ನಾಳೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ : ಎಷ್ಟು ಹೊತ್ತು ಇರಲಿದೆ ರೋಡ್​ ಶೋ ? ಎಲ್ಲೆಲ್ಲಿ ವೇದಿಕೆ ನಿರ್ಮಾಣ ? ಇಲ್ಲಿದೆ ಮಾಹಿತಿ

PM Modi to Udupi Srikrishna Math: ಪ್ರಧಾನಿ ನರೇಂದ್ರ ಮೋದಿ ನಾಳೆ ಉಡುಪಿಯ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೃಷ್ಣನೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಸಂಭವಿಸದಂತೆ ಸಕಲ ಮುಂಜಾಗ್ರಾತ ಕ್ರಮವನ್ನು ಉಡುಪಿ ಜಿಲ್ಲಾಡಳಿತ ಕೈಗೊಂಡಿದೆ.

ಇನ್ನು ಪ್ರಧಾನಿ ಮೋದಿ ಶ್ರೀಕೃಷ್ಣ ಭೇಟಿಗೂ ಮುನ್ನ ರೋಡ್​ ಶೋನಲ್ಲಿ ಭಾಗಿಯಾಗಲಿದ್ದಾರೆ. ಆದಿ ಉಡುಪಿ ಹೆಲಿಪ್ಯಾಡ್​ನಿಂದ ನಾರಾಯಣಗುರು ಸರ್ಕಲ್​ವರೆಗೆ ಪ್ರಧಾನಿ ಮೋದಿ ಅವರ ಕಾರು ಬರಲಿದೆ. ನಾರಾಯಣ ಗುರು ಸರ್ಕಲ್​ನಲ್ಲಿ ಹಾಗೂ ಜಯಲಕ್ಷ್ಮೀ ಸಿಲ್ಕ್ಸ್​ ಮುಂಭಾಗದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಾಣ ಮಾಡಲಾಗಿದೆ.

ಇದರ ಜೊತೆಯಲ್ಲಿ ನಗರದ ಸಿಟಿ ಬಸ್​ ನಿಲ್ದಾಣದ ಬಳಿಯೂ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ಮೂರು ಕಡೆಗಳಲ್ಲಿ ನಿಧಾನವಾಗಿ ಪ್ರಧಾನಿ ಮೋದಿ ಅವರಿರುವ ಕಾರು ಸಂಚರಿಸಲಿದೆ. ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರೆಡೆಗೆ ಕೈ ಬೀಸುತ್ತಾ ಪ್ರಧಾನಿ ನೋದಿ ಈ ಮಾರ್ಗಗಳಲ್ಲಿ ಸಾಗಲಿದ್ದಾರೆ. ಪ್ರಧಾನಿ ಮೋದಿ ಅವರ ರೋಡ್​ ಶೋದಲ್ಲಿ ಸುಮಾರು 30 ಸಾವಿರ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

Also Read: ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ : ಹೇಗಿರಲಿದೆ ಗೊತ್ತಾ ಭದ್ರತೆ ?

ಆದಿಉಡುಪಿ ಹೆಲಿಪ್ಯಾಡ್​​ನಿಂದ ಶ್ರೀಕೃಷ್ಣ ಮಠದವರೆಗೂ ಬ್ಯಾರಿಕೇಡ್​ ಅಳವಡಿಸಲಾಗಿದೆ. ರಸ್ತೆಯ ಎಡಮಗ್ಗುಲಿನಲ್ಲಿ 2 ಹಂತಗಳಲ್ಲಿ ಬ್ಯಾರಿಕೇಡ್​ ನಿರ್ಮಾಣಗೊಂಡಿದೆ. ಡಿವೈಡರ್​ಗಳ ಮೇಲೆ ಕೇಸರಿ ಪತಾಕೆಗಳು ರಾರಾಜಿಸುತ್ತಿವೆ. ಕೃಷ್ಣ ಮಠದ ವತಿಯಿಂದ ಈ ಕೇಸರಿ ಧ್ವಜ ಹಾಗೂ ಪತಾಕೆಗಳನ್ನು ಅಳವಡಿಸಲಾಗಿದೆ. ಒಟ್ಟೂ 15 ನಿಮಿಷಗಳ ಕಾಲ ಪ್ರಧಾನಿ ಮೋದಿ ರೋಡ್​ ಶೋನಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ನಾಳೆ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಪ್ರವಾಸಿಗರ ವಾಹನವನ್ನು ಕಲ್ಸಂಕ ವೃತ್ತದಲ್ಲಿಯೇ ಇಳಿಸಿ ವಾಹನಗಳನ್ನು ವಾಪಾಸ್​ ಕಳುಹಿಸುತ್ತಿದ್ದಾರೆ.

Also read: ಉಡುಪಿಗೆ ನ.28ರಂದು ಪ್ರಧಾನಿ ಮೋದಿ : ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್​ವರೆಗೆ ರೋಡ್​ ಶೋ

ಹೀಗಾಗಿ ಇಂದು ಶ್ರೀಕೃಷ್ಣನ ದರ್ಶನ ಮಾಡುವವರು ಮಠಕ್ಕೆ ಅರ್ಧಕಿಲೋಮೀಟರ್​ ಕಾಲ್ನಡಿಗೆಯಲ್ಲಿಯೇ ಬರಬೇಕಿದೆ. ವಾಹನಗಳಿಗೆ ಮಠಕ್ಕೆ ಎಂಟ್ರಿ ನಿಷೇಧಿಸಲಾಗಿದೆ. ವಸತಿ ಗೃಹಗಳಲ್ಲಿ ವಾಸವಿರುವ ಪ್ರವಾಸಿಗರನ್ನು ಮುಂಜಾನೆಯಿಂದಲೇ ಭದ್ರತಾ ಸಿಬ್ಬಂದಿ ಖಾಲಿ ಮಾಡಿಸುತ್ತಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories