Malpe Sandeep Death case : ಮಲ್ಪೆ ಸಂದೀಪ್ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮಂಗಳೂರಿನ ಮಹಿಳೆ ಅರೆಸ್ಟ್
ಗೋವಾದ ಕ್ಯಾಲಂಗಟ್ ಪೊಲೀಸರು ಪ್ರಮುಖ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಮಂಗಳೂರು ಮೂಲದ ನಿವಾಸಿ ಅಕ್ಷತಾ ಎಂದು ಗುರುತಿಸಲಾಗಿದೆ. ಆಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು ಎಂದು ತಿಳಿದು ಬಂದಿದೆ.

ಉಡುಪಿ: ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಮಲ್ಪೆಯ ನಿವಾಸಿ ಸಂದೀಪ್ ಸಾಲ್ಯಾನ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವಳನ್ನು ಅರೆಸ್ಟ್ ಮಾಡಲಾಗಿದೆ, ಅಷ್ಟಕ್ಕೂ ಆ ಮಹಿಳೆ ಯಾರು ಅನ್ನೋ ಡಿಟೇಲ್ಸ್ ಇಲ್ಲಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಲ್ಪೆಯ ನಿವಾಸಿಯಾಗಿರುವ ಸಂದೀಪ್ ಸಾಲ್ಯಾನ್ ಗೋವಾ, ಮುಂಬೈ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣ ಕರಾವಳಿ ಭಾಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಗೋವಾ ಪೊಲೀಸರು ಮಹಿಳೆಯೋರ್ವಳನ್ನು ಬಂಧಿಸಿರುವುದು ಪ್ರಕರಣವನ್ನು ಹೊಸ ಧಿಕ್ಕಿಗೆ ಕೊಂಡೊಯ್ದಿದೆ.
ಗೋವಾದ ಕ್ಯಾಲಂಗಟ್ ಪೊಲೀಸರು ಪ್ರಮುಖ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಮಂಗಳೂರು ಮೂಲದ ನಿವಾಸಿ ಅಕ್ಷತಾ ಎಂದು ಗುರುತಿಸಲಾಗಿದೆ. ಆಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು ಎಂದು ತಿಳಿದು ಬಂದಿದೆ. ಗೋವಾದಲ್ಲಿ ನಡೆದ ಸಂದೀಪ್ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು.
ಆರಂಭದಲ್ಲಿ ನಿಗೂಢ ಸಾವಿನ ಪ್ರಕರಣ ದಾಖಲಾಗಿದ್ದರೂ ಕೂಡ, ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪೊಲೀಸರಿಗೆ ಒಂದೊಂದೇ ಮಾಹಿತಿ ಸಿಗೋದಕ್ಕೆ ಶುರುವಾಗಿತ್ತು. ತನಿಖೆಯ ವೇಳೆ ಸಂದೀಪ್ ಅವರ ಬಳಿ ಇದ್ದ ಚಿನ್ನಾಭರಣ ಮತ್ತು ಹಣ ನಾಪತ್ತೆಯಾಗಿರುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಮಾತ್ರವಲ್ಲ ಇದು ಇಡೀ ತನಿಖೆಯ ದಿಕ್ಕು ಸಂಪೂರ್ಣ ಬದಲಾಯಿಸಿ ಬಿಟ್ಟಿದೆ.
ಸಂದೀಪ್ ಜೊತೆಯಲ್ಲಿದ್ದ ಮಹಿಳೆ ಅರೆಸ್ಟ್
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂದೀಪ್ ಮತ್ತು ಆರೋಪಿ ಮಹಿಳೆ ಗೋವಾದ ರೆಸಾರ್ಟ್‌ನಲ್ಲಿ ತಂಗಿದ್ದರು. ಇದೇ ವೇಳೆ ಮಹಿಳೆ ರೆಸಾರ್ಟ್ ಸಿಬ್ಬಂದಿಯಿಂದ ಕಟ್ಟರ್‌ನ್ನು ಕೇಳಿ ಪಡೆದಿದ್ದಳು ಎನ್ನಲಾಗಿದೆ. ಈ ಮಾಹಿತಿ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವಾಗಿದೆ ಎನ್ನಲಾಗಿದೆ.
ನಂತರ ಸಂದೀಪ್ ಅವರ ಬಳಿ ಇದ್ದ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಮಹಿಳೆ ಅಲ್ಲಿಂದ ತೆರಳಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇದೇ ಆಧಾರದ ಮೇಲೆ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಮಹಿಳೆಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ ಅನ್ನೋದು ದೃಢಪಟ್ಟಿದೆ. ಇನ್ನು ಇದು ಪೂರ್ವ ನಿಯೋಜಿತ ಕೊಲೆಯೇ ? ಅಥವಾ ಹಣ ಮತ್ತು ಚಿನ್ನ ದೋಚುವ ಸಲುವಾಗಿಯೇ ನಡೆದ ಕೃತ್ಯವೇ ಅನ್ನೋದು ಇನ್ನು ಇನ್ನಷ್ಟೇ ಖಚಿತವಾಗಬೇಕಾಗಿದೆ. ಈ ಪ್ರಕರಣದಲ್ಲಿ ಮಹಿಳೆಗೆ ಇನ್ನು ಯಾರಾದ್ರೂ ಸಾಥ್ ನೀಡಿದ್ರಾ ಅನ್ನೋ ಬಗ್ಗೆಯೂ ತನಿಖೆ ಮುಂದುವರಿದಿದೆ.
ಒಟ್ಟಿನಲ್ಲಿ ಮಲ್ಪೆಯ ಸಂದೀಪ್ ಸಾವಿಗೆ ನಿಜವಾದ ಕಾರಣವೇನು ? ಕೊಲೆಗೆ ಹೇಗೆ ನಡೆಯಿತು ? ಅನ್ನೋದು ಇನ್ನಷ್ಟು ಬಯಲಾಗಬೇಕಾಗಿದೆ. ಆದರೆ ಆರೋಪಿ ಮಹಿಳೆಯ ವಿಚಾರಣೆಯಿಂದ ಹಲವು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದ್ದು, ಸದ್ಯ ಈ ಪ್ರಕರಣ ರಾಜ್ಯಾದ್ಯಂತ ಭಾರೀ ಕುತೂಹಲ ಮೂಡಿಸಿದೆ.

