ಸೋಮವಾರ, ಏಪ್ರಿಲ್ 28, 2025
HomeSportsCricketIPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?

IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?

- Advertisement -

IPL 2024 Rishabh Pant Impact Player : ಭಾರತ ಕ್ರಿಕೆಟ್‌ ತಂಡ ವಿಕೆಟ್‌ ಕೀಪರ್‌ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (indian premier league 2024 )ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾಜಿ ನಾಯಕ ರಿಷಬ್‌ ಪಂತ್‌ ಮತ್ತೆ ಐಪಿಎಲ್‌ ಅಂಗಳಕ್ಕೆ ಇಳಿಯಲಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಇಂಪ್ಯಾಕ್ಟ್‌ ಪ್ಲೇಯರ್‌ ಆಗುವುದು ಖಚಿತ ಎನ್ನಲಾಗುತ್ತಿದೆ.

ಟೀಂ ಇಂಡಿಯಾದ ಖಾಯಂ ಆಟಗಾರನಾಗಿದ್ದ ರಿಷಬ್‌ ಪಂತ್‌, ಡಿಸೆಂಬರ್ 2022 ರಲ್ಲಿ ಅವರ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಕಳೆದ ನವೆಂಬರ್‌ ತಿಂಗಳಿನಲ್ಲಿ ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸೌರವ್‌ ಗಂಗೂಲಿ ಮತ್ತು ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಕೂಡ ಉಪಸ್ಥಿತಿರಿದ್ದರು.

indian premier league 2024 IPL 2024 Rishabh Pant Impact Player For Delhi Capitals
Image Credit to Original Source

ರಿಷಬ್‌ ಪಂತ್‌ ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆದರೆ ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಮತ್ತೆ ಕ್ರಿಕೆಟ್‌ ವೃತ್ತಿ ಬದುಕಿಗೆ ಅವರು ಮರಳಲಿದ್ದಾರೆ. 26 ವರ್ಷ ಪ್ರಾಯದ ರಿಷಬ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ : BCCI WPL 2024 : ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಹೊಸ ರೂಪ : WPL ಸಮಿತಿ ರಚಿಸಿದ ಬಿಸಿಸಿಐ

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರಿಷಬ್‌ ಪಂತ್‌ ಅವರ ಮೇಲೆ ಒತ್ತಡವನ್ನು ಹೇರದೇ ಇರಲು ಮುಂದಾಗಿದೆ. ಅದಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅವರು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ರೇವ್‌ ಸ್ಪೋಟ್ಸ್ಜ್‌ ವರದಿ ಮಾಡಿದೆ. ರಿಷಬ್‌ ಪಂತ್‌ ಮೇಲೆ ಒತ್ತಡ ಕಡಿಮೆ ಮಾಡುವುದು ತಂಡದ ಮುಖ್ಯ ಉದ್ದೇಶವಾಗಿದೆ.

indian premier league 2024 IPL 2024 Rishabh Pant Impact Player For Delhi Capitals
Image Credit to Original Source

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ2023 ರಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಜಾರಿಗೆ ತರಲಾಗಿತ್ತು. ಪಂದ್ಯದ ನಡುವಲ್ಲೇ ಆಟಗಾರರನ್ನು ಈ ನಿಯಮದ ಮೂಲಕ ಬದಲಾಯಿಸಲು ಅವಕಾಶವಿದೆ. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಳಸುವುದರಿಂದ ವಿಕೆಟ್‌ ಕೀಪಿಂಗ್‌ ಮತ್ತು ಫೀಲ್ಡಿಂಗ್‌ ನಡೆಸುವ ಅಗತ್ಯವಿಲ್ಲ.

ಇದನ್ನೂ ಓದಿ : WPL 2024 ಹರಾಜು : 3 ಆಟಗಾರರನ್ನು ಖರೀಸಿದ RCB, ಕರ್ನಾಟಕದ ಈ ಆಟಗಾರ್ತಿಗೆ 1.3 ಕೋಟಿ ರೂ.

ಆಡುವ ಬಳಗದಲ್ಲಿ ಪಂದ್ಯದ ನಡುವಲ್ಲೇ ಆಟಗಾರರನ್ನು ಬದಲಾಯಿಸಬಹುದಾಗಿದೆ. ರಿಷಬ್‌ ಪಂತ್‌ ಪಂದ್ಯದ ಅಗತ್ಯಕ್ಕೆ ತಕ್ಕಂತೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕೆ ಇಳಿಯುವುದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಅನುಕೂಲಕರವಾಗಲಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ರಿಷಬ್‌ ಪಂತ್‌ ನಾಯಕರಾಗಿದ್ದರು. ಅಲ್ಲದೇ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿ ಮುನ್ನೆಡೆಸಿದ್ದರು.

ರಿಷಬ್ ಪಂತ್ ಐಪಿಎಲ್ 2024 ‌ಭಾಗವಹಿಸುವ ಕುರಿತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕ ಸೌರವ್‌ ಗಂಗೂಲಿ ಅವರು ಖಚಿತ ಪಡಿಸಿದ್ದರು. ಅಲ್ಲದೇ ರಿಷಬ್‌ ಪಂತ್‌ ಈಗ ಕ್ರಿಕೆಟ್‌ ಆಡಲು ಫಿಟ್‌ ಆಗಿದ್ದು, ಮುಂದಿನ ಐಪಿಎಲ್‌ ಋತುವಿನಲ್ಲಿ ಆಡಲಿದ್ದಾರೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ : IPL 2024 Auction : ಐಪಿಎಲ್‌ 2024 ಯಾವ ತಂಡಕ್ಕೆ ಯಾರು ನಾಯಕರು ? ತಂಡಗಳ ಬಳಿ ಬಾಕಿ ಇರುವ ಮೊತ್ತವೆಷ್ಟು ?

indian premier league 2024 IPL 2024 Rishabh Pant Impact Player For Delhi Capitals

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular