ಉಡುಪಿ ಸೈಬರ್ ವಂಚನೆ: ಟೆಲಿಗ್ರಾಂ ಜಾಬ್ ಲಿಂಕ್ ಮೂಲಕ ₹12 ಲಕ್ಷ ವಂಚನೆ

Udupi Cyber ​​Fraud : ಸೈಬರ್‌ ವಂಚನೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಇದೀಗ ಟೆಲಿಗ್ರಾಂ (Telegram) ಆಪ್ ಮೂಲಕ ಉದ್ಯೋಗ ಮತ್ತು ಹೂಡಿಕೆಯ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹12,38,750 ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಪ್ರವೀಣ್ ಎಂಬವರೇ ವಂಚನೆಗೆ ಒಳಗಾದವರು. ಅಕ್ಟೋಬರ್‌ 22ರಿಂದ 29ರ ವರೆಗೆ ಈ ವಂಚನೆ ನಡೆದಿದೆ. ಪ್ರವೀಣ್‌ ಅವರು ತಮ್ಮ ಮೊಬೈಲ್‌ ಟೆಲಿಗ್ರಾಂ ಆಪ್ ವೀಕ್ಷಿಸುತ್ತಿದ್ದಾಗ @Roshnikhandbara ಎಂಬ ಜಾಬ್ ಲಿಂಕ್ ಬಂದಿದೆ.

ಈ ಲಿಂಕ್‌ನಲ್ಲಿ ವಿವಿಧ ಉದ್ಯೋಗ ಮತ್ತು ಹೂಡಿಕೆಯ ಬಗ್ಗೆ ಸಂದೇಶಗಳನ್ನು ಕಳುಹಿಸಲಾಗಿತ್ತು. ದೂರುದಾರರು ಲಿಂಕ್ ಒತ್ತಿದಾಗ ಅವರನ್ನು NSE (National Stock Exchange) ಎಂಬ ಗ್ರೂಪಿಗೆ ಸೇರಿಸಲಾಗಿದೆ.

Also Read: ಕಾರ್ಕಳಕ್ಕೆ ಒಕ್ಕರಿಸಿದ ಕುಷ್ಟರೋಗ : ಈ ಲಕ್ಷಣ ಕಂಡುಬಂದ್ರೆ ವೈದ್ಯರನ್ನು ಸಂಪರ್ಕಿಸಿ

ನಂತರ ವಿಶಾಲ್‌ ಕುಮಾರ್‌ (Vishal Kumar) ಎಂಬಾತನು ಹೋಟೆಲ್ ರೇಟಿಂಗ್ಸ್ (Hotel Ratings) ಮತ್ತು ಹೂಡಿಕೆಯ ಮೇಲಿನ ಲಾಭಾಂಶದ (Profit on Investment) ಬಗ್ಗೆ ಮತ್ತೊಂದು ಗ್ರೂಪಿಗೆ ಸೇರಿಸಿದ್ದಾನೆ.

ಮೊದಲಿಗೆ ನೀಡಿದ 3 ಟಾಸ್ಕ್‌ಗಳನ್ನು ಮುಗಿಸಿದ ನಂತರ, ದೂರುದಾರರು ಆರೋಪಿತರು ನೀಡಿದ ಕ್ಯೂಆರ್ ಕೋಡ್‌ಗೆ (QR Code) ₹3,900 ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಆರೋಪಿತರು ₹8,800 ಮೊತ್ತವನ್ನು ದೂರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿ ವಿಶ್ವಾಸ ಗಳಿಸಿದ್ದಾರೆ.

ಆರೋಪಿಗಳ ಸೂಚನೆಯಂತೆ ಹಂತ ಹಂತವಾಗಿ ಒಟ್ಟು ₹12,38,750 ಹಣವನ್ನು ಕ್ಯೂಆರ್ ಕೋಡ್ ಸ್ಕ್ಯಾನ್, ಆರ್‌ಟಿಜಿಎಸ್ (RTGS) ಮತ್ತು ಕ್ಯಾಶ್ ಡೆಪಾಸಿಟ್ (Cash Deposit) ಮೂಲಕ ಹೂಡಿಕೆ ಮಾಡಿದ್ದಾರೆ..

Also Read: Gopal Kharvi : ಗೋಪಾಲ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ : ಗಿನ್ನಿಸ್‌ ದಾಖಲೆ ವೀರನ ಹೊಸ ಸಾಧನೆ

ಆರೋಪಿಗಳು ದೂರುದಾರರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಭರವಸೆ ನೀಡಿದ ಲಾಭಾಂಶವನ್ನಾಗಲಿ ಹಿಂದಿರುಗಿಸದೇ, ನಂಬಿಸಿ ಮೋಸ ಮಾಡಿ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ.

ಈ ವಂಚನೆ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2025 ರಂತೆ ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ: 318(4) ಬಿಎನ್‌ಎಸ್‌ (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories