Dham Yatra : ಚಾರ್ ಧಾಮ್ ಯಾತ್ರೆಯ ಕೊನೆಯ ಹಂತ: ಚಳಿಗಾಲಕ್ಕೆ ಮುಚ್ಚುತ್ತಿರುವ ದೇಗುಲಗಳು

(Winter Trip these places are perfect for the winter season trip)

Comments are closed.