ಉಡುಪಿ, ದಕ 21 ಸಾವಿರ ರೇಷನ್‌ ಕಾರ್ಡ್‌ ರದ್ದು : ನಿಮ್ಮ ಹೆಸರು ಇದೆಯಾ ಚೆಕ್‌ ಮಾಡಿ

ಮಂಗಳೂರು / ಉಡುಪಿ : ಅನರ್ಹ ಪಡಿತರ ಚೀಟಿ (Ration Card) ಹೊಂದಿದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇದೀಗ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 21 ಸಾವಿರ ಪಡಿತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ.

ಪಡಿತರ ಚೀಟಿಯ ಜೊತೆಗೆ ಆಧಾರ್‌ ನೋಂದಣಿ ಮಾಡುವುದು ಹಾಗೂ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರೂ ಕೂಡ ಇಕೆವೈಸಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಬಹುತೇಕರು ಈ ಕಾರ್ಯವನ್ನು ಮಾಡಿಸಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಡೆಸಿದ ಪರಿಶೀಲನೆಯಲ್ಲಿ, ಅನೇಕ ಪಡಿತರ ಚೀಟಿದಾರರು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಇಂತವರು ಬಿಪಿಎಲ್‌ (BPL) ಹಾಗೂ ಎಪಿಎಲ್‌ (APL)ಕಾರ್ಡುಗಳನ್ನು ಹೊಂದಲು ಅರ್ಹರಾಗಿಲ್ಲ.

ಅರ್ಹತಾ ಮಾನದಂಡಗಳು: ಸಾಮಾನ್ಯವಾಗಿ, ಬಿಪಿಎಲ್ ಕಾರ್ಡ್‌ಗಳಿಗೆ ಕೆಲವು ನಿರ್ದಿಷ್ಟ ಆದಾಯ ಮಿತಿಗಳು ಮತ್ತು ಆಸ್ತಿ ಮಾನದಂಡಗಳನ್ನು ನಿಗದಿಪಡಿಸಲಾಗುತ್ತದೆ.

Ration Card : ಅರ್ಹತಾ ಮಾನದಂಡವೇನು ?

  • ನಾಲ್ಕು ಚಕ್ರದ ವಾಹನ ಹೊಂದಿರುವವರು.
  • ಸರ್ಕಾರಿ ನೌಕರರು.
  • ಆದಾಯ ತೆರಿಗೆ ಪಾವತಿದಾರರು.
  • 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಹೊಂದಿರುವವರು.
  • ನಿರ್ದಿಷ್ಟ ಆದಾಯಕ್ಕಿಂತ ಹೆಚ್ಚು ಆದಾಯ ಗಳಿಸುವವರು.

ಇಂತಹ ಮಾನದಂಡಗಳನ್ನು ಪೂರೈಸದಿದ್ದರೂ ಸಹ ರೇಷನ್ ಕಾರ್ಡ್‌ಗಳನ್ನು ಪಡೆದವರ ಕಾರ್ಡ್‌ಗಳು ರದ್ದುಗೊಳ್ಳುತ್ತವೆ.

ಇಲಾಖೆಯು ಆಧಾರ್ ಕಾರ್ಡ್‌ಗಳು, ಬ್ಯಾಂಕ್ ಖಾತೆಗಳು, ವಾಹನ ನೋಂದಣಿ ದಾಖಲೆಗಳು ಮತ್ತು ಆದಾಯ ತೆರಿಗೆ ಇಲಾಖೆಯ ಡೇಟಾವನ್ನು ಬಳಸಿಕೊಂಡು ಈ ಪರಿಶೀಲನೆಯನ್ನು ನಡೆಸುತ್ತದೆ. ಕಂದಾಯ ಇಲಾಖೆಯಿಂದಲೂ ಮನೆ ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಲಾಗುತ್ತದೆ.

ಅನರ್ಹರ ಪಡಿತರ ಚೀಟಿಗಳನ್ನು ರದ್ದುಪಡಿಸುವುದರಿಂದ, ನಿಜವಾದ ಅರ್ಹ ಬಡವರಿಗೆ ಪಡಿತರ ಸೌಲಭ್ಯಗಳು ತಲುಪಲು ಸಾಧ್ಯವಾಗುತ್ತದೆ ಮತ್ತು ಸರ್ಕಾರದ ಸಂಪನ್ಮೂಲಗಳ ಸದ್ಬಳಕೆಯಾಗುತ್ತದೆ.

ಇದು ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಾಯ ಮಾಡುತ್ತದೆ. ರದ್ದಾಗುವ ಪಡಿತರ ಚೀಟಿಗಳ ಪಟ್ಟಿಯನ್ನು ಅಂತಿಮಗೊಳಿಸಿ.

ನಂತರ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು ಮತ್ತು ನಂತರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು.

ಈ ಕ್ರಮವು ರಾಜ್ಯಾದ್ಯಂತ ನಡೆಯುತ್ತಿದ್ದು, ಅರ್ಹರಿಗೆ ಮಾತ್ರ ಪಡಿತರ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ.

Ration Card : ಕರ್ನಾಟಕದಲ್ಲಿ 14 ಲಕ್ಷ ಅನರ್ಹ ಪಡಿತರ ಚೀಟಿ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು 2024ರ ಅಕ್ಟೋಬರ್‌ನಲ್ಲಿ ಸುಮಾರು 13.87 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಈ ಗುರುತಿಸಿದ ಕಾರ್ಡ್‌ಗಳಲ್ಲಿ, 3.64 ಲಕ್ಷ ರೇಷನ್ ಕಾರ್ಡ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ ಎಂದು ಸಹ ಸಚಿವರು ತಿಳಿಸಿದ್ದರು. ಇದರಲ್ಲಿ 2,964 ಸರ್ಕಾರಿ ನೌಕರರ ಕಾರ್ಡ್‌ಗಳೂ ಸೇರಿವೆ.

ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ.

ನವೆಂಬರ್ 2024ರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದುಗೊಳಿಸದಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರಣಕ್ಕೂ ಪಡಿತರ ಚೀಟಿ ರದ್ದು ಮಾಡುವಂತಿಲ್ಲ. ಇಂತಹ ಪ್ರಕರಣ ಕಂಡು ಬಂದ್ರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಕರ್ನಾಟಕದಲ್ಲಿ 13.87 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 3.64 ಲಕ್ಷ ಕಾರ್ಡ್‌ಗಳು ಈಗಾಗಲೇ ರದ್ದಾಗಿವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಅಂಕಿ-ಅಂಶಗಳು ಕಾಲಕಾಲಕ್ಕೆ ಬದಲಾಗಬಹುದು.

Ration Card Over 21,000 Ration Card may cancel in DK, Udupi in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories