Viral News : ಭಾರೀ ಮಳೆಯಲ್ಲೂ ರಸ್ತೆ ಬದಿಗಿಡಗಳಿಗೆ ನೀರುಣಿಸಿದ ಪೌರ ಕಾರ್ಮಿಕ, ವಿಡಿಯೋ ವೈರಲ್
ಣೆಯ ಮುನ್ಸಿಪಲ್ ಕಾರ್ಪೋರೇಷನ್ ಕಾರ್ಮಿಕ ಮಳೆಯ ನಡುವಲ್ಲೇ ತನ್ನ ನಿತ್ಯದ ಕರ್ತವ್ಯವನ್ನು ಮರೆಯಲಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ. ಮಳೆ ಬರುತ್ತಿರುವಾಗ ಗಿಡಗಳಿಗೆ ನೀರು ಹರಿಸೋ ಅವಶ್ಯಕತೆ ಇಲ್ಲಾ ಅನ್ನೋ ಕನಿಷ್ಠ ಜ್ಞಾನವೂ ಕಾರ್ಮಿಕರಿಗೆ ಇಲ್ಲದಾಯ್ತೇ ಎಂದು ಪ್ರಶ್ನಿಸುತ್ತಿದ್ದಾರೆ.

Viral : ಎಲ್ಲೆಡೆಯಲ್ಲಿಯೂ ಮುಂಗಾರು ಮಳೆ ಆರ್ಭಟಿಸುತ್ತಿದೆ. ಅದ್ರಲ್ಲೂ ಪುಣೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಕೂಡ ಪೌರ ಕಾರ್ಮಿಕನೋರ್ವ ರಸ್ತೆ ಬದಿಯಲ್ಲಿರುವ ಗಿಡಗಳಿಗೆ ನೀರು ಉಣಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಸದ್ಯ ಮಳೆಯಲ್ಲಿ ನೆನೆದುಕೊಂಡು ಗಿಡಗಳಿಗೆ ನೀರು ಉಣಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಣೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಭಾರೀ ಮಳೆಯಾಗುತ್ತಿದೆ. ಮಳೆ ಸುರಿಯುತ್ತಿದ್ದರೂ ಕೂಡ ಪೌರ ಕಾರ್ಮಿಕನೋರ್ವ ರಸ್ತೆ ವಿಭಜಕದ ನಡುವಿನಲ್ಲಿರುವ ಗಿಡಗಳಿಗೆ ಟ್ಯಾಂಕರ್ ಸಹಾಯದಿಂದ ನೀರುಣಿಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಡಿದಾಡುತ್ತಿದ್ದಂತೆಯೇ ನೆಟ್ಟಿಗರು ಖುಷಿಯಾಗಿದ್ದಾರೆ, ಮಾತ್ರವಲ್ಲ ಅಚ್ಚರಿಯನ್ನೂ ವ್ಯಕ್ತಪಡಿಸಿದದಾರೆ.
ಆದರೆ ಪುಣೆಯ ಮುನ್ಸಿಪಲ್ ಕಾರ್ಪೋರೇಷನ್ ಕಾರ್ಮಿಕ ಮಳೆಯ ನಡುವಲ್ಲೇ ತನ್ನ ನಿತ್ಯದ ಕರ್ತವ್ಯವನ್ನು ಮರೆಯಲಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ. ಮಳೆ ಬರುತ್ತಿರುವಾಗ ಗಿಡಗಳಿಗೆ ನೀರು ಹರಿಸೋ ಅವಶ್ಯಕತೆ ಇಲ್ಲಾ ಅನ್ನೋ ಕನಿಷ್ಠ ಜ್ಞಾನವೂ ಕಾರ್ಮಿಕರಿಗೆ ಇಲ್ಲದಾಯ್ತೇ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನೂ ಕೆಲವರು ಮಳೆಗಾಲದಲ್ಲಿಯೂ ಗಿಡಗಳಿಗೆ ನೀರು ಉಣಿಸಲು ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರಾ ? ಈ ಕುರಿತು ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಅಂತಾನೂ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮಳೆಗಾಲದಲ್ಲಿಯೂ ನೀರುಣಿಸಿ ಜನ ಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡಬೇಡಿ ಅಂತಾನೂ ಹೇಳ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಈ ಬಾರಿ ಮುಂಗಾರು ಮಳೆ ಆರ್ಭಟಿಸುತ್ತಿದೆ. ಪುಣೆ ಸುತ್ತಮುತ್ತಲಿನ ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಮಳೆಯ ಎಚ್ಚರಿಕೆಯನ್ನ ನೀಡಿದೆ.
ಪುಣೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಲೆಯಿಂದಾಗಿ ಬಾರೀ ಅನಾಹುತಗಳು ಕೂಡ ಸಂಭವಿಸಿದೆ. ಅದ್ರಲ್ಲೂ ಹಲವು ಪ್ರದೇಶಗಳಲ್ಲಿ ಭೂಕುಸಿತ, ಜಲಾವೃತ ಮತ್ತು ಸಂಚಾರ ಅಡಚಣೆಗಳು ಉಂಟಾಗಿದ್ದು, ಅಧಿಕಾರಿಗಳು ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುರಕ್ಷತಾ ಸಲಹೆಗಳನ್ನು ನೀಡಿದ್ದಾರೆ.
Viral News Civic workers water roadside plants in Pune in heavy rain vedio viral

