ಏಕದಿನ ವಿಶ್ವಕಪ್‌ನಲ್ಲಿ (World Cup 2023) ಭಾರತ ಅದ್ಬುತ ಆಟದ ಪ್ರದರ್ಶನ ನೀಡಿದೆ. ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (Chase Master Virat Kohli) ಭಾರತಕ್ಕೆ ಭರ್ಜರಿಗೆ ಗೆಲುವು ತಂದು ಕೊಂಡಿದ್ದಾರೆ. ಭಾರತೀಯರು ವಿರಾಟ್ ಕೊಹ್ಲಿ ಅವರ ಆಟಕ್ಕೆ ಫಿದಾ ಆಗಿದ್ದಾರೆ. ಆದರೆ ಕಿಂಗ್ ಕೊಹ್ಲಿ ವಿರುದ್ದ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ (India vs Newzealand)ಪಂದ್ಯದಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಸತತ ಐದು ಗೆಲುವು ದಾಖಲಿಸಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ವಿರುದ್ದ ಆರ್ಭಟಿಸಿದ್ದರು. ಈ ಮೂಲಕ ಭಾರತ ನ್ಯೂಜಿಲೆಂಡ್ ನೀಡಿದ 274 ರನ್ ಬಾರಿಸುವಲ್ಲಿ ಯಶಸ್ಸಿಯಾಗಿದೆ.

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕ ವಿಕೆಟ್‌ಗೆ 71 ರನ್ ಜೊತೆಯಾಟ ಆಡಿದ್ದಾರೆ. ರೋಹಿತ್ ಶರ್ಮಾ 40 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 46 ರನ್ ಬಾರಿಸಿದ್ರೆ, ಶುಭಮನ್ ಗಿಲ್ 26 ರನ್ ಬಾರಿಸಿದ್ದಾರೆ. ನಂತರ ಶ್ರೇಯಸ್ ಅಯ್ಯರ್ 33, ಕೆಎಲ್ ರಾಹುಲ್ 27 ರನ್ ಬಾರಿಸಿ ನಿರಾಸೆ ಮೂಡಿಸಿದ್ರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ತಂಡಕ್ಕೆ ನೆರವಾದ್ರು.
ಇದನ್ನೂ ಓದಿ : IND Vs BAN : ಸಂಕಷ್ಟಕ್ಕೆ ಸಿಲುಕಿದ ರೋಹಿತ್ ಶರ್ಮಾ : ಭಾರತ ತಂಡ ನಾಯಕನ ವಿರುದ್ದ ದಾಖಲಾಯ್ತು 3 ಪ್ರಕರಣ
ಒಂದೆಡೆಯಲ್ಲಿ ಸಾಲು ಸಾಲು ವಿಕೆಟ್ ಉರುಳುತ್ತಿದ್ದರೂ ಕೂಡ ವಿರಾಟ್ ಕೊಹ್ಲಿ ರನ್ ಬಾರಿಸುತ್ತಲೇ ಸಾಗಿದ್ದರು. 104 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 65 ರನ್ ಬಾರಿಸಿದ್ದಾರೆ. ಆದರೆ ಶತಕಗಳಿಸಲು ಐದು ರನ್ ಬೇಕಾಗಿದ್ದಾಗಲೇ ಅವರು ಮ್ಯಾಟ್ ಹೆನ್ರಿ ಎಸೆತದಲ್ಲಿ ಔಟ್ ಆಗಿದ್ದಾರೆ.

ವಿರಾಟ್ ಕೊಹ್ಲಿ ಆಟಕ್ಕೆ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆದರೆ ಕೊಹ್ಲಿ ಅಭಿಮಾನಿಗಳು ಮಾತ್ರ ಚೇಸ್ ಮಾಸ್ಟರ್ ವಿರುದ್ದ ಗರಂ ಆಗಿದ್ದಾರೆ. ಕೇವಲ ಐದು ರನ್ ಗಳಿಸಿದ್ರೆ ಮತ್ತೊಂದು ಐತಿಹಾಸಿಕ ಶತಕ ಬಾರಿಸಬಹುದಿತ್ತು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಶತಕ ಸಾಧನೆಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನೇ ಕೊಹ್ಲಿ ಅಳಿಸಿ ಹಾಕಿದ್ದಾರೆ.
A crucial FIFTY partnership comes up!
Virat Kohli 🤝 Ravindra Jadeja#TeamIndia need 31 more off 42!
Follow the match ▶️ https://t.co/Ua4oDBM9rn#CWC23 | #MenInBlue | #INDvNZ pic.twitter.com/J7F6s3gNV6
— BCCI (@BCCI) October 22, 2023
ಇನ್ನು ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ನಡೆಸಿದೆ. ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿದ್ದರೂ ಕೂಡ ನಂತರ ಬಂದ ಡೇರಿಲ್ ಮಿಚೆಲ್ ಹಾಗೂ ಸಚಿನ್ ರವೀಂದ್ರ ಅದ್ಬುತ ಆಟದ ಪ್ರದರ್ಶನ ನೀಡಿದ್ದಾರೆ. ಡೇರಿಲ್ ಮಿಚೆಲ್ ಅಮೋಘ 130 ರನ್ ಗಳಿಸಿದ್ರೆ, ರಚಿನ್ ರವೀಂದ್ರ 75 ರನ್ ಬಾರಿಸಿದ್ದಾರೆ.
ಇದನ್ನೂ ಓದಿ : ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್
ಆದರೆ ಭಾರತದ ವೇಗಿ ಮೊಹಮ್ಮದ್ ಶೆಮಿ ನ್ಯೂಜಿಲೆಂಡ್ ಆಟಗಾರರಿಗೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಮೊಹಮ್ಮದ್ ಶಮಿ ಒಟ್ಟು 10 ಓವರ್‌ಗಳಲ್ಲಿ 5/54 ಪಡೆಯುವ ಮೂಲಕ ಬೃಹತ್ ಮೊತ್ತ ಪೇರಿಸುವ ನ್ಯೂಜಿಲೆಂಡ್ ಕನಸನ್ನು ಭಗ್ನ ಮಾಡಿದ್ದಾರೆ. ಅಂತಿಮ ಹಂತದಲ್ಲಿ ಸಾಲು ಸಾಲು ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದ್ದರು.
ಇನ್ನು ವಿರಾಟ್ ಕೊಹ್ಲಿ ಅವರ ಬಗ್ಗೆ ಅಭಿಮಾನಿಗಳ ಪ್ರತಿಕ್ರೀಯೆ ಹೀಗಿದೆ.
𝐂𝐥𝐮𝐭𝐜𝐡 𝐊𝐎𝐇𝐋𝐈 💙
🇮🇳 will forever remember this 9⃣5⃣ 🥺#ViratKohli #CWC2023 #INDvNZ pic.twitter.com/Ufx28A1cGt
— Delhi Capitals (@DelhiCapitals) October 22, 2023
The caption is in the picture. 🐐 pic.twitter.com/AHfP8vemtJ
— Lucknow Super Giants (@LucknowIPL) October 22, 2023
Chase master Virat Kohli as India win against New Zealand Fans go gaga