Shakti scheme Free Bus : ಶಕ್ತಿ ಯೋಜನೆ ರದ್ದಾಗುತ್ತಾ ? ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಹೇಳಿಕೆ

Shakti scheme Free Bus : ಬೈಂದೂರು : ಕರ್ನಾಟಕ ಸರಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯನ್ನು ರಾಜ್ಯ ಸರಕಾರ ರದ್ದು ಮಾಡುತ್ತಾ. ಈ ವಿಚಾರದ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರಾಜ್ಯದಲ್ಲಿ ಶಕ್ತಿ ಯೋಜನೆ ಬಂದ್​ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ ಲಾಭವಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Shakti scheme Free Bus : ಖಾಸಗಿ ಬಸ್ಸುಗಳಲ್ಲಿ ಲಗೇಜ್‌ ಸಾಗಾಟ ಬಂದ್‌

ಚಿತ್ರದುರ್ಗದಲ್ಲಿ ನಡೆ ಬಸ್​ ದುರಂತದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ಕರ್ನೂಲ್ ಘಟನೆಯ ಬಳಿಕ ಬಸ್ನಲ್ಲಿ ಪ್ರಯಾಣಿಕರ ವಸ್ತುಗಳನ್ನು ಹೊರತುಪಡಿಸಿ ಮತ್ತೇನು ಸಾಗಟಕ್ಕೆ ಅವಕಾಶವಿಲ್ಲ.

ಪ್ರಯಾಣಿಕರ ಸೂಟ್ಕೇಸ್ ಮತ್ತು ಲಗೇಜ್ ಬಿಟ್ಟು ಮತ್ಯಾವ ವಸ್ತು ತೆಗೆದುಕೊಂಡು ಹೋಗಲು ಅವಕಾಶವಿಲ್ಲ .ನಮ್ಮ ಅಧಿಕಾರಿಗಳು ಈ ರೀತಿನಲ್ಲಿ ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

2013ರಲ್ಲಿ ನಾನು ಸಾರಿಗೆ ಇಲಾಖೆಯ ಸಚಿವನಾಗಿದ್ದ ಸಂದರ್ಭದಲ್ಲಿಯೂ ಹಾವೇರಿಯಲ್ಲಿ ಚಿತ್ರದುರ್ಗ ಮಾದರಿಯ ಅಪಘಾತ ನಡೆದಿತ್ತು. ಆಗ ನಾನು ಗಮನಿಸಿದ್ದು ಆ ಬಸ್​ನಲ್ಲಿ ಎಮರ್ಜೆನ್ಸಿ ಗೇಟ್​ ಇರಲಿಲ್ಲ. ಲಕ್ಷುರಿ ಬಸ್ ಗಳಲ್ಲೂ ಕೂಡ ಗ್ಲಾಸ್ ಒಡೆದು ಆಚೆಗೆ ಬರಬೇಕಾದ ಪರಿಸ್ಥಿತಿ ಇತ್ತು.

ಖಾಸಗಿ ಹಾಗೂ ಶಾಲಾ ವಾಹನಗಳಿಗೆ ಕಟ್ಟುನಿಟ್ಟಿನ ಕ್ರಮ

ಇದಾದ ಬಳಿಕ ನಮ್ಮ ಇಲಾಖೆ 25 ಸಾವಿರ ಬಸ್​ಗಳನ್ನು ಸೇರಿಸಿ ಎಲ್ಲಾ ಖಾಸಗಿ ಹಾಗೂ ಶಾಲಾ ವಾಹನಗಳಿಗೆ ಎಮರ್ಜೆನ್ಸಿ ಗೇಟ್​ ಅಳವಡಿಸಿದ್ದೆ. ಈಗ ಯಾವುದೇ ಎಮರ್ಜೆನ್ಸಿ ಗೇಟ್​ ಇಲ್ಲದ ವಾಹನಗಳಿಗೆ ಎಫ್​ಸಿ ನೀಡುವ ಪರಿಪಾಠ ಇಲ್ಲ ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳ ಪಾರುಪಥ್ಯ ವಿಚಾರವಾಗಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರು ಪಕ್ಷಾತೀತವಾಗಿ ಸರ್ಕಾರಿ ಬಸ್ ಕುರಿತು ಸಹಮತ ವ್ಯಕ್ತಪಡಿಸಿದ್ದಾರೆ.

ಇಲಾಖೆಯಿಂದ ಬಸ್ ಓಡಿಸಲು ನಾವು ಉತ್ಸುಕರಾಗಿದ್ದೇವೆ, ಖಾಸಗಿಯವರು ಪದೇ ಪದೇ ಕೋರ್ಟಿಗೆ ಹೋಗುತ್ತಿದ್ದಾರೆ. ಪದೇ ಪದೇ ಕೋರ್ಟ್​ಗೆ ಹೋಗುತ್ತಿರುವುದರಿಂದ ಸರ್ಕಾರಿ ಬಸ್​ಗಳನ್ನು ನಿಯೋಜಿಸಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಎರಡು ದಿನದಲ್ಲಿ ಪರಿಹಾರ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಚಾರದ ಬಗ್ಗೆ ಹಾಗೂ ಸಿಎಂ ಬದಲಾವಣೆ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಮಲಿಂಗಾರೆಡ್ಡಿ, ಉತ್ತರ ಪ್ರದೇಶದಂತೆ ಕರ್ನಾಟಕವೂ ಬುಲ್ಡೋಜರ್​ ನೀತಿ ಅನುಸರಿಸುತ್ತಿದೆ ಎಂಬ ಕೇರಳ ಸಿಎಂ ಪಿಣರಾಯಿ ವಿಜಯನ್​ ಹೇಳಿಕೆಗೆ ತಿರುಗೇಟು ನೀಡಿದ್ರು.

ಅವರು ಕೇರಳ ಮುಖ್ಯಮಂತ್ರಿ. ಅಲ್ಲಿನ ಸಮಸ್ಯೆಗಳನ್ನು ನೋಡಿಕೊಳ್ಳಲಿ. ನಮ್ಮ ರಾಜ್ಯದ ವಿಷಯ ನಾವು ನೋಡ್ತೇವೆ. ನಮ್ಮ ಚಿಂತೆ ಅವರಿಗೆ ಬೇಡ ಎಂದು ಟಾಂಗ್ ನೀಡಿದ್ರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ವಿಚಾರವಾಗಿಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಎರಡು ದಿನಗಳಿಂದ ಇದೇ ವಿಚಾರವಾಗಿ ಮಾತುಕತೆ ಮುಂದುವರಿಸಿದ್ದೇನೆ. ಎಲ್ಲದಕ್ಕೂ ಪರಿಹಾರ ಇದೆ ಎಂದು ಹೇಳಿದರು.

Shakti scheme Free Bus cancelled Minister Rama Linga Reddy Big Statement in Byndoor Udupi News

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories