ರ‍್ಯಾಪಿಡೊ ಚಾಲಕನ ಈ ಕಾರ್ಯವನ್ನು ಹೊಗಳಿದ ಮಹಿಳೆ
Gurugram: ಕಳೆದ ಎರಡು ದಿನಗಳಿಂದ ಗುರುಗ್ರಾಮ್ ಮತ್ತು ದೆಹಲಿ ಎನ್ಸಿಆರ್ನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಹಲವಾರು ಪ್ರದೇಶಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಇದರಿಂದಾಗಿ ನಗರದ ಪ್ರಯಾಣಿಕರು ಮತ್ತು ಸಂಚಾರದ ಮೇಲೆ ಪರಿಣಾಮ ಬೀರಿದೆ. ಹೀಗಿರುವಾಗ ಗುರುಗ್ರಾಮ್ನ ಮಹಿಳೆಯೊಬ್ಬಳು ಮನೆಗೆ ಹೋಗುವಾಗ 6 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದು, ತನಗಾದ ಈ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಮತ್ತು ಅವಳು ಬುಕ್ ಮಾಡಿದ್ದ ರ‍್ಯಾಪಿಡೊ ಚಾಲಕ ಅವಳೊಂದಿಗೆ ನಿಂತು ಸುರಕ್ಷಿತವಾಗಿ ಮನೆಗೆ ಸೇರಿಸಿದ್ದ ಕಾರಣ ಆತನ ಔದಾರ್ಯವನ್ನು ಹೊಗಳಿದ್ದಾಳೆ. ಈ ಪೋಸ್ಟ್ ಈಗ ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.
ಆ ಮಹಿಳೆ ಕೆಲಸ ಮುಗಿಸಿ ತನ್ನ ಮನೆಗೆ ಹಿಂತಿರುಗಲು ರ‍್ಯಾಪಿಡೊ ಬುಕ್ ಮಾಡಿದ್ದಳು. ಆದರೆ ದಾರಿ ಮಧ್ಯದಲ್ಲಿ, ಅವಳು ಗುರುಗ್ರಾಮ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾಳೆ. 6 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ನಲ್ಲಿ ಸಿಲುಕಿದ ನಂತರ, ರ‍್ಯಾಪಿಡೊ ಚಾಲಕ ಅವಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾನೆ. ಮತ್ತು ಅದಕ್ಕೆ ಹೆಚ್ಚುವರಿ ಹಣವನ್ನು ಸಹ ತೆಗೆದುಕೊಳ್ಳಲಿಲ್ಲವಂತೆ. ಹಾಗಾಗಿ ಅವಳು ರ‍್ಯಾಪಿಡೊ ಚಾಲಕನಿಗೆ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದ್ದಾಳೆ.
ಜನರು ಯಾವುದೇ ಕಾರ್ಯಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಪರಸ್ಪರ ಸಹಾಯ ಮಾಡುತ್ತಿದ್ದ ಕಾಲ ಈಗ ಮುಗಿದು ಹೋಗಿದೆ. ಇತ್ತೀಚಿನ ದಿನಗಳಲ್ಲಿ, ಜನರು ತಮ್ಮ ಸ್ವಂತ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುತ್ತಾರೆ ಮತ್ತು ತಮ್ಮ ಬಗ್ಗೆ ಮಾತ್ರ ಯೋಚಿಸುವಷ್ಟು ಸ್ವಾರ್ಥಿಗಳಾಗಿದ್ದಾರೆ. ಈ ಮಧ್ಯದಲ್ಲಿ ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಬೇಕೆಂಬ ಸಹಾನುಭೂತಿ ಗುಣಗಳು ಜನರಲ್ಲಿ ಸತ್ತುಹೋಗಿವೆ. ಹೀಗಿರುವಾಗ ಈ ರ‍್ಯಾಪಿಡೊ ಚಾಲಕ ಮಾನವೀಯತೆ ಇನ್ನೂ ಇದೆ ಎಂದು ಸಾಬೀತುಪಡಿಸಿದನು ಮತ್ತು ತನ್ನ ವೃತ್ತಿಗೆ ನಿಷ್ಠನಾಗಿ ನಿಂತನು. ಹಾಗಾಗಿ ಈ ಪೋಸ್ಟ್ ಎಲ್ಲರ ಗಮನ ಸೆಳೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರುಗ್ರಾಮದಲ್ಲಿ ಆರೇಂಜ್ ಅಲರ್ಟ್ ಘೋಷಣೆ
ಗುರುಗ್ರಾಮದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಂಚಾರ ಸ್ಥಗಿತಗೊಂಡಿದ್ದು, ನಗರವು ತೀವ್ರ ಜಲಾವೃತದಿಂದ ಬಳಲುತ್ತಿರುವುದರಿಂದ, ಅಧಿಕಾರಿಗಳು ಕಾರ್ಪೊರೇಟ್ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಮತ್ತು ಶಾಲೆಗಳು ಆನ್ಲೈನ್ ತರಗತಿಗಳಿಗೆ ಸ್ಥಳಾಂತರಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ಬೀದಿ ನಾಯಿಗಳನ್ನು ಆಹ್ವಾನಿಸಿದ ವರ



