ಸಾಲಿಗ್ರಾಮ : ಪ್ರಾಣಿ ಸಂಗ್ರಹಾಲಯಕ್ಕೆ ಪೇಟಾ ದಾಳಿ, ಪ್ರಾಣಿಗಳ ರಕ್ಷಣೆ
ಸಾಲಿಗ್ರಾಮದಲ್ಲಿ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ಅವರು ಪ್ರಾಣಿ ರಕ್ಷಣಾ ಕೇಂದ್ರವನ್ನು ನಡೆಸುತ್ತಿದ್ದರು. ಸೂಕ್ತ ಮೂಲಭೂತ ಸೌಕರ್ಯಗಳ ಜೊತೆಗೆ ಶುಚಿತ್ವ ಕಾಪಾಡುತ್ತಿಲ್ಲ ಅನ್ನೋ ಆರೋಪದ ಹಿನ್ನೆಲೆಯಲ್ಲಿ ಪೇಟಾ ಈ ಹಿಂದೆಯೇ ಇದೇ ಪ್ರಾಣಿ ರಕ್ಷಣಾ ಕೇಂದ್ರದ ಮೇಲೆ ದಾಳಿ ನಡೆಸಿತ್ತು.

ಕೋಟ : ಸಾಲಿಗ್ರಾಮದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಪೇಟಾ (PETA India ) ದಾಳಿ ನಡೆಸಿದ್ದು, ಗಾಯಗೊಂಡಿರುವ ಹಲವು ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಸಾಲಿಗ್ರಾಮದಲ್ಲಿ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ಅವರು ಪ್ರಾಣಿ ರಕ್ಷಣಾ ಕೇಂದ್ರವನ್ನು ನಡೆಸುತ್ತಿದ್ದರು. ಸೂಕ್ತ ಮೂಲಭೂತ ಸೌಕರ್ಯಗಳ ಜೊತೆಗೆ ಶುಚಿತ್ವ ಕಾಪಾಡುತ್ತಿಲ್ಲ ಅನ್ನೋ ಆರೋಪದ ಹಿನ್ನೆಲೆಯಲ್ಲಿ ಪೇಟಾ ಈ ಹಿಂದೆಯೇ ಇದೇ ಪ್ರಾಣಿ ರಕ್ಷಣಾ ಕೇಂದ್ರದ ಮೇಲೆ ದಾಳಿ ನಡೆಸಿತ್ತು.
ಇದೀಗ ಮತ್ತೊಂದು ಬಾರಿ ಪೇಟಾ ದಾಳಿ ನಡೆಸಿದ್ದು, ಅನಾರೋಗ್ಯ ಪೀಡಿತ ಬೆಕ್ಕು, ನಾಯಿ ಸೇರಿದಂತೆ ಹಲವು ಪ್ರಾಣಿಗಳನ್ನು ವಶಕ್ಕೆ ಪಡೆದಿದೆ. ಪೇಟಾ ಕಾರ್ಯಕರ್ತರ ಜೊತೆಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೌರ ನೌಕರರು, ಪಟ್ಟಣ ಪಂಚಾಯತ್ ಆರೋಗ್ಯ ಅಧಿಕಾರಿಗಳು ಹಾಗೂ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ಹಲವು ವರ್ಷಗಳಿಂದಲೂ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ಅವರು ಪ್ರಾಣಿ ರಕ್ಷಣಾ ಕೇಂದ್ರವನ್ನು ನಡೆಸುತ್ತಿದ್ದು, ಗಾಯಗೊಂಡಿರುವ ಪ್ರಾಣಿಗಳನ್ನು ತಂದು ಅವುಗಳಿಗೆ ಚಿಕಿತ್ಸೆ ನೀಡುವ ಕಾರ್ಯವನ್ನು ಮಾಡುತ್ತಿದ್ದರು.
saligrama zoo peta raid animals rescued kannada news