ಬ್ರೇಕ್ ಬದಲಿಗೆ ಆಕ್ಸಿಲರೇಟರ್ ತುಳಿದ ಮಹಿಳೆ! ಮಗುವಿನೊಂದಿಗೆ ಈಜುಕೊಳಕ್ಕೆ ಬಿದ್ದ ಕಾರು

Viral News: 38 ವರ್ಷದ ಮಹಿಳೆಯೊಬ್ಬರು ಚಾಲನೆಯ ನಿಯಂತ್ರಣ ತಪ್ಪಿ, ತನ್ನ ಐದು ವರ್ಷದ ಮಗಳಿದ್ದ ಕಾರನ್ನು ನೇರವಾಗಿ ಈಜುಕೊಳದ ಒಳಕ್ಕೆ ಚಲಾಯಿಸಿದ್ದಾರೆ. ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ, ಅವರು ಬ್ರೇಕ್ ಒತ್ತುವ ಬದಲಿಗೆ ಆಕಸ್ಮಿಕವಾಗಿ ಆಕ್ಸಿಲರೇಟರ್ ತುಳಿದಿದ್ದರಿಂದ ಕಾರು ವೇಗವಾಗಿ ನುಗ್ಗಿ ಗಾಜಿನ ಗೋಡೆಯನ್ನು ಪುಡಿಮಾಡಿಕೊಂಡು ಈಜುಕೊಳದ ನೀರಿಗೆ ಬಿದ್ದಿದೆ.

ದಕ್ಷಿಣ ಫ್ರಾನ್ಸ್‌ನ ಲಾ ಸಿಯೋಟಾಟ್ ಪಟ್ಟಣದ ಪಾಲ್-ಎಲುಯಾರ್ಡ್ ಮುನ್ಸಿಪಲ್ ಈಜುಕೊಳದಲ್ಲಿ ಕಳೆದ ಗುರುವಾರ ರಾತ್ರಿ ಆಘಾತಕಾರಿ ಘಟನೆಯೊಂದು ನಡೆದಿದೆ.

ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಅಲ್ಲಿನ ಇಬ್ಬರು ಜೀವರಕ್ಷಕರು (ಲೈಫ್‌ಗಾರ್ಡ್‌ಗಳು) ಮತ್ತು ಸ್ಥಳೀಯ ವ್ಯಕ್ತಿಯೊಬ್ಬರು ನೀರಿಗೆ ಜಿಗಿದು ಕಾರಿನೊಳಗೆ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆದರೂ ತೀವ್ರ ಆಘಾತಕ್ಕೊಳಗಾಗಿದ್ದ ತಾಯಿ ಮತ್ತು ಮಗುವನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಈಜುಕೊಳಕ್ಕೆ ಬಿದ್ದಿರುವ ಕಾರನ್ನು ಹೊರತೆಗೆಯಲು ಮತ್ತು ಹಾನಿಗೊಳಗಾದ ಕಟ್ಟಡದ ದುರಸ್ತಿಗಾಗಿ ಈಜುಕೊಳವನ್ನು ಕೆಲವು ವಾರಗಳ ಕಾಲ ಮುಚ್ಚಲು ನಗರ ಆಡಳಿತ ನಿರ್ಧರಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories