Text Neck Syndrome : ವರ್ಕ್​ ಫ್ರಮ್​ ಹೋಮ್​ನಲ್ಲಿರುವವರು ಮಾಡಲೇಬೇಕಾದ ಆಸನಗಳಿವು 

Text Neck Syndrome:ಕೊರೊನಾ ಸಾಂಕ್ರಾಮಿಕ ವಿಶ್ವಕ್ಕೆ ಬಂದು ವಕ್ಕರಿಸಿ 2 ವರ್ಷಗಳೇ ಕಳೆದಿದೆ. ಕೊರೊನಾ ವೈರಸ್​ ಆರಂಭದಲ್ಲಿ ಅನೇಕ ಕಚೇರಿಗಳಿಗೆ ವರ್ಕ್​ ಫ್ರಾಮ್​ ಹೋಮ್​ ನೀಡಲಾಗಿತ್ತು. ಅನೇಕ ಕಂಪನಿಗಳು ಇದೀಗ ಕಚೇರಿಗೆ ಮರಳುವಂತೆ ಸಿಬ್ಬಂದಿಗೆ ಕೇಳುತ್ತಿದ್ದರೂ ಸಹ ಅನೇಕ ಕಂಪನಿಗಳು ಈಗಲೂ ಕೂಡ ವರ್ಕ್​ ಫ್ರಾಮ್​ ಹೋಮ್​ನ್ನೇ ಮುಂದುವರಿಸಿವೆ. ಆದರೆ ಮನೆಯಲ್ಲಿ ಕೆಲಸ ಮಾಡುವುದು ಒಳ್ಳೆಯದೇ ಆಗಿದ್ದರೂ ಸಹ ಕೆಲಸಕ್ಕೆ ಕುಳಿತುಕೊಳ್ಳುವ ಭಂಗಿ ಸರಿಯಿಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ಕುತ್ತಿಗೆ ಹಾಗೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ಎಷ್ಟೇ ಬಾರಿ ಆಸ್ಪತ್ರೆಗೆ ಅಲೆದರೂ ಸಹ ಇದರಿಂದ ಹೆಚ್ಚಿನ ಪರಿಹಾರ ಸಿಗುವುದಿಲ್ಲ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಯೋಗಾಸನದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಚಕ್ರವಾಸನ :


ಬೆನ್ನು ನೋವಿನಿಂದ ಪಾರಾಗಲು ಹಾಗೂ ಬೆನ್ನು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಯೋಗಾಸನಗಳಲ್ಲಿ ಇದು ಒಂದಾಗಿದೆ. ಮಂಡಿಯೂರಿ ಕುಳಿತುಕೊಳ್ಳಿ. ಬಳಿಕ ಪ್ರಾಣಿಗಳಿಂತೆ ನಿಂತುಕೊಳ್ಳಿ. ಉಸಿರನ್ನು ಹೊರ ಹಾಕುವಾಗ ಬೆನ್ನನ್ನು ಬಿಲ್ಲಿನಂತೆ ಬಾಗಿಸಿ. ಉಸಿರನ್ನು ಒಳಗೆ ಎಳೆದುಕೊಳ್ಳುವಾಗ ಬೆನ್ನನ್ನು ಸಡಿಲಗೊಳಿಸಿ. 10 ರಿಂದ 12 ಬಾರಿ ಇದನ್ನು ರಿಪೀಟ್​ ಮಾಡಿ.

ಉತ್ತನಾಸನ :

ನಿಮ್ಮ ಪಾದಗಳಿಗೆ ಬಾಗಿ ಕೈಯನ್ನು ತಾಗಿಸುವ ಮೂಲಕ ಈ ಯೋಗಾಸವನ್ನು ಮಾಡಬೇಕು. ಇದು ಬೆನ್ನು ಮೂಳೆ ಹಾಗೂ ಮೊಣಕಾಲುಗಳ ಬಲವನ್ನು ಸುಧಾರಿಸಲು ಬಯಸುವವರಿಗೆ ಅತ್ಯಂತ ಪ್ರಯೋಜನಕಾರಿ ಭಂಗಿಯಾಗಿದೆ.


ನಿಮ್ಮ ಪಾದವನ್ನು ಒಂದರಪಕ್ಕ ಒಂದು ತಾಗಿಸಿ ನಿಲ್ಲಿಸಿ. ಉಸಿರನ್ನು ಒಳಗೆ ತೆಗೆದುಕೊಳ್ಳುವ ವೇಳೆಯಲ್ಲಿ ನಿಮ್ಮ ಕೈಗಳು ತಲೆಯ ಮೇಲಿರಲಿ. ಹೆಗಲಿನಿಂದ ಕೈಗಳು ನೇರವಾಗಿ ಮೇಲ್ಮುಖವಾಗಿ ಇರಬೇಕು. ಉಸಿರನ್ನು ಹೊರಬಿಡುವಾಗ ಸೊಂಟದಿಂದ ಮುಂದಕ್ಕೆ ಬಾಗಿ ಅಂಗೈನ ಪಾದಗಳ ಎರಡೂ ಬದಿಗಳನ್ನು ನೆಲದ ಮೇಲೆ ಇರಿಸಿ. ನಿಮ್ಮ ಎದೆಯನ್ನು ನಿಮ್ಮ ತೊಡೆಯ ಕಡೆಗೆ ಸರಿಸಿ ಮತ್ತು ಸೊಂಟ ಮತ್ತು ಬೆನ್ನಿನ ಮೂಳೆಯನ್ನು ಮೇಲಕ್ಕೆತ್ತಿ.ಉಸಿರನ್ನು ಬಿಟ್ಟ ಬಳಿಕ ಸಾಮಾನ್ಯ ಸ್ಥಿತಿಗೆ ಮರಳಿ.

ಇದನ್ನು ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

ಇದನ್ನೂ ಓದಿ : ಗಂಭೀರ್ ಆರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ರಾಹುಲ್, ಕೊಹ್ಲಿಯೇ ಇಲ್ಲ

Text Neck Syndrome: How to Correct Your Posture Through Yoga

Comments are closed.