ಬ್ರಹ್ಮಾವರ : ಮಹಿಳೆ ಮೇಲೆ ಅವಾಚ್ಯ ವರ್ತನೆ ಆರೋಪ, ಪ್ರತಿ ದೂರು ದಾಖಲು, ದೂರುದಾರ ನಾಪತ್ತೆ..?

ಉಡುಪಿ : ಬ್ರಹ್ಮಾವರ (brahmavara) ಪೊಲೀಸ್ ಠಾಣಾ ವ್ಯಾಪ್ತಿಯ ಚಾಂತಾರು ಗ್ರಾಮದ ಶ್ರೀವಾರದಲ್ಲಿರುವ ಕುಬೇರಾ ಬಾರ್ ಎದುರು ನಡೆದ ಕರವೇ (Karnataka Rakshana Vedike) ಕಾರ್ಯಕರ್ತರ ಗಲಾಟೆ ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಜನವರಿ 18ರ ರಾತ್ರಿ ಫಿರ್ಯಾದಿದಾರರು ತಮ್ಮ ಸ್ನೇಹಿತೆ ಸುಷ್ಮಾಗೌಡ (Sushma Gowda) ಅವರೊಂದಿಗೆ ಮಾವನ ಮಗ ಪ್ರವೀಣ್ ಅವರನ್ನು ಹುಡುಕಿಕೊಂಡು ಸ್ಥಳಕ್ಕೆ ಬಂದಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿ ಕಿರಣ್ ಪಿಂಟೋ (Kiran Pointo) ಅವರು ಪ್ರವೀಣ್ ಡಿಕ್ರೋಜ್ ( Praveen Dcrog) ಅವರೊಂದಿಗೆ ಬಂದು ಫಿರ್ಯಾದಿದಾರರು ಹಾಗೂ ಸುಷ್ಮಾಗೌಡ ಅವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.

ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದಲ್ಲದೆ, ಪ್ರವೀಣ್ ಅವರನ್ನು ತುಳಿಯಲು ಮುಂದಾದಾಗ ಮಧ್ಯ ಪ್ರವೇಶಿಸಲು ಹೋದ ದೂರು ದಾರೆ ಅಶ್ವಿನಿ ನಾಯ್ಕ್ ( Ashwini Naik) ಹಾಗೂ ಸುಷ್ಮಾಗೌಡ ಅವರನ್ನು ಕೆಳಗೆ ಕೆಡವಿ, ಬಟ್ಟೆಯನ್ನು ಹರಿದು ಅವಾಚ್ಯವಾಗಿ ವರ್ತಿಸಿದ್ದಾಗಿ ದೂರು ದಾಖಲಿಸಿದ್ದಾರೆ.‌

Also Read : Brahmavara: ಕರವೇ ಮುಖಂಡ ಪ್ರವೀಣ್​ ವಿರುದ್ಧ ಹಲ್ಲೆ ಆರೋಪ : ಸುಷ್ಮಾ ಗೌಡ ವಿಚಾರಕ್ಕೆ ನಡೀತಾ ಡೆಡ್ಲಿ ಫೈಟ್​ !

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ( Brahmavara Police Station) ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿರಣ್‌ ಪಿಂಟೋ ಅವರು ಕರವೇ ಸಂಘಟನೆಯ ಪ್ರವೀಣ್‌, ಸುಜೀತ್‌ ಮತ್ತು ಸುಷ್ಮಾಗೌಡ ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ್ದರು.

ಬಳಿಕ ಕಿರಣ್‌ ಪಿಂಟೋ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಇತ್ತ ಪ್ರತಿ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

Also Read : ಕೇರಳ ಬಸ್​ ವಿಡಿಯೋ ಪ್ರಕರಣ : ಕೊನೆಗೂ ವೀವ್ಸ್​ಗಾಗಿ ಜೀವ ತೆಗೆದವಳ ಬಂಧನ

brahmavara Woman accused of indecent behavior counter complaint filed, complainant missing

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories