ದಿತ್ವಾ ಚಂಡಮಾರುತ ಎಫೆಕ್ಟ್ : ಕರಾವಳಿಯಲ್ಲಿ ಥಂಡಾ ಥಂಡಾ ಕೂಲ್ ಕೂಲ್

- ವರದಿ : ಜೊಬಿನ್ ಅಮಾಸೆಬೈಲು
Cyclone Ditwah Effect : ಉಡುಪಿ / ಮಂಗಳೂರು : ಶ್ರಿಲಂಕಾದಲ್ಲಿ ಆರ್ಭಟಿಸುತ್ತಿರುವ ದಿತ್ವಾ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಥಂಡಾ ಥಂಡಾ ಕೂಲ್ ಕೂಲ್ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಎರಡು ದಿನಗಳಿಂದಲೂ ಅರಬ್ಬಿ ಸಮುದ್ರದುದ್ದಕ್ಕೂ ಹರಡಿರುವ ಕರಾವಳಿ ಪ್ರದೇಶದಲ್ಲಿ ತೀವ್ರ ಚಳಿಯ ವಾತಾವರಣ ಕಂಡು ಬಂದಿದೆ. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಭಾಗಗಳಲ್ಲಿ ವಿಪರೀತ ಚಳಿಯ ವಾತಾವರಣವಿದ್ದು, ಬೆಳಗ್ಗೆ 10 ಗಂಟೆಯವರೆಗೂ ಬಿಸಿಲಲ್ಲೂ ಚಳಿ ಆರ್ಭಟಿಸಿತ್ತು.
ಸಂಜೆ 5 ಗಂಟೆಯಿಂದಲೇ ಚಳಿಯ ವಾತಾವರಣ ಕಂಡು ಬರುತ್ತಿದ್ದು ಉಡುಪಿ, ಕುಂದಾಪುರ, ಬೈಂದೂರು ಹೆದ್ದಾರಿಯಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಕತ್ತಲಾಗುತ್ತಿದ್ದಂತೆಯೇ ಚಳಿಯ ಪ್ರಮಾಣ ಹೆಚ್ಚುತ್ತಿದೆ. ರಾತ್ರಿ 10 ಗಂಟೆಯ ಸುಮಾರಿಗೆ ಚಳಿಯ ತೀವ್ರತೆ ಇನ್ನು ಹೆಚ್ಚಿತ್ತು.
Cyclone Ditwah Effect : ಮಂಗಳೂರಲ್ಲಿ ಮೈ ಕೊರೆಯುವ ಚಳಿ
ಉಡುಪಿ ಮಾತ್ರವಲ್ಲದೇ ಮಂಗಳೂರಿನಲ್ಲಿಯೂ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಮಂಗಳೂರಲ್ಲಿ 30.2 ಡಿಗ್ರಿ ಸೆಲ್ಸಿಯೆಸ್ ಗರಿಷ್ಠ ತಾಪಮಾನ ಉಂಟಾಗಿ ವಾಡಿಕೆಗಿಂತ 2.9 ಡಿಗ್ರಿ ಸೆಲ್ಸಿಯೆಸ್ ತಾಪಮಾನ ಇಳಿಕೆ ಕಂಡಿತ್ತು, ಮತ್ತು 21.5 ಡಿಗ್ರಿ ಸೆಲ್ಸಿಯೆಸ್ ಕನಿಷ್ಠ ತಾಪಮಾನ ಉಂಟಾಗಿ ವಾಡಿಕೆಗಿಂತೆ 0.8 ಡಿಗ್ರಿ ಸೆಲ್ಸಿಯೆಸ್ ತಾಪಮಾನ ಇಳಿಕೆ ಕಂಡಿತ್ತು.
ಭಾರತಿಯ ಹವಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯ ಕೆಲವು ಕಡೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದ ಹಿನ್ನೆಲೆಯಲ್ಲಿ ಚಳಿಯ ಪ್ರಮಾಣ ಕೂಡ ಇನ್ನಷ್ಟು ದಿನಗಳ ಕಾಲ ಮುಂದುವರಿಕೆ ಆಗಲಿದೆ.
ಇದನ್ನೂ ಓದಿ : ಶ್ರೀಕೃಷ್ಣಮಠದಲ್ಲಿ ಮೋದಿ ಭೇಟಿಗಿಲ್ಲ ಅವಕಾಶ : ಪ್ರಮೋದ್ ಮಧ್ವರಾಜ್ ಹೇಳಿದ್ದೇನು ?
ಸಿಲಿಕಾನ್ ಸಿಟಿಯಲ್ಲೂ ಚಳಿಯ ಆರ್ಭಟ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರದಿಂದಲೆ ವಿಪರೀತ ಚಳಿ ಕಂಡು ಬಂದಿದೆ. ತಂಗಾಳಿಯ ಜೊತೆಗೆ ನಡಗುವಷ್ಟು ಚಳಿಯ ಅನುಭವ ಕಂಡು ಬಂದಿದೆ.
ಕಳೆದೆರಡು ದಿನದಿಂದ ಮುಂಜಾನೆ, ಸಂಜೆ ಅಲ್ಲದೆ ದಿನವಿಡಿ ಮೋಡ ತುಂಬಿದ ವಾತವರಣವಿದ್ದು, ನಗರದಾದ್ಯಂತ ಬೆಳ್ಳಂಬೆಳಗ್ಗೆಯೆ ತುಂತುರು ಮಳೆ ಆರಂಭವಾಗಿದೆ. ಇದರಿಂದ ಚಳಿಯ ವಾತವರಣ ಇನ್ನಷ್ಟು ಏರಿಕೆಯಾಗಿದೆ. ಮುಂಜಾನೆ ವಾಯುವಿಹಾರಕ್ಕಾಗಿ ತೆರಳುವವರು , ತರಕಾರಿ ವ್ಯಾಪರಿಗಳು, ಆಟೋ ಚಾಲಕರು ಚಳಿಯಲ್ಲಿ ನಡಗುವಂತಾಗಿದೆ.
ಸದ್ಯ ದಿತ್ವಾ ಚಂಡಮಾರುತವು ನವೆಂಬರ್ 30 ರಂದು ತಮಿಳುನಾಡಿನ ದಕ್ಷಿಣ ಕರಾವಳಿ ಭಾಗಕ್ಕೆ ಬಂದು ತಲುಪಲಿದೆ. ಇದರ ಪ್ರಭಾವದಿಂದ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ಲಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧರಣ ಮಳೆಯಾಗುವ ಸಾಧ್ಯತೆಯಿದೆ.
ದಿತ್ವಾ ಚಂಡಮಾರುತದಿಂದಾಗಿ ಹಗಲಿನ ವೇಳೆ ಉಷ್ಣಾಂಶ ಇಳಿಮುಖವಾಗಿದೆ, ಹಿಗಾಗಿ ಹಗಲೆಲ್ಲ ಚಳಿಯ ವಾತವರಣವಿದ್ದು ಡಿಸೆಂಬರ್ 1 ರಿಂದ ಬಿಸಿಲು ಬಿಳುವ ಸಾಧ್ಯತೆ ಇದೆ.
Cyclone Ditwah Effect Heavy Cold in Coastal Karnataka Udupi Mangalore



