5 ರೂ. ಡಾಕ್ಟರ್ ಎಂದೇ ಖ್ಯಾತರಾದ ಡಾ.ಕೆ.ಪಿ ಶೆಟ್ಟಿ ವಿಧಿವಶ
ಕೋಟ : Dr. K. P. Shetty: ಐದು ರೂಪಾಯಿ ಡಾಕ್ಟರ್ ಎಂದೇ ಜನಮಾನಸದಲ್ಲಿ ಚಿರಪರಿಚಿತರಾಗಿದ್ದ ಮಾಬುಕಳ ಹಂಗಾರಕಟ್ಟೆ ಬಾಳ್ಕುದ್ರುವಿನ ಪ್ರಸಿದ್ಧ ವೈದ್ಯ ಡಾ.ಕೆ.ಪಿ. ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಬಡವರ ಬಂಧು ಎಂದೇ ಖ್ಯಾತರಾಗಿದ್ದ ಡಾ. ಕೆ.ಪಿ ಶೆಟ್ಟಿ ಅವರು 5 ದಶಕಗಳಿಗೂ ಅಧಿಕ ಕಾಲ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಾಗಿ ಬಳಿಕ ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಕೆ.ಪಿ ಶೆಟ್ಟಿ ಅವರು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಕ್ಲಿನಿಕ್ ನಡೆಸುವ ಮೂಲಕ ಪ್ರಸಿದ್ಧಿ ಪಡೆದಿದ್ದರು.
Also Read: Fish harvest in Udupi : ಉಡುಪಿಯಲ್ಲಿಂದು ಮೀನಿನ ಸುಗ್ಗಿ : ಸಮುದ್ರ ದಡಕ್ಕೆ ಬಂದು ಬಿದ್ದ ಲಕ್ಷ ಲಕ್ಷ ಮೀನುಗಳು
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬಡ ರೋಗಿಗಳಿಗೆ ನನ್ನಿಂದ ಮತ್ತಷ್ಟು ಸಹಾಯವಾಗಬೇಕು ಎಂಬ ಸದುದ್ದೇಶದೊಂದಿಗೆ ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಕ್ಲಿನಿಕ್ನಲ್ಲಿ ಅತ್ಯಂತ ಕಡಿಮೆ ದರಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜನರು ಇವರಿಗೆ 5 ರೂಪಾಯಿ ಡಾಕ್ಟರ್ ಎಂಬ ಬಿರುದು ನೀಡಿದ್ದರು. ಕೇವಲ 30 ರೂಪಾಯಿಗಳಿಗೆ ಸರ್ವ ರೋಗಗಳಿಗೂ ಔಷಧಿ ನೀಡುತ್ತಿದ್ದ ಸಹೃದಯಿ ವೈದ್ಯರ ನಿಧನದಿಂದ ಸ್ಥಳೀಯರು ದುಃಖಕ್ಕೀಡಾಗಿದ್ದಾರೆ.



