Lunar Eclipse 2022 :ಕಾರ್ತಿಕ ಮಾಸದಲ್ಲೇ  ಚಂದ್ರಗ್ರಹಣ : ಎಲ್ಲೆಲ್ಲಿ ಗೋಚರ ? ಏನು ಮಾಡಬೇಕು ? ಏನು ಮಾಡಬಾರದು ? ಇಲ್ಲಿದೆ ಸಂಪೂರ್ಣ ಮಾಹಿತಿ

(Lunar Eclipse 2022)ಕಾರ್ತಿಕ ಮಾಸ ಎಂದು ಕರೆಸಿಕೊಳ್ಳುವ ಈ ತಿಂಗಳಿನಲ್ಲಿ ಅತಿ ಹೆಚ್ಚಾಗಿ ಗ್ರಹಣಗಳು ಕಾಣಿಸಿಕೊಳ್ಳುತ್ತಿದೆ. ಇದೆ ಅಕ್ಟೋಬರ್‌ 25 ರಂದು ಭಾಗಶಃ ಸೂರ್ಯಗ್ರಹಣದವಾದ ನಂತರ ಇದೀಗ ಚಂದ್ರಗ್ರಹಣ ಹತ್ತಿರ ಸಮೀಪಿಸುತ್ತಿದೆ. ಹದಿನೈದು ದಿನಗಳ ನಂತರ ನವೆಂಬರ್ 8 ರಂದು ಭಾರತದ ಕೆಲವು ಭಾಗಗಳು ಸಂಪೂರ್ಣ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ. ಇದು ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಬೇರೆ ಯಾವ ದೇಶದಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ ಮತ್ತು ಭಾರತದಲ್ಲಿ ಯಾವ ಭಾಗಗಳಲ್ಲಿ ಚಂದ್ರಗ್ರಹಣ ಗೋಚರವಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.

(Lunar Eclipse 2022)ಸಂಪೂರ್ಣ ಚಂದ್ರಗ್ರಹಣವನ್ನು ಎಲ್ಲಾ ಕಡೆಯಲ್ಲಿ  ವೀಕ್ಷಿಸಲು ಸಾಧ್ಯವಿಲ್ಲ.  ಅಮೆರಿಕದ , ಭಾರತ, ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಕೆಲವು ಭಾಗಗಳು, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಮಹಾಸಾಗರದ ಇತರ ಭಾಗಗಳ ನಿವಾಸಿಗಳು ಆಕಾಶ ಘಟನೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಚಂದ್ರಗ್ರಹಣದ ಬಗ್ಗೆ ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ನಂಬಿಕೆ ಇದೆ. ವಿದೇಶಗಳಲ್ಲಿ ಇದನ್ನು ಸೋಲಾರ್‌ ಸಿಸ್ಟಮ್‌ ನಲ್ಲಿ ಆಗುತ್ತಿರುವ ಬದಲಾವಣೆ ಎಂದು ಪೋಟೋವನ್ನು ತೆಗೆದು ಸಂಭ್ರಮ ಪಟ್ಟರೆ ಭಾರತದಲ್ಲಿ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಗೋಚರಿಸುವ ಸಂಪೂರ್ಣ ಚಂದ್ರಗ್ರಹಣ  ಮಾಹಿತಿಯನ್ನು ತಿಳಿಸಲಾಗಿದೆ. ಭಾರತದಲ್ಲಿ ನವೆಂಬರ್ 8 ರಂದು ಸಂಪೂರ್ಣ ಚಂದ್ರಗ್ರಹಣ  ಸುಮಾರು2:39 ಗಂಟೆಗಳಲ್ಲಿ (IST) ಪ್ರಾರಂಭವಾಗಿ 6:19 ರ ಸುಮಾರಿಗೆ ಗ್ರಹಣವು ಕೊನೆಗೊಳ್ಳುತ್ತದೆ. 

ಇದನ್ನೂ ಓದಿ:Congress candidates list: 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಯಾರೆಲ್ಲಾ ಕಣದಲ್ಲಿ..?

ಇದನ್ನೂ ಓದಿ:Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಭಾರತದಲ್ಲಿ ಎಲ್ಲೆಲ್ಲಿ ಯಾವ ಸಮಯಕ್ಕೆ ಚಂದ್ರಗ್ರಹಣ (Lunar Eclipse 2022) ಗೋಚರ :

ಕೋಲ್ಕತ್ತಾ – ಸಂಜೆ 4:54

ಕೊಹಿಮಾ – ಸಂಜೆ 4:29

ಅಗರ್ತಲಾ – ಸಂಜೆ 4:29

ಗುವಾಹಟಿ – ಸಂಜೆ 4:29

ನವದೆಹಲಿ – ಸಂಜೆ 5:31

ಬೆಂಗಳೂರು – ಸಂಜೆ 5:57

ಮುಂಬೈ – ಸಂಜೆ 6:03

ನಾಗ್ಪುರ – ಸಂಜೆ 5:32

ಶ್ರೀನಗರ – ಸಂಜೆ 5:31

ಚಂದ್ರಗ್ರಹಣದ ದಿನದಂದು ಏನೇನು ಮಾಡಬೇಕು ? ಏನು ಮಾಡಬಾರದು ?

  1. ಭಾರತದಲ್ಲಿ ಚಂದ್ರಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುವುದರಿಂದ  ಆದಿನ  ಅಡುಗೆಯನ್ನು  ಮಾಡುವುದಿಲ್ಲ .
  2. ಚಂದ್ರ ಗ್ರಹಣಗಳು ಸೂರ್ಯ ಗ್ರಹಣಗಳಂತೆ ಪರಿಣಾಮಕಾರಿಯಾಗಿರುವುದಿಲ್ಲ ಆದ್ದರಿಂದ ಕಣ್ಣುಗಳ ಮೂಲಕ ನೇರವಾಗಿ ವೀಕ್ಷಿಸಲು ಸುರಕ್ಷಿತವಾಗಿದೆ.
  3. ಭಾರತೀಯ ಪುರಾಣಗಳ ಪ್ರಕಾರ, ಮಹಾಮೃತ್ಯುಂಜಯ ಮಂತ್ರದಂತಹ ಪವಿತ್ರ ಮಂತ್ರಗಳನ್ನು ಪಠಿಸಬೇಕು. ಇದರಿಂದ ಗ್ರಹಣದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
  4. ಗ್ರಹಣ ವೇಳೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಜನರು ತುಳಸಿ ಎಲೆ ಮತ್ತ ದರ್ಬೆಗಳನ್ನು  ಆಹಾರ ಪದಾರ್ಥಗಳಿಗೆ ಹಾಕುತ್ತಾರೆ.
  5. ಗರ್ಭಿಣಿ ಮಹಿಳೆ ಚಂದ್ರಗ್ರಹಣದ ಸಮಯದಲ್ಲಿ ಹೊರಗಡೆ ಹೋಗಬಾರದು.

Lunar Eclipse 2022: Chandra Grahana date, time, Do’s and Don’ts

Comments are closed.