ಕುಂದಾಪುರ : ಶೆಟ್ರಕಟ್ಟೆಯಲ್ಲಿ ಮತ್ತೊಂದು ಭೀಕರ ಅಪಘಾತ, ವಿಡಿಯೋ ವೈರಲ್‌

ಕುಂದಾಪುರ (kundapura shetrakatte accident) : ಕಳೆದ ಕೆಲವು ದಿನಗಳ ಹಿಂದೆಷ್ಟೇ ಟಿಪ್ಪರ್‌ ಅಪಘಾತದ ಕಹಿ ಘಟನೆ ಮರೆಯಾಗುವ ಮುನ್ನವೇ ಕುಂದಾಪುರ ತಾಲೂಕಿನ ನೇರಳಕಟ್ಟೆ ಸಮೀಪದ ಶೆಟ್ರಕಟ್ಟೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಿವಮೊಗ್ಗದಿಂದ ಕುಂದಾಪುರದ ಕಡೆಗೆ ಚಲಿಸುತ್ತಿದ್ದ ದುರ್ಗಾ ಶಕ್ತಿ ಅನ್ನೋ ಬಸ್ಸಿಗೆ ಬೈಕ್‌ ಢಿಕ್ಕಿಯಾಗಿದ್ದು, ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕುಂದಾಪುರ ಕಡೆಯಿಂದ ಕೊಲ್ಲೂರು ಕಡೆಗೆ ಚಲಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ ಅನ್ನು ಶೆಟ್ರಕಟ್ಟೆಯ ಬಳಿಯಲ್ಲಿ ಓವರ್‌ ಟೇಕ್‌ ಮಾಡಿದ್ದಾನೆ. ಈ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ದುರ್ಗಾಶಕ್ತಿ ಬಸ್ಸಿಗೆ ಬೈಕ್‌ ಢಿಕ್ಕಿಯಾಗಿದೆ.

Also Read : Udupi Varahi Irrigation Project : ವಾರಾಹಿ ಯೋಜನೆ ರದ್ದು : ಕರಾವಳಿಯಲ್ಲಿ ಬುಗಿಲೆದ್ದ ಆಕ್ರೋಶ, ಏನಿದು ವಿವಾದ ?

ಘಟನೆಯಲ್ಲಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕಳೆದ ಕೆಲವು ದಿನ ಹಿಂದೆಯಷ್ಟೆ ಟಿಪ್ಪರ್‌ ಕೆಎಸ್‌ಆರ್‌ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಿಂದ ಗಾಯಾಳುಗಳು ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.

Also Read : ಬ್ರಹ್ಮಾವರ : ಮಹಿಳೆ ಮೇಲೆ ಅವಾಚ್ಯ ವರ್ತನೆ ಆರೋಪ, ಪ್ರತಿ ದೂರು ದಾಖಲು, ದೂರುದಾರ ನಾಪತ್ತೆ..?

kundapura shetrakatte accident bike rider serious

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories