ನಿಟ್ಟೆ ವಿನಯ ಹೆಗ್ಡೆ ನಿಧನಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಸಂತಾಪ

Nitte University Chancellor Vinaya Hegde : ಕಾರ್ಕಳ: ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯ ಹರಿಕಾರ, ನಿಟ್ಟೆ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಅವರ ನಿಧನಕ್ಕೆ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಶಿಕ್ಷಣವೆಂಬ ಯಜ್ಷದಲ್ಲಿ ಸುಮಿದೆಯಂತೆ ಉರಿದು ವಿನಯ್ ಹೆಗ್ಡೆ ಅವರು ಸಾವಿರಾರು ಮಂದಿಯ ಬಾಳಲ್ಲಿ ಬೆಳಕಾದವರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹೆಸರನ್ನು ವಿಶ್ವದಾದ್ಯಂತ ಹರಿದಾಡುವಂತೆ ಮಾಡಿದ ವಿನಯ್ ಹೆಗ್ಡೆ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ ಎಂದಿದ್ದಾರೆ.
ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ, ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ, ಲೆಮಿನಾ ಇಂಡಸ್ಟ್ರೀಸ್ನ ಸ್ಥಾಪಕರಾಗಿ ಸಾವಿರಾರು ಮಂದಿಗೆ ಅನ್ನ ನೀಡಿದ ಅನ್ನದಾತರು. ಮಾತ್ರವಲ್ಲ ಆರೋಗ್ಯ, ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
ನಿಟ್ಟೆ ವಿನಯ್ ಹೆಗ್ಡೆ ಅವರ ನಿಧನದಿಂದಾಗಿ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ, ಆರೋಗ್ಯ, ಸಮಾಜ ಸೇವೆ, ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶದ ಜೀವನ, ಅವರು ಸಮಾಜಕ್ಕೆ ನೀಡಿದ ಸೇವೆ, ಸಾಧನೆಗಳು ಸದಾ ಸ್ಮರಣೀಯ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ನಿಟ್ಟೆ ವಿನಯ್ ಹೆಗ್ಡೆ ಅವರ ಸಾಧನೆ :
ಲೋಕಸಭೆಯ ಮಾಜಿ ಸ್ಪೀಕರ್ ದಿವಂಗತ ಜಸ್ಟಿಸ್ ಕೆ. ಎಸ್. ಹೆಗ್ಡೆ ಅವರ ಪುತ್ರರಾದ ವಿನಯ ಹೆಗ್ಡೆ ಅವರು, ಕೇವಲ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಲ್ಲದೆ, ನಿಟ್ಟೆ ಎಂಬ ಪುಟ್ಟ ಗ್ರಾಮವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು.
Also Read : N Vinay Hegde: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಎನ್. ವಿನಯ್ ಹೆಗ್ಡೆ ನಿಧನ
ಶಿಕ್ಷಣ ಕ್ರಾಂತಿ: 1979ರಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ, ಇಂದು ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ 40ಕ್ಕೂ ಹೆಚ್ಚು ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದ್ದಾರೆ.
ಉದ್ಯಮ ಕ್ಷೇತ್ರ: 1975ರಲ್ಲಿ ‘ಲೆಮಿನಾ ಸಸ್ಪೆನ್ಷನ್’ ಎಂಬ ಕೈಗಾರಿಕೆಯನ್ನು ಸ್ಥಾಪಿಸಿ, ಸಾವಿರಾರು ಮಂದಿಗೆ ಉದ್ಯೋಗ ನೀಡಿದವರು.
ಸಮಾಜ ಸೇವೆ: ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು 24ಕ್ಕೂ ಹೆಚ್ಚು ಗ್ರಾಮೀಣ ಆಸ್ಪತ್ರೆಗಳನ್ನು ಸ್ಥಾಪಿಸಿದ ಇವರು, ನಿಜವಾದ ಅರ್ಥದಲ್ಲಿ ‘ಅನ್ನದಾತ’ ಮತ್ತು ‘ಆರೋಗ್ಯದಾತ’ ಎನಿಸಿಕೊಂಡಿದ್ದರು.
ನಿಟ್ಟೆ ವಿನಯ್ ಹೆಗ್ಡೆ : ಪ್ರಶಸ್ತಿ ಮತ್ತು ಗೌರವ
ಇವರ ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವೆಗಾಗಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
Aslo Read : ಕರಾವಳಿ ಭಾಗದ ಜನತೆಗೆ ಗುಡ್ನ್ಯೂಸ್.. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್
Nitte University Chancellor N Vinaya Hegde passed away Karkala MLA V Sunil Kumar Condolences



