ಲಕ್ನೋ : ವಿಶ್ವಕಪ್‌ನಲ್ಲಿಂದು (World Cup 2023) ಸೋತವರ ಕಾದಾಟ. ಅತೀ ಹೆಚ್ಚು ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದೇ ಗೆಲುವು ದಾಖಲಿಸಿಲ್ಲ, ಇನ್ನೊಂದೆಡೆಯಲ್ಲಿ ಸೋಲನ್ನೇ ಕಂಡಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ (World Cup Points Table) ಖಾತೆಯನ್ನೇ ತೆರೆದಿಲ್ಲ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ( Australia vs Srilanka ) ತಂಡಗಳು ಲಕ್ನೋದಲ್ಲಿ ಮುಖಾಮುಖಿಯಾಗುತ್ತಿವೆ.
ಲಕ್ನೋದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯುವ ವಿಶ್ವಕಪ್‌ನ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗುತ್ತಿವೆ. ವಿಶ್ವಕಪ್ ಇದುವರೆಗೆ 2 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ಎರಡೂ ಪಂದ್ಯಗಳನ್ನು ಹೀನಾಯವಾಗಿ ಸೋತು ವಿಶ್ವಕಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ : ಮಾಜಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಐತಿಹಾಸಿಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ
ಸತತ ಸೋಲನ್ನೇ ಕಂಡಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ಪೈಕಿ ಒಂದು ತಂಡ ವಿಶ್ವಕಪ್‌ನಲ್ಲಿ ಇಂದು ಖಾತೆ ತೆರೆಯಲಿದೆ. ಶ್ರೀಲಂಕಾ ತಂಡಕ್ಕೆ ಮೂರನೇ ಪಂದ್ಯದ ಆರಂಭಕ್ಕೂ ಮೊದಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಶ್ರೀಲಂಕಾ ನಾಯಕ ದಸುನ್ ಶನಕ (D Shanaka) ಗಾಯಗೊಂಡು ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದಾರೆ.
ಶ್ರೀಲಂಕಾ ತಂಡ ಇಂದು ಕುಶಲ್ ಮೆಂಡಿಸ್ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಇನ್ನೊಂದೆಡೆಯಲ್ಲಿ ಕುಶಲ್ ಪೆರೆರಾ ಒಂದೂ ಪಂದ್ಯದಲ್ಲಿಯೂ ಸಿಡಿದಿಲ್ಲ. ಡಿಸಿಲ್ವಾ, ಅಸಲಂಕಾ, ಕುಶಲ್ ಮೆಂಡಿಸ್ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. ಮದುಶನಕ ಬೌಲಿಂಗ್‌ನಲ್ಲಿ ಜಾದೂ ಮಾಡುತ್ತಿಲ್ಲ. ಒಂದೊಮ್ಮೆ ಶ್ರೀಲಂಕಾ ತಂಡವಾಗಿ ಆಡಿದ್ರೆ ಆಸ್ಟ್ರೇಲಿಯಾ ವಿರುದ್ದ ಗೆಲುವ ಕಾಣಲಿದೆ.
ಇದನ್ನೂ ಓದಿ : ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್ ಗಿಲ್ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್ ರೋಚಕ ಸ್ಟೋರಿ
ಇನ್ನು ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟಿಂಗ್ ಕೈಕೊಡುತ್ತಿದೆ. ಜೊತೆಗೆ ಬೌಲಿಂಗ್‌ನಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಸ್ಟೀವಾ, ಗಿಲ್ ಕ್ರಿಸ್ಟ್, ರಿಕಿಪಾಂಟಿಂಗ್ ಅವರಂತ ಶ್ರೇಷ್ಟ ಆಟಗಾರರು ಅತೀ ಹೆಚ್ಚು ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿದ್ದಾರೆ. ಆದರೆ ಪ್ರಸ್ತುತ ವಿಶ್ವಕಪ್‌ನಲ್ಲಿ ಕಾಂಗಾರೋ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
😮
The five-time champions, Australia are currently at the bottom of the points table. https://t.co/2mLZwwLh1C
Did you see that coming?#ICCWorldCup2023 pic.twitter.com/1HehlEeKEX
— Cricbuzz (@cricbuzz) October 15, 2023
ಇನ್ನು ಲಕ್ನೋ ಮೈದಾನ ಬ್ಯಾಟಿಂಗ್‌ಗೆ ಸ್ನೇಹಿಯಾಗಿದೆ. ಇದೇ ಮೈದಾನದಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಖ್ಯಾತಿ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ದ ದಕ್ಷಿಣ ಆಫ್ರಿಕಾ 311/7 ರನ್ ಗಳಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಈ ಮೈದಾನದಲ್ಲಿ ಹರಿದು ಬಂದ ಗರಿಷ್ಠ ಮೊತ್ತವಾಗಿದೆ. ಆದ್ರೆ ಆಸ್ಟ್ರೇಲಿಯಾ ತಂಡ 177 ರನ್ ಗಳಿಗೆ ಆಲೌಟ್ ಆಗಿತ್ತು.

ಇನ್ನು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಲಕ್ನೋ ಮೈದಾನದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿ ಆಗಲಿವೆ. ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ನೆರವು ನೀಡಲಿದೆ. ಹೀಗಾಗಿ ಎರಡೂ ತಂಡಗಳಿಗೂ ಗೆಲುವಿನ ಅವಕಾಶವಿದೆ.
ಇದನ್ನೂ ಓದಿ : ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್
ಆಸ್ಟ್ರೇಲಿಯಾ (Austraila Playing XI ) ಸಂಭಾವ್ಯ ತಂಡ :
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಶ್ರೀಲಂಕಾ ( Srilanka Playing XI ಸಂಭಾವ್ಯ ತಂಡ:
ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ದುಶಾನ್ ಹೇಮಂತ/ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ/ಲಹಿರು ಕುಮಾರ್.
ವಿಶ್ವಕಪ್‌ಗೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು:
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್(ನಾಯಕ/ ವಿಕೆಟ್ ಕೀಪರ್), ಸದೀರ ಸಮರವಿಕ್ರಮ(ವಿಕೆಟ್ ಕೀಪರ್), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದುಶನ್ ಹೇಮಂತ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಮಥೀಶ ಪತಿರಾನ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ಕಸುನ್ ಕುಮಾರ, ಚಾಮಿಕಾ ಕರುಣರತ್ನೆ, ದಿಮುತ್ ಕರುಣರತ್ನೆ
ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ , ಕ್ಯಾಮರೂನ್ ಗ್ರೀನ್
Australia vs Srilanka ICC World Cup 2023 today match today Shanak Out Kushal mendis New Captian Srilanka and Austraila Playing XI