Gopal Kharvi : ಗೋಪಾಲ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ : ಗಿನ್ನಿಸ್ ದಾಖಲೆ ವೀರನ ಹೊಸ ಸಾಧನೆ

ಉಡುಪಿ : ಕೈಗೆ ಕೋಳ ತೊಟ್ಟು ಸಮುದ್ರದಲ್ಲಿ ಈಜುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದ ಗೋಪಾಲ ಖಾರ್ವಿ (Gopal Kharvi ) ಈಜು ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.
25ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗುಂಡ್ಮಿಯ ಗೋಪಾಲ ಖಾರ್ವಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
400 ಮೀಟರ್ ಪ್ರೀಸ್ಟೈಲ್, 200 ಮೀಟರ್ ಪ್ರೀಸ್ಟೈಲ್, 100 ಮೀಟರ್ ಪ್ರೀ ಸ್ಟೈಲ್, 50 ಮೀಟರ್ ಬಟರ್ ಪ್ಲೈ ಹಾಗೂ ರಿಲೇಯಲ್ಲಿಯೂ ಚಿನ್ನದ ಪದಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗೋಪಾಲ ಖಾರ್ವಿ ಅವರು ಒಟ್ಟು 6 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಸದ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಡುಪಿಯ ಅಜ್ಜರಕಾಡಿನ ಈಜುಕೊಳದಲ್ಲಿ ತರಬೇತುದಾರರಾಗಿ ಕೆಲಸ ಮಾಡ್ತಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕೋಡಿ ಕನ್ಯಾನದ ಗೋಪಾಲ ಖಾರ್ವಿ ಅವರಿಗೆ ಭಾರತ ಮತ್ತು ಅಮೇರಿಕಾ ವಿವಿ ಬೆಸ್ಟ್ ಸ್ಪೋರ್ಟ್ ಅಚೀವರ್ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ರಾಜ್ಯಮಟ್ಟದ ಸಂದೇಶ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಖ್ಯಾತ ಈಜು ಪಟು ಗೋಪಾಲ ಖಾರ್ವಿ ಅವರ ಸಾಧನೆಗಾಗಿ ಕರ್ನಾಟಕ ಸರಕಾರ ಕೊಂಕಣಿ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರೆ ಗೋಪಾಲ್ ಖಾರ್ವಿ ಅನ್ನೋ ಪಾಠವನ್ನು ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿತ್ತು.
Guinness Record Holder Gopal Kharvi Achieves New Feat, Selected for National Level



