ಬೆಂಗಳೂರಲ್ಲೂ ಬಂತಾ ಚಾಲಕ ರಹಿತ ಕಾರು
Driverless Car Bangalore : ಬೆಂಗಳೂರು Bangalore: ಇತ್ತೀಚಿನ ದಿನಗಳಲ್ಲಿ ಕೆಲವು ಸ್ಟೋರಿಗಳು ಮನಸ್ಸನ್ನ ಸೆಳೆಯುತ್ತವೆ. ಅವುಗಳಲ್ಲಿ ಇದೊಂದು ಸ್ಟೋರಿ ಜನರನ್ನ ಹೆಚ್ಚು ಸೆಳೆದಿದ್ದಂತೂ ನಿಜ. ನೀವೆಲ್ಲಾದರೂ ಡ್ರೈವರ್ ಇಲ್ಲದೇ ಕಾರು ಚಲಿಸುವುದನ್ನು ನೋಡಿದ್ದೀರಾ?
ಕಾರು ಚಲಿಸಿದರೂ ಅದರಲ್ಲಿ ಜನರು ಕೂತು ಒಂದು ಕಡೆಯಿಂದ ಇನ್ನೊಂದು ಕಡೆ ಕಾರಲ್ಲಿ ಡ್ರೈವರ್ ಇಲ್ಲದೇ ಚಲಿಸಬಹುದು ಎಂಬುದನ್ನು ನೀವು ನಂಬುತ್ತೀರಾ?. ಮತ್ತೆಲ್ಲೂ ಅಲ್ಲ, ನಮ್ಮ ಬೆಂಗಳೂರಿನಲ್ಲಿ ಕಂಡು ಬಂದ ದೃಶ್ಯ ಇದು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ವಿಡೀಯೋವೊಂದು ಸಕತ್ ವೈರಲ್ ಆಗುತ್ತಿದೆ. ವಾಹನದೊಳಗೆ ಸ್ವಾಮೀಜಿಯೋರ್ವರು ಆರಾಮವಾಗಿ ಕುಳಿತು ಸುತ್ತಲ ಪರಿಸರವನ್ನು ಪರಿಶೀಲಿಸುತ್ತಾ, ತಮ್ಮ ಜೊತೆ ಇರುವವರೊಂದಿಗೆ ಮಾತನಾಡುತ್ತಾ, ಡ್ರೈವರ್ ರಹಿತ ಕಾರಿನಲಿ ಚಲಿಸುತ್ತಿರುವುದನ್ನು ನೀವು ನೋಡಬಹುದು.
ಬೆಂಗಳೂರಿನ ಕಾಲೇಜುವೊಂದರಲ್ಲಿ ಚಾಲಕ ರಹಿತ ಕಾರು ಚಲಿಸುವ ವಿಡಿಯೋ ಇದಾಗಿದ್ದು, ಇದು ತಂತ್ರಜ್ಞಾನ ಮತ್ತು ಈ ಕಾರಿನ ತಯಾರಕರತ್ತ ಗಮನ ಸೆಳೆಯುತ್ತಿದೆ. ʼಬೆಂಗಳೂರಿನಲ್ಲಿ ವಿಪ್ರೋ, ಐಐಎಸ್ಸಿ ಮತ್ತು ಆರ್‌ವಿ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿದ ಚಾಲಕರಹಿತ ಕಾರು ಅನಾವರಣಗೊಂಡಿದೆ. ಇದು ಭಾರತೀಯ ರಸ್ತೆಗಳಿಗೆ ಸೂಕ್ತವೇ?ʼ ಎಂಬ ಟೈಟಲ್‌ನೊಂದಿಗೆ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಕಾಣಿಸುತ್ತಿರುವ ಸ್ವಾಮೀಜಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಎಂದು ಗುರುತಿಸಲಾಗಿದೆ. ಅವರು ಆರ್.ವಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆಹಿಡಿಯಲಾದ ವಿಡಿಯೋ ಇದಾಗಿದೆ.
ಈ ಯೋಜನೆ ಅಭಿವೃದ್ಧಿಯ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. NDTV ವರದಿಯ ಪ್ರಕಾರ ಕಾರು ಸಂಪೂರ್ಣವಾಗಿ ಸಿದ್ಧವಾದ ನಂತರ ಸುರಕ್ಷಿತವಾಗಿ ಮತ್ತು ಸರಾಗವಾಗಿ ಕಾರ್ಯನಿರ್ವಹಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಭಾತರದ ರಸ್ತೆಯ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗುತ್ತಿದೆ.
ಈ ಉಪಕ್ರಮವು Indian Institute of Science (IISc), and RV College of Engineering under the WIRIN (Wipro – IISc Research and Innovation Network) ಕಾರ್ಯಕ್ರಮದ ಸಹಯೋಗದ ಪ್ರಯತ್ನವಾಗಿದೆ. WIRIN ಸಂಶೋಧನೆ, ನಾವಿನ್ಯತೆ ಮತ್ತು ಪ್ರಾಯೋಗಿಕ ಅನ್ವಯಿಕಗಳ ಮೂಲಕ ಮುಂದಿನ ಪೀಳೆಗೆಯ ತಂತ್ರಜ್ಞಾನಗಳನ್ನು ಮುನ್ನಡೆಸುವತ್ತ ಗಮನವಹಿಸುತ್ತಿದೆ.



