ಕಾಪು: ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿ ಒಳಗೆ ಲಾಕ್!

ಕಾಪು:Authority staff locked: ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿ ಒಳಗ ಲಾಕ್ ಆಗಿರುವ ಘಟನೆ ಕಾಪು(Kapu) ಪುರಸಭೆ ಕಟ್ಟಡದಲ್ಲಿ ಮಂಗಳವಾರ ಸಂಜೆ ನಡೆದಿದೆ. ಪುರಸಭೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕಾಪು ಯೋಜನಾ ಪ್ರಾಧಿಕಾರದ ಎರಡು ಕಚೇರಿಗಳಿಗೆ ತೆರಳಲು ಇರುವುದು ಒಂದೇ ದ್ವಾರ.

ಸಂಜೆ 5:30 ರಿಂದ 6 ಗಂಟೆಯ ನಡುವೆ ಬಾಗಿಲಿಗೆ ಬೀಗ ಹಾಕುವ ಪುರಸಭೆ ಸಿಬ್ಬಂದಿಗಳು ಪ್ರಾಧಿಕಾರದ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡುತ್ತಿದ್ದರು. ಅನಾರೋಗ್ಯದಿಂದ ಬೀಗ ಹಾಕುವ ಸಿಬ್ಬಂದಿ ರಜೆ ಮಾಡಿದ್ದರು.

ಈ ವೇಳೆ ಬೀಗ ಹಾಕಲು ಬಂದಿರುವ ಇನ್ನೋರ್ವ ಸಿಬ್ಬಂದಿ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿಗಳ ಬಗ್ಗೆ ಗಮನಕೊಡದೆ ಬಾಗಿಲು ಬಂದ್ ಮಾಡಿದ್ದಾರೆ.

Also Read: ಕಂಡ್ಲೂರು : ವರಾಹಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ: 11 ಮಂದಿ ಬಂಧನ, 4 ದೋಣಿಗಳು ವಶ

ಕೆಲಸ ಮುಗಿಸಿ ಮುಖ್ಯ ದ್ವಾರದ ಬಳಿಗೆ ಬಂದ ಪ್ರಾಧಿಕಾರದ ಸಿಬ್ಬಂದಿಗಳಿಗೆ ಬೀಗ ಹಾಕಿರುವುದು ಪತ್ತೆಯಾಗಿದೆ. ನಂತರ ಪೊಲೀಸರಿಗೆ ಕರೆ ಮಾಡಿದ ಪ್ರಾಧಿಕಾರದ ಸಿಬ್ಬಂದಿಗಳು ಪುರಸಭೆಯ ಮುಖ್ಯ ಅಧಿಕಾರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. ತಕ್ಷಣವೇ ಬೀಗ ತೆಗೆದು ಸಿಬ್ಬಂದಿಗಳನ್ನು ಪುರಸಭೆ ನೌಕರ ಕಳುಹಿಸಿಕೊಟ್ಟಿದ್ದಾನೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories